ETV Bharat / bharat

ಶಾರುಖ್​ ಖಾನ್​ ಬಂಗಲೆ 'ಮನ್ನತ್​' ಹೊಸ ನಾಮಫಲಕದ ಬೆಲೆ ಎಷ್ಟು ಲಕ್ಷ ಗೊತ್ತಾ?

author img

By

Published : Apr 26, 2022, 1:37 PM IST

ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಉತ್ತಮ ಇಂಟೀರಿಯರ್​ ಡಿಸೈನರ್​ ಆಗಿದ್ದು, ಅವರೇ ಈ ನಾಮಫಲಕವನ್ನು ವಿನ್ಯಾಸಗೊಳಿಸಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ ಈ ನಾಮಫಲಕದ ಬೆಲೆ 20 ರಿಂದ 25 ಲಕ್ಷ ಎಂದು ಹೇಳಲಾಗುತ್ತಿದೆ.

shah rukh khan bungalow mannat name plate worth of 20 lakh
ಶಾರುಖ್​ ಖಾನ್​ ಬಂಗಲೆ ಮನ್ನತ್​ ನಾಮಫಲಕ

ಹೈದರಾಬಾದ್: ಬಾಲಿವುಡ್​ನ 'ಬಾದ್ ಶಾ' ಶಾರುಖ್ ಖಾನ್ ಒಂದಿಲ್ಲೊಂದು ವಿಷಯಕ್ಕೆ ಸದಾ ಸುದ್ದಿಯಲ್ಲಿರುವ ನಟ. ಅದರಲ್ಲೂ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಕ ವಿಚಾರಕ್ಕೆ ಸುದ್ದಿಯಲ್ಲಿರುವುದೇ ಹೆಚ್ಚು. ಇದೀಗ ಶಾರುಖ್​ ಖಾನ್​ ಅವರು ಇತ್ತೀಚೆಗೆ ಬದಲಾಯಿಸಿರುವ ತಮ್ಮ ಬಂಗಲೆಯ 'ಮನ್ನತ್​' ನಾಮಫಲಕದಿಂದಾಗಿ ಸುದ್ದಿಯಲ್ಲಿದ್ದಾರೆ.

ಇತ್ತೀಚೆಗೆ, ತಮ್ಮ ಬಂಗಲೆ 'ಮನ್ನತ್' ನಾಮಫಲಕವನ್ನು ಬದಲಾಯಿಸಿರುವ ನಟ, ನಂತರ ಅವರ ಮನೆ ಹೊರಗೆ ಸೇರಿದ್ದ ಅಭಿಮಾನಿಗಳು ಮತ್ತು ನಾಮಫಲಕದ ಜೊತೆ ಫೋಟೋ ಕ್ಲಿಕ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಶಾರುಖ್ ಮನೆ 'ಮನ್ನತ್' ಹೊರಗಿರುವ ಹೊಸ ನಾಮಫಲಕವನ್ನು ನೋಡಿ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಈ ನಾಮಫಲಕದ ಬೆಲೆ ಜನರ ಕಿವಿ ನೆಟ್ಟಗಾಗುವಷ್ಟು ದುಬಾರಿಯಾಗಿದೆ ಎಂಬುದು ಈಗ ಸುದ್ದಿ.

ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಉತ್ತಮ ಇಂಟೀರಿಯರ್​ ಡಿಸೈನರ್​ ಆಗಿದ್ದು, ಅವರೇ ಈ ನಾಮಫಲಕವನ್ನು ವಿನ್ಯಾಸಗೊಳಿಸಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ ಈ ನಾಮಫಲಕದ ಬೆಲೆ 20 ರಿಂದ 25 ಲಕ್ಷ ಎಂದು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಸಾಮಾನ್ಯ ವ್ಯಕ್ತಿಗೆ ಇಷ್ಟು ದುಬಾರಿ ನಾಮಫಲಕ ಖರೀದಿಸುವುದು ಕಷ್ಟ.

ಶಾರುಖ್​ ಖಾನ್​ ಸಿನಿಮಾ ಬಗ್ಗೆ ಮಾತನಾಡುವುದಾದರೆ, ರಾಜ್​ಕುಮಾರ್​ ಹಿರಾನಿ ಅವರ ಜೊತೆ 'ಡುಂಕಿ' ಚಿತ್ರ ಘೋಷಣೆಯಾಗಿದೆ. ಶಾರುಖ್ ಮತ್ತು ರಾಜ್‌ಕುಮಾರ್ ಹಿರಾನಿ ಒಟ್ಟಿಗೆ ಕೆಲಸ ಮಾಡುತ್ತಿರುವುದು ಇದೇ ಮೊದಲು. ಶಾರುಖ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರಾಜ್‌ಕುಮಾರ್ ಹಿರಾನಿ ಅವರೊಂದಿಗೆ ವೀಡಿಯೊ ಪೋಸ್ಟ್​​ವೊಂದನ್ನು ಹಂಚಿಕೊಂಡಿದ್ದಾರೆ.

ವಿಡಿಯೋ ಜೊತೆಗೆ ಆತ್ಮೀಯ ರಾಜ್‌ಕುಮಾರ್ ಸರ್, ನೀವು ನನ್ನ ಸಾಂತಾಕ್ಲಾಸ್. ನೀವು ಪ್ರಾರಂಭಿಸಿ ನಾನು ಸಮಯಕ್ಕೆ ತಲುಪುತ್ತೇನೆ. ವಾಸ್ತವವಾಗಿ, ನಾನು ಸೆಟ್​ನಲ್ಲಿ ಇರಲು ಬಯಸುತ್ತೇನೆ, ನಾನು ಅಂತಿಮವಾಗಿ ನಿಮ್ಮೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. #Dunki 22ನೇ ಡಿಸೆಂಬರ್ 2023 ರಂದು ಚಿತ್ರಮಂದಿರಗಳಲ್ಲಿ ಎಂದು ಬರೆದುಕೊಂಡಿದ್ದಾರೆ.

ಇದಲ್ಲದೇ ಶಾರುಖ್ ಖಾನ್ ತಮ್ಮ ಬಹು ನಿರೀಕ್ಷಿತ ಚಿತ್ರ 'ಪಠಾಣ್' ಚಿತ್ರೀಕರಣವನ್ನು ಸ್ಪೇನ್‌ನಲ್ಲಿ ಪೂರ್ಣಗೊಳಿಸಿದ್ದಾರೆ. ಇದರಲ್ಲಿ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳಲಿ ಶಾರುಖ್​ ಖಾನ್​ ಜೊತೆ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಾರುಖ್ ಸೌತ್ ನಿರ್ದೇಶಕ ಅಟ್ಲಿ ಅವರ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: ಕಿಯಾರಾ ಸಿದ್ಧಾರ್ಥ್ ಮಲ್ಹೋತ್ರಾ ಬ್ರೇಕಪ್ ವದಂತಿ: ಟರ್ಕಿಶ್ ಆಹಾರ ಸವಿದ ಸಿದ್ದಾರ್ಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.