ETV Bharat / bharat

ಹಾಡಹಗಲೇ ಶಿವಸೇನೆ ಹಿಂದೂಸ್ತಾನ್ ಮುಖ್ಯಸ್ಥನಿಗೆ ಗುಂಡಿಕ್ಕಿ ಕೊಲೆ - ಶಿವಸೇನೆ ಹಿಂದೂಸ್ತಾನ್ ಮುಖ್ಯಸ್ಥನಿಗೆ ಗುಂಡಿಕ್ಕಿ ಕೊಲೆ

ಅಮೃತಸರದಲ್ಲಿ ಭಾಷಣ ಮಾಡುತ್ತಿದ್ದಾಗಲೇ ಶಿವಸೇನೆ ಹಿಂದೂಸ್ತಾನ್ ಮುಖ್ಯಸ್ಥ ಸುಧೀರ್ ಸೂರಿ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ.

shiv-sena-hindustan-chief-sudhir-suri-shot-in-amritsar-during-a-speech
ಭಾಷಣ ಮಾಡುತ್ತಿದ್ದ ಶಿವಸೇನೆ ಹಿಂದೂಸ್ತಾನ್ ಮುಖ್ಯಸ್ಥನ ಮೇಲೆ ಗುಂಡಿನ ದಾಳಿ
author img

By

Published : Nov 4, 2022, 4:17 PM IST

Updated : Nov 4, 2022, 4:55 PM IST

ಅಮೃತಸರ (ಪಂಜಾಬ್​): ಪಂಜಾಬ್​ನ ಅಮೃತಸರದಲ್ಲಿ ಹಾಡಹಗಲೇ ಶಿವಸೇನೆ ಹಿಂದೂಸ್ತಾನ್ ಮುಖ್ಯಸ್ಥ ಸುಧೀರ್ ಸೂರಿ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಶುಕ್ರವಾರ ಭಾಷಣ ಮಾಡುತ್ತಿದ್ದಾಗಲೇ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸೂರಿ ವಿರೋಧಿಗಳ ಟಾರ್ಗೆಟ್ ಲಿಸ್ಟ್‌ನಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮೃತಸರದ ಗೋಪಾಲ್ ದೇವಸ್ಥಾನದ ಬಳಿ ಶಿವಸೇನೆ ಮುಖಂಡರೊಂದಿಗೆ ಸುಧೀರ್ ಸೂರಿ ಧರಣಿ ನಡೆಸುತ್ತಿದ್ದರು. ಆಗ ಅಲ್ಲಿ ಶಿವಸೇನೆ ಮುಖಂಡರು ಹಾಗೂ ಹಿಂದೂ ಮುಖಂಡರು ಮುಖಂಡರೊಂದಿಗೆ ವಾಗ್ವಾದ ನಡೆದಿದೆ. ಇದೇ ವೇಳೆ ಅಪರಿಚಿತ ದುಷ್ಕರ್ಮಿ ಸುಧೀರ್ ಸೂರಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಹಾಡಹಗಲೇ ಶಿವಸೇನೆ ಹಿಂದೂಸ್ತಾನ್ ಮುಖ್ಯಸ್ಥನಿಗೆ ಗುಂಡಿಕ್ಕಿ ಕೊಲೆ

ಇದರಿಂದ ಸುಧೀರ್ ಸೂರಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ನಂತರ ತಕ್ಷಣವೇ ಅವರನ್ನು ಫೋರ್ಟಿಸ್​ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಆಸ್ಪತ್ರೆಯಲ್ಲಿ ಸುಧೀರ್ ಸೂರಿ ಸಾವನ್ನಪ್ಪಿದ್ದಾರೆ. ಇತ್ತ, ಘಟನೆಯ ನಂತರ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಇದಕ್ಕೆ ಪ್ರತಿಯಾಗಿ ಮುಖಂಡರೊಬ್ಬರು ಕೂಡ ಗುಂಡು ಹರಿಸಿದ್ದಾರೆ ಎಂದು ಹೇಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: ಕಸ್ಟಡಿಯಲ್ಲಿದ್ದ ಯುವಕನ ಸಾವು: ಸಂಬಂಧಿಕರಿಂದ ಪ್ರತಿಭಟನೆ

Last Updated : Nov 4, 2022, 4:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.