ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಂತ್ರಿ ಸೇರಿದಂತೆ ನಾಲ್ವರು ಟಿಎಂಸಿ ನಾಯಕರನ್ನು ಸಿಬಿಐ ಬಂಧಿಸಿರುವುದು ಪಶ್ಚಿಮ ಬಂಗಾಳದಲ್ಲಿ ಹೈ ಡ್ರಾಮಾ ಹುಟ್ಟುಹಾಕಿದೆ. ಸಚಿವರು ಮತ್ತು ನಾಯಕರ ಬಂಧನದ ಬಗ್ಗೆ ಆಕ್ರೋಶಗೊಂಡ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಬಿಐ ಕಚೇರಿಗೆ ಹೋಗಿ ಸಿಬಿಐ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ನಾರದಾ ವಿವಾದ: ಟಿಎಂಸಿ ನಾಯಕರ ಜಾಮೀನಿಗೆ ಕೋಲ್ಕತ್ತಾ ಹೈಕೋರ್ಟ್ ತಡೆ
ನಾರದಾ ಲಂಚ ಪ್ರಕರಣದಲ್ಲಿ ಟಿಎಂಸಿ ಸಚಿವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಸುವೇಂದು ಅಧಿಕಾರಿ ಮತ್ತು ಮುಕುಲರ್ ರಾಯ್ ಹೆಸರು ಸಹ ಕೇಳಿ ಬಂದಿದೆ. ಹೀಗಾಗಿ ಅವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ರಾವತ್ ಪ್ರಶ್ನಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆಗಳು ಮುಗಿದಿವೆ, ಈಗ ರಾಜಕೀಯವನ್ನು ನಿಲ್ಲಿಸಬೇಕು. ಕೊರೊನಾ ಕಂಟ್ರೋಲ್ ಮಾಡಲು ಬಂಗಾಳದಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ. ಇದನ್ನು ಕೇಂದ್ರ ಸರ್ಕಾರ, ಸರ್ಕಾರಿ ಸಂಸ್ಥೆಗಳು, ಭಾರತೀಯ ಜನತಾ ಪಕ್ಷ ಅರ್ಥಮಾಡಿಕೊಳ್ಳಬೇಕು.
ಈಗ ರಾಜಕೀಯವನ್ನು ನಿಲ್ಲಿಸಿ ಬಂಗಾಳದ ಜನರಿಗೆ ಸಹಾಯ ಮಾಡುವ ಸಮಯ. ಮಮತಾ ಬ್ಯಾನರ್ಜಿಯ ಕಿರಿಯ ಸಹೋದರ ಕೊರೊನಾಗೆ ಬಲಿಯಾಗಿದ್ದಾರೆ. ಬಂಗಾಳದಲ್ಲಿ ನೂರಾರು ಜನ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಇಂಥ ಸಮಯದಲ್ಲಿ ನಾರದ ಲಂಚ ಪ್ರಕರಣದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕ್ರಮ ಕೈಗೊಳ್ಳಬೇಕಾದರೆ ನ್ಯಾಯಯುತವಾಗಿ ಕೈಗೊಳ್ಳಬೇಕು. ಸಿಬಿಐ ಕ್ರಮ ತೆಗೆದುಕೊಳ್ಳಲು ಮುಂದಾದರೆ, ಅದು ನ್ಯಾಯಾಲಯದ ಆದೇಶದಂತೆ ಮಾಡಬೇಕೇ ವಿನಃ ಪಕ್ಷವಾಗಿ ಅಲ್ಲ ಎಂದು ರಾವತ್ ಹೇಳಿದ್ರು.