ಜಶ್ಪುರ್(ಛತ್ತೀಸ್‌ಗಢ): ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ಯುವಕರ ನಿರೀಕ್ಷೆಗೆ ತಕ್ಕಂತೆ ಇಲ್ಲ. ಖಾಯಂ ಉದ್ಯೋಗ ಪಡೆಯ ಬಯಸುವ ದೇಶದ ಯುವಕರ ನಿರೀಕ್ಷೆಯ ಮೇಲೆ ದಾಳಿ ನಡೆಸುವ ಯೋಜನೆ ಇದಾಗಿದೆ. ಕೇಂದ್ರ ಸರ್ಕಾರ ಮಂಡಿಸಿದ ಯೋಜನೆಯಲ್ಲಿ ನಾಲ್ಕು ವರ್ಷಗಳ ಸೇವೆಯ ನಂತರ ಯುವಕರು ಮತ್ತೆ ನಿರುದ್ಯೋಗಿಗಳಾಗುತ್ತಾರೆ ಎಂದು ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಛತ್ತೀಸ್‌ಗಢದ ಕ್ಯಾಬಿನೆಟ್ ಸಚಿವ ಶಿವ ದಹ್ರಿಯಾ ಮತ್ತು ಮಾಜಿ ಕಾಂಗ್ರೆಸ್ ಸಂಸದ ಪಿ.ಎಲ್.ಪುನಿಯಾ ಒಂದು ದಿನದ ಭೇಟಿಗಾಗಿ ಜಶ್ಪುರ್ ತಲುಪಿದ್ದರು. ಈ ವೇಳೆ, ಮಾಧ್ಯಮಗಳೊಂದಿಗೆ ಮಾತನಾಡಿದ ಪಿಎಲ್ ಪುನಿಯಾ, ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ಯುವಕರ ನಿರೀಕ್ಷೆಗೆ ತಕ್ಕಂತೆ ಇಲ್ಲ. ಖಾಯಂ ಉದ್ಯೋಗ ಪಡೆಯಬಯಸುವ ದೇಶದ ಯುವಕರ ನಿರೀಕ್ಷೆಯ ಮೇಲೆ ದಾಳಿ ನಡೆಸುವ ಯೋಜನೆ ಇದಾಗಿದೆ ಎಂದು ವಾಗ್ದಾಳಿ ನಡೆಸಿದರು.
ಓದಿ: ಇಡಿ ದುರ್ಬಳಕೆ ಮಾಡಿಕೊಂಡು ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ : ಸಿದ್ದರಾಮಯ್ಯ
ಕೇಂದ್ರ ಸರ್ಕಾರ ಮಂಡಿಸಿದ ಯೋಜನೆಯಲ್ಲಿ ನಾಲ್ಕು ವರ್ಷಗಳ ಸೇವೆಯ ನಂತರ ಯುವಕರು ಮತ್ತೆ ನಿರುದ್ಯೋಗಿಗಳಾಗುತ್ತಾರೆ. ಅಗ್ನಿಪಥ್ ಯೋಜನೆಗೆ ಸಂಬಂಧಿಸಿದ ಶೇ 25ರಷ್ಟು ಯುವಕರಿಗೆ ಮಾತ್ರ ಸೇನೆಯಲ್ಲಿ ಖಾಯಂ ಉದ್ಯೋಗ ನೀಡಲಾಗುವುದು.
ಶೇ.75ರಷ್ಟು ಯುವಕರನ್ನು ಹೊರಹಾಕಲಾಗುತ್ತದೆ. ಅವರಿಗೆ ಪಿಂಚಣಿ ಅಥವಾ ಯಾವುದೇ ಶ್ರೇಣಿಯನ್ನು ನೀಡಲಾಗುವುದಿಲ್ಲ. ಇದೇ ಕಾರಣಕ್ಕೆ ಸರ್ಕಾರದ ಈ ಯೋಜನೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಅಗ್ನಿಪಥ್ ಯೋಜನೆ ಯುವಕರು ಮತ್ತು ದೇಶದ ಹಿತಾಸಕ್ತಿ ಎರಡಕ್ಕೂ ಅಲ್ಲ ಎಂದು ಪುನಿಯಾ ಹೇಳಿದರು.
ಬಿಜೆಪಿಗೆ ಆಘಾತ: ಇಡಿಯಿಂದ ರಾಹುಲ್ ಗಾಂಧಿ ವಿಚಾರಣೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರದ ಪ್ರಮುಖ ತನಿಖಾ ಸಂಸ್ಥೆಗಳು ಬಿಜೆಪಿಯ ಮುಂಚೂಣಿಯ ಸಂಘಟನೆಯಂತೆ ಕೆಲಸ ಮಾಡುತ್ತಿವೆ. ಕೇಂದ್ರ ಸರ್ಕಾರ, ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ರಾಹುಲ್ ಗಾಂಧಿ ನೇರ ವಾಗ್ದಾಳಿ ನಡೆಸಿರುವ ಸಿಟ್ಟಿನಿಂದ ಈ ಹೆಜ್ಜೆ ಇಡಲಾಗಿದೆ.
ಛತ್ತೀಸ್‌ಗಢದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಸಂಘಟನೆ ಮಟ್ಟದಲ್ಲಿ ಸಿದ್ಧತೆ ನಡೆಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪುನಿಯಾ, ರಾಜ್ಯದಲ್ಲಿ ಚುನಾವಣೆಗೆ ಸಂಘಟನೆಯು ಸಂಪೂರ್ಣ ಸಿದ್ಧವಾಗಿದೆ. 2018ರಂತೆಯೇ ಮುಂದಿನ ಚುನಾವಣೆಯಲ್ಲಿ ಫಲಿತಾಂಶ ಹೊರಬೀಳಲಿದೆ ಎಂದು ಹೇಳಿದರು.
ಓದಿ: ಕಾಯಕವೇ ಕೈಲಾಸ:10 ಕಿ.ಮೀ ನಡೆದು ಬುಡಕಟ್ಟು ಜನರ ಆರೋಗ್ಯ ತಪಾಸಣೆ ನಡೆಸಿದ ವೈದ್ಯ ಸಿಬ್ಬಂದಿ!
ನಗರಾಡಳಿತದಿಂದ ಉತ್ತಮ ಕಾರ್ಯ: ಈ ವೇಳೆ ನಗರಾಡಳಿತ ಸಚಿವ ಶಿವ ದಹ್ರಿಯಾ ಮಾತನಾಡಿ, ರಾಜ್ಯ ಸರಕಾರ ಇದೇ ಮೊದಲ ಬಾರಿಗೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಎಲ್ಲ ನಗರಾಡಳಿತ ಸಂಸ್ಥೆಗಳಿಗೆ 5 ಕೋಟಿ ರೂ.ಗಳ ವಿಶೇಷ ನಿಧಿ ನೀಡಲು ನಿರ್ಧರಿಸಿದೆ.
ಕಳೆದ ಮೂರು ವರ್ಷಗಳಲ್ಲಿ ನಗರಾಡಳಿತ ಇಲಾಖೆ ರಾಜ್ಯದಲ್ಲಿ ಉತ್ತಮ ಕೆಲಸ ಮಾಡಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ನಗರಾಡಳಿತ ಇಲಾಖೆ ಉತ್ತಮ ಕೆಲಸ ಮಾಡಿದೆ ಎಂದರು. ಸ್ವಚ್ಛತೆ ಮತ್ತು ODF+ ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಛತ್ತೀಸ್‌ಗಢ ರಾಜ್ಯಕ್ಕೆ ಪ್ರಧಾನಿಯವರ ಪ್ರಶಸ್ತಿ ಸಹ ನೀಡಿದ್ದಾರೆ ಎಂದರು.