ETV Bharat / bharat

ಬಿಜೆಪಿ ವಿರುದ್ಧ ಶರದ್ ಪವಾರ್ ವಾಗ್ದಾಳಿ: 'ನಿತೀಶ್‌ ಕುಮಾರ್ ಜಾಣತನದ ಹೆಜ್ಜೆ ಇಟ್ಟಿದ್ದಾರೆ' ಎಂದು ಗುಣಗಾನ

ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲ, ಅವುಗಳಿಗೆ ಉಳಿಗಾಲವಿಲ್ಲ ಎಂದು ಬಿಜೆಪಿ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ. ಈಗಾಗಲೇ ನಿತೀಶ್ ಕುಮಾರ್ ಅವರ ಅಕಾಲಿದಳ ಮತ್ತು ಇತರ ಮಿತ್ರ ಪಕ್ಷಗಳು ಬಿಜೆಪಿಯೊಂದಿಗೆ ಮೈತ್ರಿಯನ್ನ ಕ್ರಮೇಣ ನಾಶಪಡಿಕೊಳ್ಳುತ್ತಿವೆ. ಆದರೆ, ನಿತೀಶ್‌ಕುಮಾರ್ ಜಾಣತನದ ಹೆಜ್ಜೆ ಇಟ್ಟಿದ್ದಾರೆ ಎಂದು ಬಿಜೆಪಿ ವಿರುದ್ಧ ಶರದ್ ಪವಾರ್ ವಾಗ್ದಾಳಿ ನಡೆಸಿದರು.

SHARAD PAWAR
ಶರದ್ ಪವಾರ್
author img

By

Published : Aug 10, 2022, 1:46 PM IST

ಪುಣೆ:ಶ್ರೀಲಂಕಾವನ್ನು ಒಂದೇ ಕುಟುಂಬದವರು ಆಳಿದರು. ರಾಷ್ಟ್ರಪತಿ, ಪ್ರಧಾನಿ, ಹಣಕಾಸು ಸಚಿವರು ಒಂದೇ ಕುಟುಂಬಕ್ಕೆ ಸೇರಿದ್ದರು. ಶ್ರೀಲಂಕಾದಲ್ಲಿ ಅಧಿಕಾರ ಕೇಂದ್ರೀಕೃತವಾಗಿತ್ತು. ಆದ್ದರಿಂದ ಅಸಮಾಧಾನ ಬೆಳೆಯತೊಡಗಿತು. ಹೀಗಾಗಿ ಸಾರ್ವಜನಿಕರು ಮುಗಿಬಿದ್ದರು ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಬಾರಾಮತಿಯಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಅವರು, ಶ್ರೀಲಂಕಾದ ಪರಿಸ್ಥಿತಿ ಕೇವಲ ಒಂದು ದಿನ ಅಥವಾ ತಿಂಗಳದ್ದಲ್ಲ. ಇದು ಅನೇಕ ವರ್ಷಗಳ ಹಳೆಯದು. ಸದ್ಯಕ್ಕೆ ಬಾಂಗ್ಲಾದೇಶದಲ್ಲಿ ಉಂಟಾಗಿರುವ ಪರಿಸ್ಥಿತಿ ಪಾಕಿಸ್ತಾನದಲ್ಲೂ ಸಂಭವಿಸಬಹುದು. ನಮ್ಮ ಸುತ್ತಲಿನ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನ ನಮ್ಮ ದೇಶದ ಆಡಳಿತಗಾರರು ಗಮನಿಸಬೇಕು.

ವಿಶೇಷವಾಗಿ, ಮೋದಿ ಮತ್ತು ಅವರ ಸಂಪುಟ ಇದನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಅಧಿಕಾರ ಕೇಂದ್ರೀಕೃತವಾಗಿರುವ ಕಡೆ ಈ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಭಾರತದಲ್ಲಿ ರಾಷ್ಟ್ರಮಟ್ಟದಲ್ಲಿ ಅಧಿಕಾರ ಕೇಂದ್ರೀಕೃತವಾಗಿದೆಯೇ ಎಂಬ ಅನುಮಾನ ಜನರಲ್ಲಿ ಮೂಡುತ್ತಿದೆ ಎಂದರು.

ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲ, ಅವುಗಳಿಗೆ ಉಳಿಗಾಲವಿಲ್ಲ ಎಂದು ಬಿಜೆಪಿ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ನಮ್ಮ ಏಕೈಕ ಪಕ್ಷ ಬಿಜೆಪಿ ಉಳಿಯುತ್ತದೆ ಹೇಳಿದ್ದಾರೆ. ಈಗಾಗಲೇ ನಿತೀಶ್ ಕುಮಾರ್ ಅವರ ಅಕಾಲಿದಳ ಮತ್ತು ಇತರ ಮಿತ್ರ ಪಕ್ಷಗಳು ಬಿಜೆಪಿಯೊಂದಿಗೆ ಮೈತ್ರಿಯನ್ನ ಕ್ರಮೇಣ ನಾಶಪಡಿಕೊಳ್ಳುತ್ತಿವೆ. ನಿತೀಶ್ ಕುಮಾರ್ ಜನಪ್ರಿಯ ನಾಯಕ. ಅವರು ಸಕಾಲದಲ್ಲಿ ಎಚ್ಚೆತ್ತುಕೊಂಡು ತಕ್ಷಣವೇ ರಾಜೀನಾಮೆ ನೀಡಿದ್ದಾರೆ. ಇದೀಗ ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ. ಆದರೆ, ನಿತೀಶ್‌ಕುಮಾರ್ ಜಾಣತನದ ಹೆಜ್ಜೆ ಇಟ್ಟಿದ್ದಾರೆ ಎಂದರು.

ಪಕ್ಷದ ಚಿಹ್ನೆ ಕಿತ್ತುಕೊಳ್ಳುವುದು ಸರಿಯಲ್ಲ: ಮುಖ್ಯಮಂತ್ರಿ ಏಕನಾಥ್ ಶಿಂಧೆ ತಮ್ಮದೇ ಮೂಲ ಶಿವಸೇನೆ ಎಂಬ ಹಕ್ಕನ್ನು ಮಂಡಿಸಿದ್ದಾರೆ. ಬಿಲ್ಲು ಮತ್ತು ಬಾಣವು ಶಿವಸೇನೆಯ ಸಂಕೇತವಾಗಿದೆ. ಪಕ್ಷದ ಚಿಹ್ನೆ ತೆಗೆಯುವುದು ಸೂಕ್ತವಲ್ಲ. ಏಕನಾಥ್ ಶಿಂಧೆ ಬೇರೆ ನಿಲುವು ತಳೆಯಲು ಬಯಸಿದರೆ ಬೇರೆ ಪಕ್ಷ ಕಟ್ಟಬಹುದು. ನಾನು ಕಾಂಗ್ರೆಸ್ ತೊರೆದಾಗ ಪ್ರತ್ಯೇಕ ಪಕ್ಷ ಕಟ್ಟಿದ್ದೆ. ವಿಭಿನ್ನ ಚಿಹ್ನೆಯನ್ನು ತೆಗೆದುಕೊಂಡೆ, ನಾವು ಅವರ ಚಿಹ್ನೆಗಳನ್ನು ಕೇಳಲಿಲ್ಲ ಎಂದು ಶಿಂಧೆ ಕಾಲೆಳೆದರು.

ಇದನ್ನು ಓದಿ: ಬಿಹಾರ ಮಹಾಮೈತ್ರಿ ಸರ್ಕಾರಕ್ಕೆ ಕ್ಷಣಗಣನೆ.. ಲಾಲು ಪುತ್ರರಿಗೆ ಮತ್ತೆ ಅಧಿಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.