ಕೊಂಡಗಾಂವ: ಜಿಲ್ಲೆಯ ಉರಂದಬೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ಗೈ ಗ್ರಾಮದಲ್ಲಿ ಅಮಾನವೀಯತೆ ಮೆರೆದ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಗ್ರಾಮಸ್ಥರು ಪ್ರೇಮ ಪ್ರಕರಣದಲ್ಲಿ ಯುವಕ ಮತ್ತು ಯುವತಿಯನ್ನು ಸಾರ್ವಜನಿಕವಾಗಿ ವಿವಸ್ತ್ರಗೊಳಿಸಿ ಇಡೀ ಗ್ರಾಮವನ್ನು ಸುತ್ತಾಡಿಸಿದ್ದಾರೆ. ಇದೀಗ ಅದರ ವಿಡಿಯೋ ಹಾಗೂ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಏನಿದು ವಿಷಯ: ಬಡಗಾಯಿಯಲ್ಲಿ ಪತಿ ಗೆಳತಿಯೊಂದಿಗೆ ಏಕಾಂತದಲ್ಲಿದ್ದ ವೇಳೆ ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ಹೊರಗಿನಿಂದ ಕೊಠಡಿ ಬೀಗ ಹಾಕಿದ ಪತ್ನಿ ಗಲಾಟೆ ಆರಂಭಿಸಿದ್ದಾಳೆ. ಗಂಡನ ಈ ಕೃತ್ಯದಿಂದ ಬೇಸರಗೊಂಡ ಮಹಿಳೆ ಇಡೀ ಗ್ರಾಮವನ್ನು ಒಟ್ಟುಗೂಡಿಸಿ ತನಗಾದ ಸಂಕಷ್ಟವನ್ನು ಹೇಳಿಕೊಂಡಿದ್ದಾಳೆ.
ಓದಿ: ನಾಗ್ಪುರದಲ್ಲಿ ಮಹಿಳೆಯರಿಂದ ಬೆತ್ತಲೆ ಡ್ಯಾನ್ಸ್.. ವಿಡಿಯೋ ವೈರಲ್!
ಗ್ರಾಮಸ್ಥರಿಂದ ಶಿಕ್ಷೆ: ಪತ್ನಿಯ ಮಾತು ಕೇಳಿ ಗ್ರಾಮಸ್ಥರೂ ಕೆರಳಿದ್ದಾರೆ. ಪತ್ನಿಯ ಆಜ್ಞೆಯ ಮೇರೆಗೆ ಇಬ್ಬರಿಗೂ ಗ್ರಾಮಸ್ಥರು ಶಿಕ್ಷೆ ನೀಡಿದ್ದಾರೆ. ಗ್ರಾಮಸ್ಥರು ಮೊದಲು ಶಿಕ್ಷೆಯಾಗಿ ಯುವಕ ಮತ್ತು ಆತನ ಗೆಳತಿಯನ್ನು ಥಳಿಸಿ, ನಂತರ ಅವರಿಬ್ಬರನ್ನು ವಿವಸ್ತ್ರಗೊಳಿಸಿದರು. ಇದಾದ ಬಳಿಕ ಹೆಗಲ ಮೇಲೆ ಕಟ್ಟಿಗೆ ಇಟ್ಟು, ಅವರ ಕೈಗಳನ್ನು ಕಟ್ಟಿಗೆಗೆ ಕಟ್ಟಿ ಇಬ್ಬರನ್ನೂ ಬೆತ್ತಲೆಯಾಗೇ ಇಡೀ ಗ್ರಾಮವನ್ನು ಸುತ್ತಾಡಿಸಿದ್ದಾರೆ.
ಬಂಧನ: ಕೊಂಡಗಾಂವ್ ಎಸ್ಪಿ ದಿವ್ಯಾಂಗ್ ಪಟೇಲ್ ಮಾತನಾಡಿ, ವಿಷಯದ ಗಂಭೀರತೆಯನ್ನು ಅರಿತುಕೊಂಡು ವಿಶೇಷ ತಂಡವನ್ನು ರಚಿಸಿ ತಕ್ಷಣವೇ ಸ್ಥಳಕ್ಕೆ ಕಳುಹಿಸಿದ್ದೇವೆ. ಸಂತ್ರಸ್ತ ಮತ್ತು ಸಂತ್ರಸ್ತೆಯನ್ನು ವಿಚಾರಣೆ ನಡೆಸಲಾಗಿದೆ. ಅವರ ಹೇಳಿಕೆಯ ಆಧಾರದ ಮೇಲೆ ಸಂತ್ರಸ್ತ ಯುವಕನ ಪತ್ನಿ ಸೇರಿದಂತೆ ಒಟ್ಟು 4 ಜನರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಈ ವಿಷಯದ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಷ್ಟು ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ ಎಂದರು. ಸದ್ಯ ಈ ಘಟನೆಯ ವಿಡಿಯೋ ಮತ್ತು ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ.