ಹೈದರಾಬಾದ್ : ಉದ್ಯಮಿ ಮತ್ತು ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ರಾಜ್ಕುಂದ್ರಾ ಸಂದರ್ಶನವೊಂದರಲ್ಲಿ ತಮ್ಮ ಮಾಜಿ ಪತ್ನಿ ಕವಿತಾ ಅವರ ಅಕ್ಕನ ಗಂಡನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಶಿಲ್ಪಾಶೆಟ್ಟಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಇಂದು ಇನ್ಸ್ಟಾಗ್ರಾಂನಲ್ಲಿ ‘ಒಳ್ಳೆಯ ಮನುಷ್ಯನಿಗೆ ನೋವುಂಟಾದಾಗ, ಒಳ್ಳೆಯವರೆಲ್ಲರೂ ಅವನೊಂದಿಗೆ ನೋವು ಅನುಭವಿಸುತ್ತಾರೆ- ಯೂರಿಪೆಡ್ಸ್ ’ ಎಂಬ ವಾಕ್ಯವನ್ನು ಬರೆದಿದ್ದಾರೆ.
- " class="align-text-top noRightClick twitterSection" data="
">
ಇತ್ತೀಚಿನ ಸಂದರ್ಶನವೊಂದರಲ್ಲಿ ರಾಜ್ಕುಂದ್ರಾ ತನ್ನ ಮೊದಲ ಪತ್ನಿಯೊಂದಿಗೆ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ನನ್ನ ಮಾಜಿ ಪತ್ನಿ ಕವಿತಾ ಲಂಡನ್ನಲ್ಲಿದ್ದಾಗ ಅವರ ಸಹೋದರಿಯ ಗಂಡನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಹೇಳಿದ್ದರು.
ಇಂಗ್ಲೆಂಡ್ನ ನಮ್ಮ ಮನೆಯಲ್ಲಿ ನಾನು, ಅಪ್ಪ ಮತ್ತು ತಂಗಿ ಇದ್ದೆವು. ಅವಳ ಅಕ್ಕ ಹಾಗೂ ಅವರ ಪತಿ ಬೇರೊಂದು ಮನೆಯಲ್ಲಿ ವಾಸವಿದ್ದರು. ನಾನು ಬ್ಯುಸಿನೆಸ್ ಟ್ರಿಪ್ ಹೋದಾಗ ಆಕೆ, ಅವರ ಭಾವನೊಂದಿಗೆ ಸಲುಗೆಯಿಂದ ಬೆರೆಯುತ್ತಿದ್ದಳು. ಈ ಬಗ್ಗೆ ನನ್ನ ಕುಟುಂಬದವರು ಹಾಗೂ ನನ್ನ ಡ್ರೈವರ್ ಸಹ ನನ್ನ ಗಮನಕ್ಕೆ ತಂದಿದ್ದರು. ಆದರೂ, ನಾನು ಅವರ ಮಾತನ್ನು ನಂಬಲಿಲ್ಲ ಎಂದರು.
ಇದನ್ನೂ ಓದಿ:ಅಮೀರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡಾ' ಶೂಟಿಂಗ್ ಪುನಾರಂಭ
ಆದರೆ, ಅವರು ಒಟ್ಟಿಗೆ ಕೆಲಸಕ್ಕೆ ಹೋಗಿ, ಒಂದೇ ಕೋಣೆಯಲ್ಲಿ ಇರುತ್ತಿದ್ದುದನ್ನು ನಾನು ಗಮನಿಸಿದ್ದೆ. ಹಾಗಾಗಿ, ವಿಚ್ಛೇದನ ಪಡೆದುಕೊಂಡೆ ಎಂದಿದ್ದಾರೆ. ಈ ಹಿಂದಿನ ಸಂದರ್ಶನವೊಂದರಲ್ಲಿ ಕವಿತಾ, ನನ್ನ ಮತ್ತು ಕುಂದ್ರಾ ಸಂಬಂಧ ಮುರಿಯುಲು ಶಿಲ್ಪಾಶೆಟ್ಟಿಯೇ ಕಾರಣ ಎಂದು ಆರೋಪಿಸಿದ್ದರು.