ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ತಾಂತಾಡಿ ಕಡಲತೀರದಲ್ಲಿ ಮೀನುಗಾರರು ತಮ್ಮ ಬಲೆಯಲ್ಲಿ ಸಿಲುಕಿದ್ದ ತಿಮಿಂಗಿಲ ಶಾರ್ಕ್ ಅನ್ನು ರಕ್ಷಿಸಿದ್ದಾರೆ ಎಂದು ಜಿಲ್ಲಾ ಅರಣ್ಯಾಧಿಕಾರಿ (ಡಿಎಫ್‌ಒ) ಅನಂತ ಶಂಕರ್ ತಿಳಿಸಿದ್ದಾರೆ.
ವೇಲ್ ಶಾರ್ಕ್ ಅಥವಾ ತಿಮಿಂಗಿಲ ಶಾರ್ಕ್, ಇದು ವಿಶ್ವದ ಅತಿದೊಡ್ಡ ಮೀನಾಗಿದ್ದು, ಇವುಗಳು ಈಗ ಅಳಿವಿನಂಚಿನಲ್ಲಿವೆ. ಇದೇನಾದರು ತಮ್ಮ ಬಲೆಯಲ್ಲಿ ಸಿಕ್ಕಿಬಿದ್ದರೆ ಅದನ್ನು ರಕ್ಷಿಸಲು ಮತ್ತು ಸುರಕ್ಷಿತವಾಗಿ ಸಮುದ್ರಕ್ಕೆ ಬಿಡಲು ಅರಣ್ಯ ಇಲಾಖೆಯನ್ನು ಸಂಪರ್ಕಿಸಲು ಮೀನುಗಾರರಿಗೆ ಸಲಹೆ ನೀಡಲಾಗುತ್ತದೆ. ಈ ವೇಳೆ ಮೀನುಗಾರಿಕೆ ಬಲೆಗಳಿಗೆ ಯಾವುದೇ ಹಾನಿಯಾದಲ್ಲಿ ಪರಿಹಾರವನ್ನು ನೀಡಲಾಗುತ್ತದೆ ಎಂದು ಅನಂತ ಶಂಕರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಶಾರ್ಕ್ ಪ್ರತಿಕಾಯಗಳಲ್ಲಿನ ಪ್ರೋಟೀನ್ನಿಂದ ಕೊರೊನಾಕ್ಕೆ ತಡೆ: ಸಂಶೋಧನೆ
ಇದೀಗ ಮೀನುಗಾರರ ಬಲೆಯಲ್ಲಿ ಸಿಲುಕಿದ್ದ ಸುಮಾರು ಎರಡು ಟನ್ (2000 ಕೆಜಿ) ತೂಕದ ತಿಮಿಂಗಿಲ ಶಾರ್ಕ್ ಅನ್ನು ಅರಣ್ಯಾಧಿಕಾರಿಗಳು, ಮೀನುಗಾರರು ಮತ್ತು ವನ್ಯಜೀವಿ ಸಂರಕ್ಷಕರು ಸಮುದ್ರಕ್ಕೆ ಬಿಟ್ಟಿದ್ದಾರೆ.