ETV Bharat / bharat

ಮೂವರು ಹೆಣ್ಮಕ್ಕಳು ವಿದ್ಯಾಭ್ಯಾಸದಲ್ಲಿ ಟಾಪರ್​.. ಕಡು ಬಡತನಕ್ಕೆ ನಲುಗಿದ ಅಕ್ಕ- ತಂಗಿಯರು! - ಕೃಷಿಯಲ್ಲಿ ಡಿಪ್ಲೊಮಾವನ್ನು ಪೂರ್ಣ

ಕುರುಬರ ಮನೆಯಲ್ಲಿ ಹುಟ್ಟಿದ ಆ ಮೂವರು ಹೆಣ್ಣು ಮಕ್ಕಳು ಓದುವುದರಲ್ಲಿ ನಿಸ್ಸೀಮರು. ತೀವ್ರ ಆರ್ಥಿಕ ತೊಂದರೆಯಿಂದಾಗಿ ಅವರ ತಂದೆ ತಮ್ಮ ಮೂವರು ಹೆಣ್ಣುಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿದರು. ಆದರೂ ಸಹ ಅವರು ಉತ್ತಮವಾಗಿ ಓದಿ ಪ್ರತಿಭಾವಂತರಾದರು. ಈಗ ಓದಲು ಹಣವಿಲ್ಲ ಎಂದು ತಂದೆ ಹೇಳಿದಾಗ ಒಬ್ಬೊಬ್ಬರಾಗಿ ಶಿಕ್ಷಣದಿಂದ ದೂರವಾಗುತ್ತಿದ್ದಾರೆ..

Severe financial difficulties make her shepherd  Daughters topper in School  Family financial problem  ಹೆಣ್ಮಕ್ಕಳು ವಿದ್ಯಾಭ್ಯಾಸದಲ್ಲಿ ಟಾಪರ್  ಬಡತನಕ್ಕೆ ನಲುಗಿದ ಅಕ್ಕ ತಂಗಿ  ಕುರುಬರ ಮನೆಯಲ್ಲಿ ಹುಟ್ಟಿದ ಆ ಮೂವರು ಹೆಣ್ಣು ಮಕ್ಕಳು  ತೀವ್ರ ಆರ್ಥಿಕ ತೊಂದರೆ  ಒಬ್ಬೊಬ್ಬರಾಗಿ ಶಿಕ್ಷಣದಿಂದ ದೂರ  ಹೊಲಿಗೆ ಕೆಲಸ ಕಲಿತು ಪೋಷಕರಿಗೆ ಆಸರೆ  ಕಾಲೇಜು ಶುಲ್ಕ ಕಟ್ಟಲು ಸಾಧ್ಯ  ಹಣದ ಕೊರತೆಯಿಂದ ಅವರ ಆಕಾಂಕ್ಷೆಗಳು ಈಡೇರುತ್ತಿಲ್ಲ  ಕೃಷಿಯಲ್ಲಿ ಡಿಪ್ಲೊಮಾವನ್ನು ಪೂರ್ಣ  ಹಾರ್ಟಿಸೆಟ್ ಬರೆದು ರಾಜ್ಯ ಮಟ್ಟದಲ್ಲಿ ಮೂರನೇ ಸ್ಥಾನ
ಕಡು ಬಡತನಕ್ಕೆ ನಲುಗಿದ ಅಕ್ಕ-ತಂಗಿಯರು
author img

By

Published : Dec 3, 2022, 2:34 PM IST

ಸಿದ್ದಿಪೇಟೆ, ತೆಲಂಗಾಣ: ಒಲ್ಲದ ಮನಸ್ಸಿನಿಂದ ವಿದ್ಯಾಭ್ಯಾಸವನ್ನು ತ್ಯಜಿಸಿದ ಹಿರಿಯ ಮಗಳು ಹೊಲಿಗೆ ಕೆಲಸ ಕಲಿತು ಪೋಷಕರಿಗೆ ಆಸರೆಯಾಗಿದ್ದಾರೆ. ಈಗ ಎರಡನೇ ಮಗಳು ಕಾಲೇಜು ಶುಲ್ಕ ಕಟ್ಟಲು ಸಾಧ್ಯವಾಗದ ಹಿನ್ನೆಲೆ ತಂದ ಜೊತೆ ಕುರಿ ಮೇಯಿಸಲು ಹೋಗುತ್ತಿದ್ದಾರೆ. ಮೂರನೇ ಮಗಳು ಓದಿನತ್ತ ಗಮನ ಹರಿಸುತ್ತಿದ್ದಾರೆ. ಮಕ್ಕಳು ಬುದ್ಧಿವಂತರಾಗಿದ್ದರೂ ಹಣದ ಕೊರತೆಯಿಂದ ಅವರ ಆಕಾಂಕ್ಷೆಗಳು ಈಡೇರುತ್ತಿಲ್ಲ ಎಂದು ತಂದೆ-ತಾಯಿ ಇಬ್ಬರೂ ಮನದೊಳಗೆ ಕೊರಗುತ್ತಿದ್ದಾರೆ.

Severe financial difficulties make her shepherd  Daughters topper in School  Family financial problem  ಹೆಣ್ಮಕ್ಕಳು ವಿದ್ಯಾಭ್ಯಾಸದಲ್ಲಿ ಟಾಪರ್  ಬಡತನಕ್ಕೆ ನಲುಗಿದ ಅಕ್ಕ ತಂಗಿ  ಕುರುಬರ ಮನೆಯಲ್ಲಿ ಹುಟ್ಟಿದ ಆ ಮೂವರು ಹೆಣ್ಣು ಮಕ್ಕಳು  ತೀವ್ರ ಆರ್ಥಿಕ ತೊಂದರೆ  ಒಬ್ಬೊಬ್ಬರಾಗಿ ಶಿಕ್ಷಣದಿಂದ ದೂರ  ಹೊಲಿಗೆ ಕೆಲಸ ಕಲಿತು ಪೋಷಕರಿಗೆ ಆಸರೆ  ಕಾಲೇಜು ಶುಲ್ಕ ಕಟ್ಟಲು ಸಾಧ್ಯ  ಹಣದ ಕೊರತೆಯಿಂದ ಅವರ ಆಕಾಂಕ್ಷೆಗಳು ಈಡೇರುತ್ತಿಲ್ಲ  ಕೃಷಿಯಲ್ಲಿ ಡಿಪ್ಲೊಮಾವನ್ನು ಪೂರ್ಣ  ಹಾರ್ಟಿಸೆಟ್ ಬರೆದು ರಾಜ್ಯ ಮಟ್ಟದಲ್ಲಿ ಮೂರನೇ ಸ್ಥಾನ
ಗೊಲ್ಲ ಚಿನ್ನೊಳ್ಳಸ್ವಾಮಿ ಹಾಗೂ ನಾಗಮಣಿ ದಂಪತಿಯ ಎರಡನೇ ಮಗಳು ಶ್ರವಂತಿ

ದೌಲ್ತಾಬಾದ್ ತಾಲೂಕಿನ ಕೋನೈಪಲ್ಲಿ ಗ್ರಾಮದ ಗೊಲ್ಲ ಚಿನ್ನೊಳ್ಳಸ್ವಾಮಿ ಹಾಗೂ ನಾಗಮಣಿ ದಂಪತಿಗೆ ಮೂವರು ಹೆಣ್ಣು ಮಕ್ಕಳು. ಹಿರಿಯ ಮಗಳು ಕಲ್ಯಾಣಿ 2020 ರಲ್ಲಿ ಕೃಷಿಯಲ್ಲಿ ಡಿಪ್ಲೊಮಾವನ್ನು ಪೂರ್ಣಗೊಳಿಸಿದರು. ಆ ಬ್ಯಾಚ್‌ನ 60 ಜನರಲ್ಲಿ ಕಲ್ಯಾಣಿ ಟಾಪರ್ ಆಗಿದ್ದರು. ಉನ್ನತ ವ್ಯಾಸಂಗ ಮಾಡಬೇಕೆಂಬ ಆಸೆಯಿದ್ದರೂ ಹಣದ ಕೊರತೆಯಿಂದ ಮನಸಿಲ್ಲದೇ ಶಿಕ್ಷಣವನ್ನು ತ್ಯಜಿಸಿದರು. ಬಳಿಕ ಹೊಲಿಗೆ ಕಲಿತು ತಂದೆ-ತಾಯಿಗೆ ಆಸರೆಯಾಗಿದ್ದಾರೆ.

ಎರಡನೇ ಮಗಳು ಶ್ರವಂತಿ ಕೃಷಿಯಲ್ಲಿ ಡಿಪ್ಲೊಮಾ ಮುಗಿಸಿದ್ದಾರೆ. ಬಿಎಸ್ಸಿ (ತೋಟಗಾರಿಕೆ) ಓದಲು ಹಾರ್ಟಿಸೆಟ್ ಬರೆದು ರಾಜ್ಯ ಮಟ್ಟದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಈ ತಿಂಗಳ 5ರಂದು ಕೌನ್ಸೆಲಿಂಗ್‌ಗೆ ಹಾಜರಾಗಬೇಕು. ಅದೇ ದಿನ 50 ಸಾವಿರ ರೂಪಾಯಿ ಕೊಟ್ಟರೆ ಮಾತ್ರ ಸೀಟು ಸಿಗುತ್ತದೆ. ಅಷ್ಟೇ ಅಲ್ಲ ಶ್ರವಂತಿ ಓದಿನ ಖರ್ಚು ಒಟ್ಟು ನಾಲ್ಕು ವರ್ಷಕ್ಕೆ 4 ಲಕ್ಷ ರೂಪಾಯಿ ಆಗುತ್ತದೆ. ಇಷ್ಟೊಂದು ವೆಚ್ಚ ಮಾಡಲು ಆ ಕುಟುಂಬಕ್ಕೆ ಸಾಧ್ಯವಿಲ್ಲ.

ಶ್ರವಂತಿ 10ನೇ ತರಗತಿಯಲ್ಲಿ 10/10 GPA ಗಳಿಸಿದ್ದಾರೆ. ಬಡತನದಿಂದ ತುಳಿತಕ್ಕೊಳಗಾಗಿದ್ದರೂ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಸೇರಿಕೊಂಡು ಶ್ರದ್ಧೆಯಿಂದ ಓದಿ ಮುಂದೆ ಬರಲು ಯತ್ನಿಸುತ್ತಿದ್ದಾರೆ. ಬಿಎಸ್ಸಿ (ತೋಟಗಾರಿಕೆ) ಓದುವ ಕನಸು ಹೊತ್ತಿರುವ ಶ್ರವಂತಿ ತಂದೆಯೊಂದಿಗೆ ಕುರಿ ಮೇಯಿಸಲು ಹೋಗುತ್ತಿದ್ದಾರೆ. ಅಸಹಾಯಕವಾಗಿರುವ ಶ್ರವಂತಿ ತನ್ನಲ್ಲೇ ತಾನು ಮೌನವಾಗಿ ಅಳುತ್ತಿದ್ದಾಳೆ. ದಾನಿಗಳು ಸ್ಪಂದಿಸಿದರೆ ಚೆನ್ನಾಗಿ ಓದಿ ಉತ್ತಮ ಮಟ್ಟಕ್ಕೆ ಬೆಳೆಯುವ ಭರವಸೆ ಈ ಹೆಣ್ಮಕ್ಕಳಲ್ಲಿದೆ. ಇನ್ನು ಈ ಕುಟುಂಬದ ಮೂರನೇ ಮಗಳು ಪ್ರಸ್ತುತ ಮಾದರಿ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದಾರೆ.

ಓದಿ: ಗುಡಿಸಲಿನಲ್ಲಿ ಅರಳಿದ ಪ್ರತಿಭೆ: ನೀಟ್​ ಬರೆದು ಸರ್ಕಾರಿ ಸೀಟು ಪಡೆದ ಸಾಧಕ​, ಮೆಡಿಕಲ್​ ಓದಲು ಬೇಕಿದೆ ನೆರವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.