ETV Bharat / bharat

'ಇಬ್ಬರು ಸಿದ್ಧ ವಯಸ್ಕರ ನಡುವಿನ ಲೈಂಗಿಕ ಸಂಬಂಧ ಅತ್ಯಾಚಾರ ಎಂದು ಪರಿಗಣಿಸುವಂತಿಲ್ಲ': ಹೈಕೋರ್ಟ್​ - ಕೇರಳ ಹೈಕೋರ್ಟ್​ ಆದೇಶ

ಇಬ್ಬರು ಸಿದ್ಧ ವಯಸ್ಕರ ನಡುವಿನ ಲೈಂಗಿಕ ಸಂಬಂಧ ಅತ್ಯಾಚಾರ ಎಂದು ಪರಿಗಣಿಸುವಂತಿಲ್ಲ ಎಂದು ಕೇರಳ ಹೈಕೋರ್ಟ್​​ ಮಹತ್ವದ ಆದೇಶ ಹೊರಹಾಕಿದೆ.

Kerala High Court
Kerala High Court
author img

By

Published : Jul 8, 2022, 7:34 PM IST

ಕೊಚ್ಚಿ(ಕೇರಳ): ಇಬ್ಬರು ಸಿದ್ಧ ವಯಸ್ಕರ ನಡುವಿನ ಲೈಂಗಿಕ ಸಂಬಂಧವನ್ನ ಸೆಕ್ಷನ್​​ 376ರ ಅಡಿ ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್​ ಮಹತ್ವದ ಆದೇಶ ಹೊರಹಾಕಿದೆ. ಇತ್ತಿಚೀನ ದಿನಗಳಲ್ಲಿ ಯುವ ವಯಸ್ಕರರಲ್ಲಿ ಇಷ್ಟದ ಲೈಂಗಿಕ ಸಂಬಂಧ ನಡೆಯುತ್ತಿವೆ ಎಂದು ಅಭಿಪ್ರಾಯಪಟ್ಟಿದೆ.

ದಂಪತಿಗಳು ತಮ್ಮ ನಡುವಿನ ಸಂಬಂಧ ಮುರಿದುಕೊಂಡ ಬಳಿಕ ಹೆಚ್ಚಿನ ಸಂಖ್ಯೆಯ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದಿರುವ ಕೇರಳ ಹೈಕೋರ್ಟ್, ಮದುವೆಯಾಗುವುದಾಗಿ ಸುಳ್ಳು ಭರವಸೆ ಮೇಲೆ ಬಲವಂತವಾಗಿ ಲೈಂಗಿಕ ಸಂಬಂಧ ಬೆಳೆಸುತ್ತಿದ್ದು, ಅಂತಹ ಪ್ರಕರಣಗಳಲ್ಲಿ ಈ ಆದೇಶ ಸಂಬಂಧ ಪಡುವುದಿಲ್ಲ ಎಂದೂ ನ್ಯಾಯಮೂರ್ತಿ ಬೆಚ್ಚು ಕುರಿಯನ್​ ಥಾಮಸ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಏನಿದು ಪ್ರಕರಣ?: ನಾಥ್​ ಎಂಬ ವಕೀಲ ತಮ್ಮ ಸಹೋದ್ಯೋಗಿ ಜೊತೆ ನಾಲ್ಕು ವರ್ಷಗಳಿಂದ ಒಮ್ಮತದ ಸಂಬಂಧ ಹೊಂದಿದ್ದರು. ಆದರೆ, ಬೇರೆ ಮಹಿಳೆ ಜೊತೆ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಇದರ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ನಾಥ್​ ಮದುವೆಯಾಗಲು ನಿರ್ಧರಿಸಿದ್ದ ಯುವತಿಯನ್ನ ಹೋಟೆಲ್​ನಲ್ಲಿ ಭೇಟಿಯಾಗಿದ್ದರು. ಈ ವೇಳೆ ಆತ್ಮಹತ್ಯೆ ಮಾಡಿಕೊಳ್ಳಲು ಸಹ ಯತ್ನಿಸಿದ್ದಳು.

ಇದನ್ನೂ ಓದಿರಿ: ಅಮರನಾಥದ ಪವಿತ್ರ ಗುಹಾ ದೇಗುಲದ ಬಳಿ ಮೇಘಸ್ಫೋಟ: ಐವರ ಸಾವು

ಪ್ರಕರಣದ ಬಗ್ಗೆ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಕಳೆದ ತಿಂಗಳು ನಾಥ್​ ಅವರನ್ನ ಬಂಧನ ಮಾಡಲಾಗಿತ್ತು. ಆದರೆ, ಕೇರಳ ಹೈಕೋರ್ಟ್​ನಲ್ಲಿ ಅವರಿಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಈ ವೇಳೆ ನಾಥ್ ಪರ ವಕೀಲರು ವಾದ ಮಂಡಿಸಿದ್ದು, ಮಹಿಳೆ ಜೊತೆ ನಡೆದ ಲೈಂಗಿಕ ಸಂಬಂಧ ಒಮ್ಮತದಿಂದ ಕೂಡಿತ್ತು. ಇದು ಸಂಪೂರ್ಣವಾಗಿ ಒಪ್ಪಿಗೆ ಮತ್ತು ಪ್ರೀತಿಯಿಂದ ನಡೆದಿದೆ ಎಂದು ಹೇಳಿದ್ದಾರೆ.

ವಾದ - ಪ್ರತಿವಾದ ಆಲಿಸಿರುವ ಕೋರ್ಟ್​​ ಪ್ರಕರಣ ಗಂಭೀರ ಸ್ವರೂಪದಾಗಿದೆ. ಹೀಗಾಗಿ, ಆರೋಪಿ ಬೇರೆ ಕಡೆ ಪಲಾಯನ ಮಾಡುವಂತಿಲ್ಲ. ಆದರೆ, ಇಬ್ಬರು ಸಿದ್ಧ ವಯಸ್ಕರ ನಡುವಿನ ಲೈಂಗಿಕ ಸಂಬಂಧ ಅತ್ಯಾಚಾರ ಎಂದು ಪರಿಗಣಿಸುವಂತಿಲ್ಲ ಎಂದು ಕೋರ್ಟ್ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.