ಪ್ರಯಾಗರಾಜ್ : ಜಿಲ್ಲೆಯಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಮದವೇರಿದ್ದ ಆನೆ ಕೆಲಕಾಲ ಆತಂಕ ಸೃಷ್ಟಿಸಿತ್ತು. ಆನೆ ಬೇಕಾಬಿಟ್ಟಿ ಓಡಾಡುತ್ತಿದ್ದ ಹಾಗೆ, ಭೀತಿಯುಂಟಾಗಿ ಜನ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ವಿವಾಹ ಸಮಾರಂಭಕ್ಕೆ ಹಾಕಲಾಗಿದ್ದ ಪೆಂಡಾಲ್ನ ಸಹ ಹರಿದು ಹಾಕಿದೆ. ಕಾರ್ಯಕ್ರಮಕ್ಕೆ ಬಂದಿದ್ದ ಜನರ ವಾಹನವನ್ನು ಸೊಂಡಿಲಿನಿಂದ ಎಸೆದು, ಕಾಲಿನಿಂದ ತುಳಿದು ನಜ್ಜುಗುಜ್ಜು ಮಾಡಿತು.
ಪಕ್ಕದಲ್ಲೇ ಇದ್ದ ಮದುಮಗ ದೇವ್ ಆನಂದ್ ತ್ರಿಪಾಠಿ ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಕುದುರೆ ಮೇಲಿಂದ ಜಿಗಿದು ಓಡಿದ್ದಾನೆ. ಜೂನ್ 11ರಂದು ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಗಂಗಾಧರ್ ಧವಲ್ ಜೈಸ್ವಾಲ್, ಯಾರೋ ಪಟಾಕಿ ಸಿಡಿಸಿದ್ದರಿಂದ ಆನೆ ಗಾಬರಿಗೊಂಡಿದೆ. ಹಾಗಾಗಿ, ಅದನ್ನು ನಿಯಂತ್ರಿಸುವುದಕ್ಕೆ ಆಗಿಲ್ಲ ಎಂದರು.
ಇದನ್ನೂ ಓದಿ:ವಿದ್ಯುತ್ ತಗುಲಿ ಸಾವನ್ನಪ್ಪಿದ ಗಜರಾಜ.. ಸಮಾಧಿ ಬಳಿ ರಾತ್ರಿಯೆಲ್ಲಾ ಘೀಳಿಟ್ಟ ಆನೆಗಳ ಹಿಂಡು