ಗುರುಗ್ರಾಮ್: ಆಘಾತಕಾರಿ ಘಟನೆಯೊಂದರಲ್ಲಿ ಕೋವಿಡ್ ರೋಗಿಗಳ ಕುಟುಂಬಸ್ಥರು ಆಮ್ಲಜನಕದ ಕೊರತೆಯಿಂದ ತಮ್ಮವರನ್ನು ಕಳೆದುಕೊಂಡಿದ್ದಾರೆ.
ವರದಿಗಳ ಪ್ರಕಾರ, ಏಪ್ರಿಲ್ 30ರಂದು ಗುರುಗ್ರಾಮ್ ಮೂಲದ ಖಾಸಗಿ ಆಸ್ಪತ್ರೆಯಲ್ಲಿ ಕನಿಷ್ಠ ಎಂಟು ರೋಗಿಗಳು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾರೆ.
ವೈರಲ್ ವಿಡಿಯೋದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಐಸಿಯು ಲಾಕ್ ಮಾಡಿದ್ದಾರೆ. ರೋಗಿಗಳ ಆರೋಗ್ಯ ಸ್ಥಿತಿಯ ಬಗ್ಗೆ ಸಂಬಂಧಿಕರಿಗೆ ತಿಳಿಸದೆ ಅವರನ್ನು ಆಸ್ಪತ್ರೆಯಲ್ಲಿ ಬಿಟ್ಟು ಪರಾರಿ ಆಗಿದ್ದಾರೆ ಎಂಬುದನ್ನು ತಿಳಿದು ಕುಟುಂಬದ ಸದಸ್ಯರೊಬ್ಬರು ಆಸ್ಪತ್ರೆಗೆ ನುಗ್ಗಿರುವುದು ಕಾಣಬಹುದು.
ತುರ್ತು ವಾರ್ಡ್‌ಗೆ ಪ್ರವೇಶಿಸಿದ ರೋಗಿಯೊಬ್ಬರ ಸಂಬಂಧಿಕರು ಐಸಿಯು ಹಾಸಿಗೆಗಳಲ್ಲಿ ಮಲಗಿರುವವರನ್ನು ನೋಡುತ್ತಾ... 'ಸತ್ತ, ಸತ್ತ... ಎಂದು ಕೂಗುತ್ತಿರುವ ಧ್ವನಿ ವಿಡಿಯೋದಲ್ಲಿದೆ.