ಹೈದರಾಬಾದ್(ತೆಲಂಗಾಣ): ಎಲ್ಕೆಜಿ ಓದುತ್ತಿದ್ದ ಹಸುಳೆಯ ಮೇಲೆ ಅದೇ ಶಾಲೆಯ ವಾಹನ ಚಾಲಕ ಲೈಂಗಿಕ ಕಿರುಕುಳ ನೀಡಿದ್ದು, ವಿಷಯ ತಿಳಿದ ಮಗುವಿನ ಕುಟುಂಬಸ್ಥರು ಚಾಲಕನನ್ನು ಥಳಿಸಿ, ಪೊಲೀಸರಿಗೆ ದೂರು ನೀಡಿದ್ದಾರೆ. ಕೀಚಕನನ್ನು ಪೊಲೀಸರು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.
ಬಂಜಾರ ಹಿಲ್ಸ್ನ ಶಾಲೆಯೊಂದರಲ್ಲಿ ಎಲ್ಕೆಜಿ ಓದುತ್ತಿರುವ 4 ವರ್ಷದ ಬಾಲಕಿಗೆ ಆ ಶಾಲೆಯ ಪ್ರಾಂಶುಪಾಲರ ವಾಹನದ ಚಾಲಕ 2 ತಿಂಗಳಿಂದ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದರಿಂದ ಮಗು ದಿನಗೂ ಪೇಚು ಮೋರೆ ಹಾಕಿಕೊಂಡು ಮನೆಗೆ ಬರುತ್ತಿತ್ತು.
ಇದರಿಂದ ಅನುಮಾನಗೊಂಡ ಪೋಷಕರು ಎರಡು ದಿನಗಳ ಹಿಂದೆ ಮಗುವಿನ ಸಂತೈಸಿ ಏನೆಂದು ಪ್ರಶ್ನಿಸಿದಾಗ ಮಗು ಚಾಲಕನ ಕ್ರೂರತ್ವದ ಬಗ್ಗೆ ಬಾಯ್ಬಿಟ್ಟಿದ್ದಾಳೆ. ಇದರಿಂದ ಕ್ರೋಧಗೊಂಡ ಕುಟುಂಬಸ್ಥರು ಹಾಗೂ ಸ್ನೇಹಿತರು ಶಾಲೆಗೆ ತೆರಳಿ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಆರೋಪಿ ರಜಿನಿಕುಮಾರ್(36) 10 ವರ್ಷಗಳಿಂದ ಶಾಲೆಯ ಪ್ರಾಂಶುಪಾಲರ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ವಿಷಯ ತಿಳಿದು ಶಾಲೆಗೆ ಬಂದ ಬಂಜಾರ ಹಿಲ್ಸ್ ಪೊಲೀಸರು ಪಾಪಿ ರಜಿನಿಕುಮಾರ್ನನ್ನು ಬಂಧಿಸಿದ್ದಾರೆ.
ಬಳಿಕ ಶಾಲೆಯ ಪ್ರಾಂಶುಪಾಲ ಹಾಗೂ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಗುವನ್ನು ಸಹಾಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.
ಈ ವಿಷಯ ಹಬ್ಬಿದ ಬಳಿಕ ಜಮಾಯಿಸಿದ ಸ್ಥಳೀಯರು ಬಂಜಾರಹಿಲ್ಸ್ ಠಾಣೆಗೆ ಆಗಮಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಘೋಷಣೆ ಕೂಗಿದರು. ಮಾಜಿ ಎಂಎಲ್ಸಿ ರಾಮುಲು ನಾಯ್ಕ್ ನೇತೃತ್ವದಲ್ಲಿ ಹಲವು ಕಾಂಗ್ರೆಸ್ ಮುಖಂಡರು ಪ್ರತಿಭಟನೆ ಕೂಡ ನಡೆಸಿದರು.
ಓದಿ: ಚಾಕು ಹಿಡಿದು ದರೋಡೆಗೆ ಬಂದ ಕಿರಾತಕ.. ವೀರನಾರಿ ಮ್ಯಾನೇಜರ್ಗೆ ಹೆದರಿ ಕಳ್ಳ ಪರಾರಿ- ವಿಡಿಯೋ