ETV Bharat / bharat

ಶರಿಯತ್ ಕೌನ್ಸಿಲ್ ನ್ಯಾಯಾಲಯವಲ್ಲ, ವಿಚ್ಛೇದನ ಪ್ರಮಾಣೀಕರಿಸುವಂತಿಲ್ಲ: ಮದ್ರಾಸ್ ಹೈಕೋರ್ಟ್ - ಗುಲಾ ಪದ್ಧತಿಯ ಮೂಲಕ ತನ್ನ ಗಂಡನಿಗೆ ವಿಚ್ಛೇದನ

ಶರಿಯತ್ ಕೌನ್ಸಿಲ್‌ಗಳು ನ್ಯಾಯಾಲಯ ಅಥವಾ ವಿವಾದಗಳ ಮಧ್ಯಸ್ಥಗಾರ ಅಲ್ಲ. ಹೀಗಾಗಿ ಅವು ವಿವಾಹ ವಿಚ್ಛೇದನಗಳನ್ನು ಪ್ರಮಾಣೀಕರಿಸಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.

Shariat Council is not a court to give divorce(Gula); Madras High Court

author img

By

Published : Feb 2, 2023, 2:33 PM IST

Updated : Feb 3, 2023, 11:24 AM IST

ಚೆನ್ನೈ: ಮುಸ್ಲಿಂ ಮಹಿಳೆಯೊಬ್ಬರು ತನ್ನ ಪತಿಗೆ ವಿಚ್ಛೇದನ ನೀಡಿದ ನಂತರ ಅದನ್ನು ಪ್ರಮಾಣೀಕರಿಸಿ ಶರಿಯತ್ ಕೌನ್ಸಿಲ್ ನೀಡಿದ ಕುಲ ಪ್ರಮಾಣಪತ್ರವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದ್ದು, ಎರಡೂ ಕಡೆಯವರು ಕುಟುಂಬ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಆದೇಶಿಸಿದೆ. ಪತ್ನಿಯರಿಗೆ ವಿಚ್ಛೇದನ ನೀಡಲು ಇಸ್ಲಾಂನಲ್ಲಿ ಇರುವ ತಲಾಕ್ ಪದ್ಧತಿಯಂತೆ ಶರಿಯಾ ಕಾನೂನಿನ ಪ್ರಕಾರ ಪತ್ನಿಯೊಬ್ಬರು ಕುಲ ಪ್ರಮಾಣಪತ್ರದ ಮೂಲಕ ತನ್ನ ಗಂಡನಿಗೆ ವಿಚ್ಛೇದನ ನೀಡಬಹುದಾಗಿದೆ. ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿ ವಿಚ್ಛೇದನ ನೀಡಿದ ನಂತರ ಪತ್ನಿ ಪಡೆದಿರುವ ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ಪತಿ ಮದ್ರಾಸ್ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸರವಣನ್, ತಮಿಳುನಾಡು ತೌಹೀದ್ ಜಮಾತ್ ಶರೀಯತ್ ಕೌನ್ಸಿಲ್ ಖಾಸಗಿ ಸಂಸ್ಥೆಯಾಗಿದ್ದು, ಸಮಸ್ಯೆ ಬಗೆಹರಿಸುವ ನ್ಯಾಯಾಲಯವಲ್ಲ, ಆ ಸಂಸ್ಥೆಗಳು ವಿಚ್ಛೇದನ ನೀಡಲು ಮತ್ತು ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಹೆಂಡತಿಗೆ ಶರಿಯತ್ ಕೌನ್ಸಿಲ್ ನೀಡಿರುವ ಸರ್ಟಿಫಿಕೇಟ್ ರದ್ದುಗೊಳಿಸುವಂತೆ ಆದೇಶಿಸಿದರು.

ಶರಿಯತ್ ಕೌನ್ಸಿಲ್‌ನಂತಹ ಸಂಸ್ಥೆಗಳು ಕುಲಾ ಪ್ರಮಾಣಪತ್ರ ನೀಡುವುದನ್ನು ಹೈಕೋರ್ಟ್ ಈಗಾಗಲೇ ನಿಷೇಧಿಸಿದೆ ಎಂದು ಹೇಳಿದ ನ್ಯಾಯಾಧೀಶರು, ಮುಸ್ಲಿಂ ಮಹಿಳೆಯರು ಕುಟುಂಬ ಕಲ್ಯಾಣ ನ್ಯಾಯಾಲಯದಿಂದ ವಿಚ್ಛೇದನದ ಹಕ್ಕನ್ನು ಪಡೆಯಬೇಕು ಮತ್ತು ಶರಿಯತ್ ಕೌನ್ಸಿಲ್‌ನಂತಹ ಸಂಘಟನೆಯ ಮೂಲಕ ಅದನ್ನು ಪಡೆಯಲು ಸಾಧ್ಯವಿಲ್ಲ ಸ್ಪಷ್ಟಪಡಿಸಿದರು. ಈ ಪ್ರಕರಣದಲ್ಲಿ ಎರಡೂ ಕಡೆಯವರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ತಮಿಳುನಾಡು ಕಾನೂನು ಸೇವಾ ಆಯೋಗ ಅಥವಾ ಕುಟುಂಬ ಕಲ್ಯಾಣ ನ್ಯಾಯಾಲಯವನ್ನು ಸಂಪರ್ಕಿಸಬೇಕು ಎಂದು ನ್ಯಾಯಮೂರ್ತಿ ಶರವಣನ್ ಆದೇಶಿಸಿದ್ದಾರೆ.

ಮೂರು ಬಾರಿ ತಲಾಖ್ (ತ್ರಿವಳಿ ತಲಾಖ್) ಹೇಳುವ ಮೂಲಕ ತನ್ನ ಪತ್ನಿ ಮತ್ತು ಕುಟುಂಬವನ್ನು ತೊರೆದ ವ್ಯಕ್ತಿಯೊಬ್ಬನ ವಿರುದ್ಧ ಅಹಮದಾಬಾದ್‌ನ ಹವೇಲಿ ಪೊಲೀಸರು ಮುಸ್ಲಿಂ ಮಹಿಳೆಯರ (ಮದುವೆ ಮೇಲಿನ ಹಕ್ಕುಗಳ ರಕ್ಷಣೆ) ಕಾಯಿದೆ, 2019 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ, ಪೊಲೀಸರು ಆರೋಪಿಯ ವಿರುದ್ಧ ಕೌಟುಂಬಿಕ ಹಿಂಸೆ, ಗಾಯ ಉಂಟು ಮಾಡಿದ್ದು ಮತ್ತು ದೂರುದಾರರ ಮೇಲೆ ದೌರ್ಜನ್ಯ ಎಸಗಿದ ಆರೋಪಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಎಫ್‌ಐಆರ್‌ನಲ್ಲಿ, ದೂರುದಾರರಾದ ಮುಬಸ್ಸಿರಾ ಖುರೇಷಿ ಅವರು ಜನವರಿ 25 ರಂದು ತನ್ನ ಅತ್ತೆಯೊಂದಿಗೆ ಎಂದಿನ ತೀವ್ರ ವಾಗ್ವಾದದ ಸಂದರ್ಭದಲ್ಲಿ ತನ್ನ ಪತಿ ಶೋಯೆಬ್ ಖುರೇಷಿ ತ್ರಿವಳಿ ತಲಾಖ್ ಅನ್ನು ಉಚ್ಚರಿಸಿದ್ದಾರೆ ಎಂದು ಹೇಳಿದ್ದಾರೆ. ದಂಪತಿಗಳು ಅಕ್ಟೋಬರ್ 2021 ರಲ್ಲಿ ಮದುವೆಯಾಗಿದ್ದು, ಆರು ತಿಂಗಳ ಮಗಳನ್ನು ಹೊಂದಿದ್ದಾರೆ. ಎಫ್‌ಐಆರ್‌ನಲ್ಲಿ, ತನ್ನ ಗಂಡನ ತಂದೆಯ ಚಿಕ್ಕಮ್ಮ ಸೇರಿದಂತೆ ಅತ್ತೆಯಂದಿರು ತನಗೆ ಚಿತ್ರಹಿಂಸೆ ನೀಡಿದ್ದಾರೆ ಮತ್ತು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಮತ್ತು ಕ್ಷುಲ್ಲಕ ಭಿನ್ನಾಭಿಪ್ರಾಯಗಳ ಕಾರಣಕ್ಕೆ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ತ್ರಿವಳಿ ತಲಾಖ್ ವಿಚ್ಛೇದನವನ್ನು ಅಸಿಂಧುಗೊಳಿಸುವ ಕಾಯಿದೆಯಡಿ ತನಿಖೆ ಪ್ರಾರಂಭಿಸುವಂತೆ ದೂರುದಾರರು ಪೊಲೀಸರನ್ನು ಒತ್ತಾಯಿಸಿದ್ದಾರೆ.

ಹವೇಲಿ ಪೊಲೀಸರು ಶೋಯೆಬ್ ಖುರೇಷಿ, ಅವರ ಪೋಷಕರು ಮತ್ತು ಚಿಕ್ಕಮ್ಮನ ವಿರುದ್ಧ ಭಾರತೀಯ ದಂಡ ಸಂಹಿತೆಯ ಮದುವೆಯ ಹಕ್ಕುಗಳ ಕಾಯಿದೆ, 2019ರ ಸೆಕ್ಷನ್‌ಗಳ ಅಡಿಯಲ್ಲಿ ಕೌಟುಂಬಿಕ ಹಿಂಸಾಚಾರ [498(ಎ)], ಉದ್ದೇಶಪೂರ್ವಕವಾಗಿ ಗಾಯಗೊಳಿಸುವಿಕೆ (323), ನಿಂದನೀಯ ಭಾಷೆ [294(ಬಿ)] ಮತ್ತು ಮುಸ್ಲಿಂ ಮಹಿಳಾ ರಕ್ಷಣೆಯ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ತ್ರಿವಳಿ ತಲಾಖ್.. ಹಿಂದೂ ಪದ್ಧತಿಯಂತೆ 'ಪ್ರೇಮ್​' ಮದುವೆಯಾದ ಮುಸ್ಲಿಂ ಮಹಿಳೆ!

Last Updated : Feb 3, 2023, 11:24 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.