ಮುಂಬೈ: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ತಮ್ಮ ಆತ್ಮಚರಿತ್ರೆ 'ಎ ಪ್ರಾಮಿಸ್ಡ್ ಲ್ಯಾಂಡ್'ನಲ್ಲಿನ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಸೇನೆ ಮುಖಂಡ ಸಂಜಯ್ ರಾವತ್, ಭಾರತದ ಬಗ್ಗೆ ಒಬಾಮರ ಜ್ಞಾನವನ್ನು ಪ್ರಶ್ನಿಸಿದ್ದಾರೆ.
ವಿದೇಶಿ ರಾಜಕಾರಣಿ ಭಾರತೀಯ ರಾಜಕೀಯ ನಾಯಕರ ಬಗ್ಗೆ ಅಂತಹ ಅಭಿಪ್ರಾಯಗಳನ್ನು ನೀಡಲು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕನ ಬಗ್ಗೆ ಒಬಾಮ ಹೇಳಿಕೆ ಹಾಗೂ ಆ ನಂತರ ಸಂಭವಿಸಿದ ದೇಶೀಯ ರಾಜಕೀಯ ವ್ಯಾಖ್ಯಾನವು ಅಸಹ್ಯಕರವಾಗಿದೆ. 'ಟ್ರಂಪ್ ಹುಚ್ಚು' ಎಂದು ನಾವು ಹೇಳುವುದಿಲ್ಲ. ಈ ರಾಷ್ಟ್ರದ ಬಗ್ಗೆ ಒಬಾಮಗೆ ಎಷ್ಟು ಗೊತ್ತು? ಎಂದಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ನಲ್ಲಿ ಪ್ರಕಟವಾದ ಪುಸ್ತಕದ ವಿಮರ್ಶೆಯ ಪ್ರಕಾರ, ರಾಹುಲ್ ಗಾಂಧಿ ಪ್ರಭಾವ ಬೀರಲು ಉತ್ಸುಕನಾಗಿರುವ ವ್ಯಕ್ತಿ. ಆದರೆ ಈ ವಿಷಯವನ್ನು ಕರಗತ ಮಾಡಿಕೊಳ್ಳುವ ಉತ್ಸಾಹವಿಲ್ಲ ಎಂದು ಅಮೆರಿಕದ ಮಾಜಿ ಅಧ್ಯಕ್ಷರು ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.
ಒಬಾಮ ಅಮೆರಿಕ ಅಧ್ಯಕ್ಷರಾಗಿ ಭಾರತಕ್ಕೆ ಬಂದಾಗ ಬಹುಶಃ 8-10 ವರ್ಷಗಳ ಹಿಂದೆ ಕೆಲ ಹೊತ್ತು ಭೇಟಿಯಾಗಿರಬೇಕು. ಕೆಲವೇ ಸಭೆಗಳಲ್ಲಿ ಭಾಗವಹಿಸಿ ಯಾರನ್ನಾದರೂ ನಿರ್ಣಯಿಸುವುದು ಕಠಿಣ. ಅಂದಿನಿಂದ ರಾಹುಲ್ ಗಾಂಧಿ ಅವರ ವ್ಯಕ್ತಿತ್ವ ಬದಲಾಗಿದೆ. ಅವರು ಸಾಕಷ್ಟು ಅನುಭವ ಗಳಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ತಾರಿಕ್ ಅನ್ವರ್ ಹೇಳಿದ್ದಾರೆ.