ETV Bharat / bharat

ಮೊಟ್ಟ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯನ್ನು ಗ್ರಾ.ಪಂ ಅಧ್ಯಕ್ಷೆಯಾಗಿ ಆಯ್ಕೆ ಮಾಡಿದ ಶಿವಸೇನೆ - ಮಹಾರಾಷ್ಟ್ರದಲ್ಲಿ ಮುಸ್ಲಿಂ ಮಹಿಳೆ ದಾಖಲೆ

ಹಿಜಾಬ್​ ಧರಿಸುವಿಕೆಯ ವಿವಾದದ ಬಳಿಕ ಕಟ್ಟರ್ ಹಿಂದೂಪರ ನಿಲುವಿರುವ ಶಿವಸೇನೆ ಪಕ್ಷದಿಂದ ಮುಸ್ಲಿಂ ಮಹಿಳೆಯೊಬ್ಬರು ಗ್ರಾಮ ಪಂಚಾಯಿತಿಯ ಅಧಿಕಾರ ಹಿಡಿದಿದ್ದು ವಿಶೇಷವಾಗಿದೆ.

maiden
ಮುಸ್ಲಿಂ ಮಹಿಳೆ
author img

By

Published : Mar 4, 2022, 3:42 PM IST

ರಾಯಗಡ: ಕರ್ನಾಟಕ ಸೇರಿದಂತೆ ದೇಶದಲ್ಲೇ ಭಾರಿ ಸದ್ದು ಮಾಡಿ ಸದ್ಯ ತಣ್ಣಗಾಗಿರುವ ಹಿಜಾಬ್​ ಪ್ರಕರಣದ ಮಧ್ಯೆಯೇ ಮಹಾರಾಷ್ಟ್ರದಲ್ಲಿ ಶಿವಸೇನೆ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿಯೊಬ್ಬರು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದರು.

ಗೃಹಿಣಿಯಾಗಿರುವ ನಜ್ನೀನ್​ ಕೆ. ಪಟೇಲ್​ ಈಗ ರಾಜಕಾರಣಿಯಾಗಿ ಇಲ್ಲಿನ ಅಪ್ಟಾ ಗ್ರಾಮ ಪಂಚಾಯಿತಿಯ ಅಧಿಕಾರದ ಗದ್ದುಗೆ ಏರಿದ್ದಾರೆ. ಅಲ್ಲದೇ ಇದೇ ಮೊದಲ ಬಾರಿಗೆ ಶಿವಸೇನೆ ಮುಸ್ಲಿಂ ಮಹಿಳೆಗೆ ಅಧಿಕಾರ ವಹಿಸಿದೆ. ಅಲ್ಲದೇ, ಈ ಗ್ರಾಮದಲ್ಲಿ 6 ದಶಕಗಳಿಂದ ಆಡಳಿತ ನಡೆಸುತ್ತಿದ್ದ ರೈತ ಮತ್ತು ಕಾರ್ಮಿಕ ಪಕ್ಷ ಸೋಲನುಭವಿಸಿದೆ.

ಮಹಿಳೆಯರಿಗೆ ಮೀಸಲಾಗಿದ್ದ ಅಪ್ಟಾ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ಶಿವಸೇನೆಯಿಂದ ನಜ್ನೀನ್​ ಪಟೇಲ್​ ಸ್ಪರ್ಧಿಸಿ ಇದೀಗ ಅಧಿಕಾರ ವಹಿಸಿಕೊಂಡಿದ್ದಾರೆ. ಬಳಿಕ ಗ್ರಾಮದಲ್ಲಿ ಸಂಭ್ರಮಾಚರಣೆ ಆಚರಿಸಿದ ಮುಸ್ಲಿಂ ಮುಖಂಡರು, ಮಹಿಳೆಯರು ಹಿಜಾಬ್​ ಧರಿಸಿ ಸಿಹಿ ಹಂಚಿದ್ದಾರೆ.

ಅಲ್ಲದೇ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಕೋಲಾಹಲ ಎಬ್ಬಿಸಿದ್ದ ಹಿಜಾಬ್​ ಧರಿಸುವಿಕೆಯ ವಿವಾದದ ಬಳಿಕ ಹಿಂದುಪರ ಒಲವಿರುವ ಶಿವಸೇನೆ ಪಕ್ಷದಿಂದ ಮುಸ್ಲಿಮರೊಬ್ಬರು ಅಧಿಕಾರ ಹಿಡಿದಿತ್ತು ವಿಶೇಷವಾಗಿದೆ.

ಇದನ್ನೂ ಓದಿ: ಉಕ್ರೇನ್​​ನಲ್ಲಿರುವ ಭಾರತೀಯರ ಸ್ಥಳಾಂತರಕ್ಕೆ 130 ಬಸ್ ಸೇವೆ ಕಲ್ಪಿಸಿದ ರಷ್ಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.