ETV Bharat / bharat

ಕೇರಳ ರಾಜ್ಯಪಾಲರ ವಿರುದ್ಧ ಎಸ್‌ಎಫ್‌ಐ ಕಾರ್ಯಕರ್ತರ ಪ್ರತಿಭಟನೆ: ಕ್ಯಾಲಿಕಟ್​ ವಿವಿಯಲ್ಲಿ ಹೈಡ್ರಾಮ - ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

ಕ್ಯಾಲಿಕಟ್​ ವಿಶ್ವವಿದ್ಯಾಲಯಕ್ಕೆ ಆಗಮಿಸಿರುವ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಎಸ್‌ಎಫ್‌ಐ ಕಾರ್ಯಕರ್ತರು ಹಿಂದಿರುಗುವಂತೆ ಬ್ಯಾನರ್​ಗಳನ್ನು ಹಾಕಿದ್ದಾರೆ. ಈ ಅಭದ್ರತೆಗೆ ಆರಿಫ್ ಮೊಹಮ್ಮದ್ ಖಾನ್ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.

Protest by SFI workers
ಎಸ್‌ಎಫ್‌ಐ ಕಾರ್ಯಕರ್ತರ ಪ್ರತಿಭಟನೆ
author img

By ETV Bharat Karnataka Team

Published : Dec 18, 2023, 10:21 AM IST

ಮಲಪ್ಪುರಂ (ಕೇರಳ) : ಸಾರ್ವಜನಿಕ ಕಾರ್ಯಕ್ರಮಕ್ಕಾಗಿ ಕುಲಪತಿಯೂ ಆಗಿರುವ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕ್ಯಾಲಿಕಟ್​ ವಿಶ್ವವಿದ್ಯಾಲಯಕ್ಕೆ ಆಗಮಿಸಿದ್ದು, ಕ್ಯಾಂಪಸ್​ನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ರಾಜ್ಯಪಾಲರ ವಿರುದ್ಧ ಎಸ್‌ಎಫ್‌ಐ ಬ್ಯಾನರ್‌ಗಳನ್ನು ಹಾಕಿದ್ದು ಅವುಗಳನ್ನು ಪೊಲೀಸರು ತೆರವುಗೊಳಿಸಿದ್ದರು. ಆದರೆ ಮತ್ತೆ ಎಸ್‌ಎಫ್‌ಐ ಕಾರ್ಯಕರ್ತರು ಗವರ್ನರ್​ ಮೊಹಮ್ಮದ್ ಆರಿಫ್​ ಖಾನ್ ವಿರುದ್ಧದ ಬ್ಯಾನರ್​ಗಳನ್ನು ಅಳವಡಿಸಿದೆ. ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ಅತಿಥಿ ಗೃಹದ ಹೊರಗೆ ಹಾಕಿರುವ ಬ್ಯಾನರ್​ಗಳಲ್ಲಿ "ಸಂಘಿ" ಮತ್ತು ''ವಾಪಸ್​ ಜಾವೋ​​​" ಎಂದು ಬರೆಯಲಾಗಿದೆ.

ಈ ಕುರಿತು ಕಿಡಿಕಾರಿರುವ ರಾಜ್ಯಪಾಲರು ಈ ಬ್ಯಾನರ್​ಗಳನ್ನು ರಾಜ್ಯ ಪೊಲೀಸರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿರ್ದೇಶನದ ಮೇರೆಗೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ವಿಶ್ವವಿದ್ಯಾಲಯದ ಕೆಲವು ಟಿವಿ ದೃಶ್ಯಗಳಲ್ಲಿ ರಾಜ್ಯಪಾಲ ಆರಿಫ್​ ರಾಜಭವನದಲ್ಲಿ ತಮ್ಮ ಕಾರ್ಯದರ್ಶಿಯೊಂದಿಗೆ ಫೋನ್​ ಕರೆಯಲ್ಲಿ ಮಾತನಾಡುತ್ತಿರುವುದು ಕಂಡು ಬಂದಿದೆ. ತಮ್ಮ ವಿರುದ್ಧದ ಬ್ಯಾನರ್​​ಗಳ ಕುರಿತು ಪೊಲೀಸರಿಗೆ ಮಾಹಿತಿ ಇದೆಯಾ ಎಂದು ತಿಳಿದುಕೊಳ್ಳಲು ಉಪಕುಲಪತಿಗೆ ಒಂದು ನೋಟಿಸ್​ ಕಳುಹಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ವಿಶ್ವವಿದ್ಯಾನಿಲಯದ ವಿವಿಧ ಭಾಗಗಳಲ್ಲಿ ಎಸ್‌ಎಫ್‌ಐ ಕುಲಪತಿ ವಿರುದ್ಧವೇ ಬ್ಯಾನರ್​ಗಳನ್ನು ಹಾಕಲು ಹೇಗೆ ಅನುಮತಿ ಮಾಡಿಕೊಟ್ಟಿತು ಎಂಬುದರ ಮಾಹಿತಿ ವಿವರಣೆಯನ್ನು ವಿವಿಯ ಉಪಕುಲಪತಿ ನೀಡಬೇಕು ಎಂದು ತಿಳಿಸಿದರು.

ತಮ್ಮ ವಿರುದ್ಧ ಹಾಕಲಾಗಿರುವ ಬ್ಯಾನರ್​ಗಳನ್ನು ಪೊಲೀಸರು ತೆಗೆಯದೇ ಇದ್ದುದಕ್ಕೆ ಅವರ ವಿರುದ್ಧ ಕಿಡಿಕಾರಿದರು. ಈ ಬ್ಯಾನರ್​ಗಳು ಇಲ್ಲಿಗೆ ಹೇಗೆ ಬಂದವು. ಎಲ್ಲಿಯಾದರು ಮುಖ್ಯಮಂತ್ರಿಗಳು ಇಲ್ಲಿ ಇರುತ್ತಿದ್ದರೆ ಹೀಗೆ ಆಗಲು ಬಿಡುತ್ತಿದ್ದೀರಾ? ನಿಮ್ಮನ್ನೇ ಕೇಳುತ್ತಿದ್ದೇನೆ (ಪೊಲೀಸರನ್ನು). ನೀವು ನನಗೆ ಅವಮಾನ ಮಾಡುತ್ತಿದ್ದೀರಾ?. ನೀವು ಕಾನೂನು ಮತ್ತು ಸುವ್ಯವಸ್ಥೆಯನ್ನು ಅಣಕಿಸಲು ಪ್ರಯತ್ನಿಸುತ್ತಿದ್ದೀರಿ ಎಂದು ಪೊಲೀಸರಿಗೆ ವಿರುದ್ಧ ವಾಗ್ದಾಳಿ ನಡೆಸಿದರು. ಈಗ ನೀವು ಸುಮ್ಮನಿದ್ದರೂ 3-4 ತಿಂಗಳಲ್ಲಿ ನೀವು ಉತ್ತರಿಸಬೇಕಾಗುತ್ತದೆ. ಈ ಮುಖ್ಯಮಂತ್ರಿ ಶಾಶ್ವತವಲ್ಲವೆಂದರು. ಮುಂದುವರೆದು ಕ್ಯಾಲಿಕಟ್​ ವಿಶ್ವವಿದ್ಯಾಲಯವನ್ನು ಸಿಪಿಐ(ಎಂ) ನ ವಿದ್ಯಾರ್ಥಿ ಘಟಕವಾದ ಎಸ್‌ಎಫ್‌ಐ ನಡೆಸುತ್ತಿರುವಂತೆ ಕಾಣುತ್ತಿದೆ ಎಂದು ಕೆಂಡಾಮಂಡಲವಾದರು. ಇವರ ಕೋಪ ನೋಡಿದ ಪೊಲೀಸರು ತಕ್ಷಣವೇ ಹಾಕಲಾಗಿದ್ದ ಬ್ಯಾನರ್​ಗಳನ್ನು ತೆಗೆದರು.

ಇದಾದ ಬಳಿಕ ಅಲ್ಲಿಗೆ ಎಸ್‌ಎಫ್‌ಐ ಕಾರ್ಯಕರ್ತರು ಆಗಮಿಸಿ ಕುಲಪತಿಯನ್ನು ಕೆಳಗಿಳಿಸುವಂತೆ ಬ್ಯಾನರ್‌ಗಳನ್ನು ಮತ್ತೆ ಹಾಕಿದರು. ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿ, ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: 13 ವಿರೋಧ ಪಕ್ಷಗಳ ಸಂಸದರ ಅಮಾನತು: ಆದೇಶ ಹಿಂಪಡೆಯುವಂತೆ ಅಧೀರ್ ರಂಜನ್ ಚೌಧರಿ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.