ವಾರ್ಧಾ(ಮಹಾರಾಷ್ಟ್ರ): ಬರೋಬ್ಬರಿ ಎರಡು ಗಂಟೆಗಳ ಕಾಲ ಬಾಲಕಿ ಕುತ್ತಿಗೆಗೆ ಸುತ್ತಿಕೊಂಡಿದ್ದ ವಿಷಕಾರಿ ಹಾವೊಂದು ಕೊನೆ ಕ್ಷಣದಲ್ಲಿ ಆಕೆಗೆ ಕಚ್ಚಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, 7 ವರ್ಷದ ದಿವ್ಯಾ ಎಂಬ ಬಾಲಕಿ ಹಾವಿನಿಂದ ಕಚ್ಚಿಸಿಕೊಂಡಿದ್ದಾಳೆ.
ಬಾಲಕಿ ಮಲಗಿದ್ದ ಸಂಧರ್ಭದಲ್ಲಿ ಅಲ್ಲಿಗೆ ಬಂದಿರುವ ಹಾವು, ಬಾಲಕಿ ಕೊರಳಿಗೆ ಸುತ್ತಿಕೊಂಡಿದೆ. ಈ ವೇಳೆ ಎಚ್ಚರಗೊಂಡಿರುವ ಬಾಲಕಿ ಪೋಷಕರಿಗೆ ಏನು ಮಾಡಬೇಕು ಎಂಬುದು ಗೊತ್ತಾಗಿಲ್ಲ. ತಕ್ಷಣವೇ ಉರಗತಜ್ಞನಿಗೆ ಫೋನ್ ಮಾಡಿದ್ದಾರೆ.
ಆದರೆ, ಹಾವು ಬಾಲಕಿಯ ಕುತ್ತಿಗೆ ಭಾಗಕ್ಕೆ ಸುತ್ತಿಕೊಂಡಿರುವ ಕಾರಣ ಆತ ಕೂಡ ಅಸಹಾಯಕನಾಗಿದ್ದಾನೆ. ಈ ವೇಳೆ ಮಾಹಿತಿ ಒಬ್ಬರಿಂದ ಮತ್ತೊಬ್ಬರಿಗೆ ಹರಡಿದ್ದು, ಅಲ್ಲಿಗೆ ಆಗಮಿಸಿ ಘಟನೆಯ ವಿಡಿಯೋ ಮಾಡಿದ್ದಾರೆ.
ಇದನ್ನೂ ಓದಿರಿ: ಸಿಎಂ ಸ್ಥಾನಕ್ಕೆ ರೂಪಾನಿ ರಾಜೀನಾಮೆ.. 'ಮೃದು ಸ್ವಭಾವ'ವೇ ಅವರ ರಾಜಕೀಯ ಅಂತ್ಯಕ್ಕೆ ಕಾರಣವಾಯ್ತಾ!?
ಸುಮಾರು ಎರಡು ಗಂಟೆಗಳ ಕಾಲ ವಿಷಕಾರಿ ಹಾವು ಹುಡುಗಿಯ ಕುತ್ತಿಗೆ ಭಾಗಕ್ಕೆ ಸುತ್ತಿ ಕುಳಿತಿದೆ. ಹೀಗಾಗಿ, ಎಲ್ಲರೂ ಅಸಹಾಯಕರಾಗಿದ್ದಾರೆ. ಸುಮಾರು ಎರಡು ಗಂಟೆ ಆದ ಬಳಿಕ ದಿವ್ಯಾ ಎಚ್ಚರಗೊಳ್ಳುತ್ತಿದ್ದಂತೆ ಹಾವು ಆಕೆಯನ್ನ ಕಚ್ಚಿ, ಅಲ್ಲಿಂದ ಸರಸರ ಹರಿದು ಹೋಗಿದೆ.
ತಕ್ಷಣವೇ ಬಾಲಕಿಯನ್ನ ಸಮುದಾಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಬಾಲಕಿ ಸ್ಥಿತಿ ಗಂಭೀರವಾಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.