ETV Bharat / bharat

ಕೊಯಂಬತ್ತೂರಿನ ಪ್ರಥಮ ಮಹಿಳಾ ಬಸ್​ ಡ್ರೈವರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದ 24 ವರ್ಷದ ಯುವತಿ - ಈಟಿವಿ ಭಾರತ ಕನ್ನಡ

24 ವರ್ಷದ ಶರ್ಮಿಳಾ ಎಂಬ ಯುವತಿ ಕೊಯಂಬತ್ತೂರು ನಗರದ ಪ್ರಥಮ ಮಹಿಳಾ ಬಸ್ ​​ಡ್ರೈವರ್​ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

sharmila-coimbatore-first-female-bus-driver
ಕೊಯಂಬತ್ತೂರಿನ ಪ್ರಥಮ ಮಹಿಳಾ ಬಸ್​ ಡ್ರೈವರ್​ ಎಂಬ ಹೆಗ್ಗಳಿಕೆ ಪಾತ್ರಳಾದ 24 ವರ್ಷದ ಶರ್ಮಿಳಾ
author img

By

Published : Apr 2, 2023, 10:26 PM IST

Updated : Apr 2, 2023, 10:51 PM IST

ಕೊಯಂಬತ್ತೂರು (ತಮಿಳುನಾಡು ): ಇಂದು ಮಹಿಳೆಯರು ಯಾವ ಕ್ಷೇತ್ರದಲ್ಲಿ ಇಲ್ಲ ಹೇಳಿ. ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯರು ಒಂದು ಹೆಜ್ಜೆ ಮುಂದೆಯೇ ಇದ್ದಾರೆ. ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯರು ಉನ್ನತ ಮಟ್ಟದ ಸಾಧನೆಯನ್ನು ಮಾಡಿದ್ದಾರೆ. ಹಾಗೆಯೇ ಎಲ್ಲರಲ್ಲೂ ಸ್ಫೂರ್ತಿ ತುಂಬುವಲ್ಲಿಯೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ.

ಸಾಮಾನ್ಯವಾಗಿ ವಾಹನ ಚಾಲನೆ ಎಂಬುದು ಪುರುಷರು ಸಲೀಸಾಗಿ ನಡೆಸುವಂತದ್ದು. ಅದರಲ್ಲೂ ಬೃಹತ್​ ವಾಹನಗಳನ್ನು ಚಲಾಯಿಸುವುದರಲ್ಲಿ ಹೆಚ್ಚಾಗಿ ಪುರುಷರನ್ನೇ ಕಾಣುತ್ತೇವೆ. ಆದರೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ 24 ವರ್ಷದ ಶರ್ಮಿಳಾ ಎಂಬ ಯುವತಿ ಯಾವ ಪುರುಷರಿಗೂ ಕಡಿಮೆ ಇಲ್ಲದಂತೆ ಬಸ್​ ಚಲಾಯಿಸುತ್ತಾರೆ. ಇವರು ಬಸ್​ ಚಲಾಯಿಸಲು ನಿಂತರೆ ಬಸ್ಸಿನಲ್ಲಿರುವ ಎಲ್ಲರೂ ಒಮ್ಮೆ ಕಣ್ಣರಳಿಸಿ, ಮೂಕವಿಸ್ಮಿತರಾಗಿ ನೋಡುತ್ತಾರೆ.

ಕೊಯಂಬತ್ತೂರು ನಗರದ ಮೊದಲ ಬಸ್​ ಚಾಲಕಿ ಎಂದು ಖ್ಯಾತಿ ಪಡೆದಿರುವ ಶರ್ಮಿಳಾ, ಕೊಯಂಬತ್ತೂರಿನ ಗಾಂಧಿಪುರಂನಿಂದ ಸೋಮನೂರು ಮಾರ್ಗದಲ್ಲಿ ಬಸ್​ ಓಡಿಸುತ್ತಾರೆ. ಇವರ ಚಾಲನಾ ಕೌಶಲ್ಯ ಎಲ್ಲರ ಗಮನ ಸೆಳೆಯುತ್ತದೆ. ಈ ಯುವತಿಯು ಯಾವುದೇ ಪರುಷರಿಗಿಂತ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಸಾಧಿಸಬೇಕೆಂಬ ಛಲ ನಮ್ಮಲ್ಲಿದ್ದರೆ ನಾವು ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ಶರ್ಮಿಳಾ ನಮ್ಮ ಕಣ್ಣ ಮುಂದೆ ಇದ್ದಾರೆ.

ಶರ್ಮಿಳಾ ಅವರನ್ನು ಬಸ್ಸಿನಲ್ಲಿ ಆಗಮಿಸುವ ಜನರು ಅಭಿನಂದಿಸುತ್ತಾರೆ. ಅಲ್ಲದೆ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬೀಳುತ್ತಾರೆ. ಶರ್ಮಿಳಾ ಅವರು ವಾಹನ ಚಲಾಯಿಸುವಾಗ ಅಚ್ಚರಿಯಿಂದ ಇವರನ್ನೇ ನೋಡುತ್ತಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಶರ್ಮಿಳಾ, ಏಳನೇ ತರಗತಿಯಲ್ಲಿರುವಾಗಲೇ ನನಗೆ ವಾಹನ ಚಾಲನೆಯಲ್ಲಿ ಆಸಕ್ತಿ ಮೂಡಿತ್ತು. ನನ್ನ ತಂದೆ ನನಗೆ ಕನಸನ್ನು ನನಸಾಗಿಸಲು ಸಹಕರಿಸಿದರು. ನಾನು ನನ್ನ ತಂದೆಯ ಸಹಾಯದಿಂದ ಮೊದಲು ಎಲ್​ಪಿಜಿ ಆಟೋ ಓಡಿಸುತ್ತಿದ್ದೆ. ನನ್ನ ತಂದೆಯೇ ನನಗೆ ವಾಹನಗಳನ್ನು ಸರಿಯಾಗಿ ಓಡಿಸಲು ಮತ್ತು ಪರವಾನಗಿ ಪಡೆಯಲು ಸಹಾಯ ಮಾಡಿದರು. ಬಳಿಕ ಪುರುಷರೇ ಹೆಚ್ಚಾಗಿ ಚಲಾಯಿಸುವ ಬೃಹತ್​ ವಾಹನಗಳನ್ನು ಚಲಾಯಿಸುವ ಮನಸಾಗಿ ಬಸ್​ ಚಾಲನಾ ಪರವಾನಗಿ ಪಡೆದೆ. ಸಮಾಜದಲ್ಲಿ ಅನೇಕರು ಚಾಲಕರನ್ನು ಕೀಳಾಗಿ ಕಾಣುತ್ತಾರೆ. ಕೀಳಾಗಿ ಕಾಣುವ ಚಾಲನಾ ವೃತ್ತಿಯಲ್ಲಿ ನಾನು ಹೆಚ್ಚಿನ ಆಸಕ್ತಿ ಹೊಂದಿದ್ದೇನೆ. ಅಷ್ಟೇ ಅಲ್ಲದೆ ಮನೆಯಲ್ಲಿಯೂ, ನೀನು ಏನು ಬೇಕಾದರೂ ಮಾಡು ಎಂದು ಹೇಳಿದ್ದು, ನನ್ನ ಕನಸನ್ನು ನನಸು ಮಾಡಲು ಸಹಕಾರಿಯಾಯಿತು ಎಂದು ಶರ್ಮಿಳಾ ಹೇಳಿದರು.

ಶರ್ಮಿಳಾ ಅವರು 2019ರಿಂದ ಕೊಯಂಬತ್ತೂರಿನಲ್ಲಿ ಆಟೋ ಓಡಿಸುತ್ತಿದ್ದರು. ಇದೀಗ ಶರ್ಮಿಳಾ ಅವರು ನಗರದ ಮೊದಲ ಮಹಿಳಾ ಬಸ್ ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಮಾಜದಲ್ಲಿ ಚಾಲಕರ ಬಗ್ಗೆ ನಿರ್ಲಕ್ಷ್ಯದ ಧೋರಣೆ ಇದ್ದರೂ, ಶರ್ಮಿಳಾ ತನ್ನ ಕನಸನ್ನು ಸಾಧಿಸುವತ್ತ ಹೆಜ್ಜೆ ಇಟ್ಟಿದ್ದಾರೆ. ಇವರು ಸರ್ಕಾರಿ ನೌಕರಿಗಾಗಿ ಕಾಯದೇ ಖಾಸಗಿ ಬಸ್​ವೊಂದರಲ್ಲಿ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳೆ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂದು ಶರ್ಮಿಳಾ ಸಾಧಿಸಿ ತೋರಿಸಿದ್ದಾರೆ.

ಇದನ್ನೂ ಓದಿ : ಮೊದಲ ಮಹಿಳಾ ಸರ್ಕಾರಿ ಬಸ್ ಚಾಲಕಿಯಾಗಿ ಪ್ರಿಯಾಂಕಾ ಶರ್ಮಾ ಸಾಧನೆ

Last Updated : Apr 2, 2023, 10:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.