ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಗ್ಗೆ ವಿವಾದಿತ ಹೇಳಿಕೆ ನೀಡಿ ಬಂಧನಕ್ಕೊಳಗಾಗಿ, ಬಿಡುಗಡೆ ಆಗಿರುವ ಕೇಂದ್ರ ಸಚಿವ ನಾರಾಯಣ್ ರಾಣೆ ಪ್ರಕರಣ ಇದೀಗ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ನಡುವಿನ ಹಗ್ಗ-ಜಗ್ಗಾಟಕ್ಕೆ ಕಾರಣವಾಗಿದೆ. ಇದೇ ವಿಚಾರವನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲೂ ಎರಡು ಪಕ್ಷಗಳ ನಡುವೆ ಜಟಾಪಟಿ ನಡೆಯುತ್ತಿದೆ.
ನಾರಾಯಣ್ ರಾಣೆ ಅವರಿಗೆ ಜಾಮೀನು ಸಿಗುತ್ತಿದ್ದಂತೆ ಅವರ ಮಗ, ಶಾಸಕ ನಿತೀಶ್ ರಾಣೆ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಶಿವಸೇನೆಗೆ ವಾರ್ನ್ ಮಾಡಿರುವ ರೀತಿಯಲ್ಲಿರುವ ವಿಡಿಯೋ ಹಾಕಿದ್ದಾರೆ. 23 ಸೆಕೆಂಡ್ಗಳ ಈ ವಿಡಿಯೋ 'ರಾಜನೀತಿ' ಸಿನಿಮಾದ ತುಣುಕಾಗಿದೆ. ಇದರಲ್ಲಿ ನಟ ಮನೋಜ್ ವಾಜಪೇಯಿ 'ಸರಿಯಾದ ಪ್ರತ್ಯುತ್ತರ ಸಿಗಲಿದೆ' ಎಂದು ಹೇಳಿರುವ ಡೈಲಾಗ್ ಇದೆ.
- — nitesh rane (@NiteshNRane) August 24, 2021 " class="align-text-top noRightClick twitterSection" data="
— nitesh rane (@NiteshNRane) August 24, 2021
">— nitesh rane (@NiteshNRane) August 24, 2021
ಇದಕ್ಕೆ ಟ್ವಿಟರ್ ಮೂಲಕವೇ ತಿರುಗೇಟು ನೀಡಿರುವ ಶಿವಸೇನೆ ವಕ್ತಾರ ಸಂಜಯ್ ರಾವತ್, ನಿತೀಶ್ ರಾಣೆ ಟಾರ್ಗೆಟ್ ಮಾಡಿ ಫೋಟೋವೊಂದನ್ನ ಶೇರ್ ಮಾಡಿದ್ದಾರೆ. ಇದರಲ್ಲಿ ಹುಲಿ ತನ್ನ ಬಾಯಲ್ಲಿ ಕೋಳಿ ಹಿಡಿದುಕೊಂಡಿದೆ. ಇದರ ಮಧ್ಯೆ ಎರಡು ಪಕ್ಷದ ಕಾರ್ಯಕರ್ತರು ಜಟಾಪಟಿ ನಡೆಸುತ್ತಿರುವ ಘಟನೆ ಕೂಡ ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ನಡೆದಿರುವುದಾಗಿ ವರದಿಯಾಗಿದೆ.
-
Today pic.twitter.com/aykNVylSAZ
— Sanjay Raut (@rautsanjay61) August 25, 2021 " class="align-text-top noRightClick twitterSection" data="
">Today pic.twitter.com/aykNVylSAZ
— Sanjay Raut (@rautsanjay61) August 25, 2021Today pic.twitter.com/aykNVylSAZ
— Sanjay Raut (@rautsanjay61) August 25, 2021
ಕೇಂದ್ರ ಸಚಿವ ನಾರಾಯಣ್ ರಾಣೆಗೆ ಈಗಾಗಲೇ ಕೋರ್ಟ್ನಿಂದ ಜಾಮೀನು ಸಿಕ್ಕಿದ್ದು, ಮುಂದಿನ ಆದೇಶದವರೆಗೆ ಅವರ ವಿರುದ್ಧ ಮುಂಬೈ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಳ್ಳದಂತೆ ಬಾಂಬೆ ಹೈಕೋರ್ಟ್ ಸೂಚನೆ ನೀಡಿದೆ.
ನಾರಾಯಣ್ ರಾಣೆಗೆ ಶಾಸಕನಿಂದ ಜೀವ ಬೆದರಿಕೆ
ಮುಖ್ಯಮಂತ್ರಿ ವಿರುದ್ಧ ನಾರಾಯಣ್ ರಾಣೆ ನೀಡಿರುವ ಹೇಳಿಕೆಗೆ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗುತ್ತಿದ್ದು, ಜಾಮೀನು ಮೇಲೆ ರಿಲೀಸ್ ಆಗಿದ್ದರೂ ಕೂಡ ಶಿವಸೇನೆ ತನ್ನ ಆಕ್ರೋಶ ಹೊರಹಾಕುತ್ತಿದೆ. ಇದರ ಬೆನ್ನಲ್ಲೇ ಹಿಂಗೋಳಿಯ ಶಾಸಕ ಸಂತೋಷ್ ಬಂಗಾರ್, ಕೇಂದ್ರ ಸಚಿವರಿಗೆ ಬೆದರಿಕೆ ಹಾಕಿದ್ದಾರೆ.
ನಾರಾಯಣ್ ರಾಣೆ ಅವರಿಗೆ ನೀಡಿರುವ ಪೊಲೀಸ್ ರಕ್ಷಣೆ ತೆಗೆದು ಹಾಕಿ, ಅವರ ಮನೆಗೆ ಹೋಗಿ ನಾನೇ ಕೊಲೆ ಮಾಡುತ್ತೇನೆ ಎಂದಿದ್ದಾರೆ. ಈ ಹೇಳಿಕೆಗೆ ಬಿಜೆಪಿಯಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಇದೀಗ ಶಿವಸೇನೆ ಶಾಸಕನ ವಿರುದ್ಧ ದೂರು ದಾಖಲಾಗುವ ಸಾಧ್ಯತೆ ದಟ್ಟವಾಗಿದೆ.