ETV Bharat / bharat

ಪೆಟ್ರೋಲ್ ಹಾಕಿ ಸುಡುವುದಾಗಿ ಯುವತಿಗೆ ಬ್ಲ್ಯಾಕ್​ಮೇಲ್: ಆರೋಪಿ ಶಾರುಖ್ ಬಂಧನ - ಪ್ರಾಣ ಉಳಿಸಿಕೊಳ್ಳಲು ಓಡಿದ ಬಾಲಕಿ

ಸೆ. 7ರಂದು ಶಾರುಖ್ ಭೇಟಿಯಾಗಲು ಕರೆ ಮಾಡುತ್ತಿದ್ದ ಎಂದು ಸಂತ್ರಸ್ತೆ ಹೇಳಿದ್ದಾಳೆ. 9 ಗಂಟೆಗೆ ಗಾವಾ ಚೌಕ್‌ಗೆ ಬರದಿದ್ದರೆ ಮನೆಗೆ ಬಂದು ಕೊಲೆ ಮಾಡುವುದಾಗಿ ಶಾರುಖ್ ಬೆದರಿಕೆ ಹಾಕುತ್ತಿದ್ದ. ಆಕೆ ಗವಾ ಚೌಕ್ ರುದ್ರಾಪುರಕ್ಕೆ ಬಂದಾಗ ಶಾರುಖ್ ಆಕೆಯೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಾ ಕಿರುಕುಳ ನೀಡಿದ್ದಾನೆ ಮತ್ತು ತನ್ನೊಂದಿಗೆ ಬರುವಂತೆ ಒತ್ತಾಯಿಸಿದ್ದಾನೆ.

ಪೆಟ್ರೋಲ್ ಹಾಕಿ ಸುಡುವುದಾಗಿ ಯುವತಿಗೆ ಬ್ಲ್ಯಾಕ್​ಮೇಲ್
shahrukh-of-rudrapur-threatens-to-burn-girl-
author img

By

Published : Sep 8, 2022, 6:00 PM IST

ರುದ್ರಪುರ: ಉಧಮ್ ಸಿಂಗ್ ನಗರ ಹೋಬಳಿಯ ರುದ್ರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾಗಲ್ ಪ್ರೇಮಿ ಶಾರುಖ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್​ನಲ್ಲಿ ಅಂಕಿತಾ ಎಂಬ ಯುವತಿಗಾದ ಗತಿಯೇ ನಿನಗಾಗಲಿದೆ ಎಂದು ಈತ ಯುವತಿಯೊಬ್ಬಳಿಗೆ ಬೆದರಿಕೆ ಹಾಕುತ್ತಿದ್ದನಂತೆ. ಸಂತ್ರಸ್ತೆಯ ದೂರಿನ ಆಧಾರದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತ ಯುವತಿ ಹೇಳುವುದೇನು?: ಯುವತಿಯು ಪೊಲೀಸರಿಗೆ ನೀಡಿದ ಮಾಹಿತಿಯ ಪ್ರಕಾರ, ಆಕೆ ರುದ್ರಪುರ ಠಾಣೆ ವ್ಯಾಪ್ತಿಯಲ್ಲಿ ತನ್ನ ಸಹೋದರನೊಂದಿಗೆ ವಾಸಿಸುತ್ತಾಳೆ. ಪಾಲಕರ ನಿಧನದ ನಂತರ ಇವರಿಬ್ಬರೇ ವಾಸವಾಗಿದ್ದರು. ವರ್ಷದ ಹಿಂದೆ ಸಹೋದರ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಿಸಿದ್ದನು. ಕ್ಯಾಮೆರಾ ಇನ್​ಸ್ಟಾಲ್ ಮಾಡಲು ಬಂದಿದ್ದ ಯುವಕನೊಬ್ಬ ಅವನ್ನು ತನ್ನ ಮೊಬೈಲ್​ನಲ್ಲಿಯೂ ಲೈವ್ ಮಾಡಿಕೊಂಡಿದ್ದ. ಈತ ತನ್ನ ಹೆಸರನ್ನು ರಾಜಕುಮಾರ ಎಂದು ಹೇಳಿಕೊಂಡಿದ್ದು, ಯುವತಿ ಹಾಗೂ ಆತನ ನಡುವೆ ಪರಿಚಯ ಬೆಳೆದಿದೆ.

ಆತ ಶಾರುಖ್, ರಾಜಕುಮಾರ ಅಲ್ಲ: ಪರಿಚಯ ಬೆಳೆದ ನಂತರ ಆತ ಮನೆಗೆ ಆಗಾಗ ಬರತೊಡಗಿದ್ದಾನೆ. ಆಕೆಯೊಂದಿಗೆ ಮದುವೆಯಾಗುವ ಪ್ರಸ್ತಾವನೆಯನ್ನೂ ಆರೋಪಿ ಇಟ್ಟಿದ್ದಾನೆ. ಆಗ ಅದು ಹೇಗೋ ಆರೋಪಿಯ ನಿಜನಾಮ ಶಾರುಖ್ ಎಂದು ಗೊತ್ತಾಗಿದೆ. ಈತ ಈಗಾಗಲೇ ಹಲವಾರು ಯುವತಿಯರಿಗೆ ಮೋಸ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಇದೆಲ್ಲ ತಿಳಿದ ಯುವತಿಯು ಆತನೊಂದಿಗೆ ಮಾತು ನಿಲ್ಲಿಸಿದ್ದಾಳೆ.

ಬ್ಲ್ಯಾಕ್‌ಮೇಲ್ ಮಾಡಿ ಕೊಲೆ ಬೆದರಿಕೆ ಹಾಕುತ್ತಿದ್ದ: ಕಳೆದ ಎರಡು ತಿಂಗಳಿಂದ ಆರೋಪಿ ಯುವಕ ಆಕೆಗೆ ಮಾನಸಿಕ ಹಾಗೂ ಅಸಭ್ಯವಾಗಿ ಕಿರುಕುಳ ನೀಡುತ್ತಿದ್ದ. ಇದರೊಂದಿಗೆ ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಕೊಲೆ ಬೆದರಿಕೆಯನ್ನೂ ಹಾಕುತ್ತಿದ್ದ. ತನ್ನ ಮಾತು ಕೇಳದಿದ್ದರೆ ಜಾರ್ಖಂಡ್‌ನಲ್ಲಿ ಅಂಕಿತಾಗೆ ಆದ ಸ್ಥಿತಿಯೇ ನಿನಗೂ ಬರಲಿದೆ ಎಂದು ಹೇಳಿ ಪೆಟ್ರೋಲ್ ಸುರಿದು ಸಜೀವವಾಗಿ ಸುಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

ಭೇಟಿಯಾಗಲು ಕರೆ ಮಾಡಿದ ಅಸಭ್ಯ ಕೃತ್ಯ: ನಿನ್ನೆ ಅಂದರೆ ಸೆ. 7ರಂದು ಶಾರುಖ್ ಭೇಟಿಯಾಗಲು ಕರೆ ಮಾಡುತ್ತಿದ್ದ ಎಂದು ಸಂತ್ರಸ್ತೆ ಹೇಳಿದ್ದಾಳೆ. 9 ಗಂಟೆಗೆ ಗಾವಾ ಚೌಕ್‌ಗೆ ಬರದಿದ್ದರೆ ಮನೆಗೆ ಬಂದು ಕೊಲೆ ಮಾಡುವುದಾಗಿ ಶಾರುಖ್ ಬೆದರಿಕೆ ಹಾಕುತ್ತಿದ್ದ. ಆಕೆ ಗವಾ ಚೌಕ್ ರುದ್ರಾಪುರಕ್ಕೆ ಬಂದಾಗ ಶಾರುಖ್ ಆಕೆಯೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಾ ಕಿರುಕುಳ ನೀಡಿದ್ದಾನೆ ಮತ್ತು ತನ್ನೊಂದಿಗೆ ಬರುವಂತೆ ಒತ್ತಾಯಿಸಿದ್ದಾನೆ.

ಪ್ರಾಣ ಉಳಿಸಿಕೊಳ್ಳಲು ಓಡಿದ ಬಾಲಕಿ: ಗಲಾಟೆ ಜಾಸ್ತಿಯಾಗುತ್ತಿದ್ದಂತೆ ದಾರಿಹೋಕರು ಅಲ್ಲಿ ಜಮಾಯಿಸಿದ್ದು, ಸಂತ್ರಸ್ತೆ ಹೇಗೋ ಶಾರುಖ್ ನಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾಳೆ. ಇದೀಗ ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಶಾರುಖ್ ನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸಿ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಕೊತ್ವಾಲ್ ವಿಕ್ರಮ್ ರಾಥೋರ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.