ETV Bharat / bharat

ಅವಕಾಶ ನೀಡುವುದಾಗಿ ನಂಬಿಸಿ ನಟಿ ಮೇಲೆ ಅತ್ಯಾಚಾರ ಆರೋಪ : ಖ್ಯಾತ ನಟನ ವಿರುದ್ಧ ಪ್ರಕರಣ

ಸಿನಿಮಾದಲ್ಲಿ ಅವಕಾಶ ನೀಡುವ ನೆಪದಲ್ಲಿ ಅತ್ಯಾಚಾರವೆಸಗಿರುವ ಗಂಭೀರ ಆರೋಪದಲ್ಲಿ ಖ್ಯಾತ ನಟ ವಿಜಯ್​ ಬಾಬು ವಿರುದ್ಧ ರೇಪ್​ ಕೇಸ್​ ದಾಖಲಾಗಿದೆ. ಇದರ ಬೆನ್ನಲ್ಲೇ ಫೇಸ್​ಬುಕ್ ಲೈವ್‌ಗೆ ಬಂದಿರುವ ಅವರು ತಮ್ಮ ವಿರುದ್ಧ ಬಂದಿರುವ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.

Sexual assault complaint against actor Vijay Babu

author img

By

Published : Apr 27, 2022, 3:11 PM IST

Updated : Apr 27, 2022, 4:15 PM IST

ಎರ್ನಾಕುಲಂ(ಕೇರಳ): ಸಿನಿಮಾಗಳಲ್ಲಿ ನಟನೆ ಮಾಡಲು ಹೆಚ್ಚಿನ ಅವಕಾಶ ನೀಡುವುದಾಗಿ ಭರವಸೆ ನೀಡಿ ನಟಿಯ ಮೇಲೆ ಖ್ಯಾತ ಮಲಯಾಳಂ ನಟ, ನಿರ್ದೇಶಕ ವಿಜಯ್​ ಬಾಬು ಅತ್ಯಾಚಾರವೆಸಗಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ನ ಮೇಲೆ ಅತ್ಯಾಚಾರವೆಸಗಿರುವುದಕ್ಕೆ ಸಂಬಂಧಿಸಿದಂತೆ ಕೋಝಿಕೋಡ್​​ ಮೂಲದ ನಟಿ ದೂರು ನೀಡಿದ್ದು, ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಫೇಸ್​ಬುಕ್​​ ಲೈವ್‌ಗೆ ಬಂದಿರುವ ನಟ ವಿಜಯ್​​ ಸಂತ್ರಸ್ತೆಯ ಹೆಸರು ಬಹಿರಂಗ ಮಾಡಿದ್ದಾರೆ.

ನನ್ನ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಕಾನೂನು ಪರಿಣಾಮ ಎದುರಿಸಲು ನಾನು ಸಿದ್ಧ. ಈ ಆರೋಪ ನನ್ನ ಹೆಸರಿಗೆ ಕಳಂಕ ತಂದಿದೆ. ನನ್ನ ಕುಟುಂಬ ಹಾಗೂ ಸ್ನೇಹಿತರಿಗೆ ಮುಜುಗರ ಉಂಟುಮಾಡಿದೆ ಎಂದು ಹೇಳಿದರು. ಫೇಸ್​ಬುಕ್​​ನಲ್ಲಿ ಮೇಲಿಂದ ಮೇಲೆ ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಸಂತ್ರಸ್ತೆಯ ಹೆಸರು ಹೇಳಿರುವ ನಟ, ನನ್ನ ಮೇಲೆ ಆರೋಪ ಮಾಡಿರುವ ನಟಿ ಕಳುಹಿಸಿರುವ ಅನೇಕ ಸಂದೇಶಗಳು ಸೇರಿದಂತೆ ಅನೇಕ ಪ್ರಮುಖ ಪುರಾವೆಗಳು ನನ್ನ ಬಳಿ ಇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೈಸಾ ಬಾಲಿವುಡ್‌ಗೆ ಎಂಟ್ರಿ ಕೊಡುವ ಪ್ಲಾನ್ ಮಾಡುತ್ತಿದ್ದಾರಾ?: ಪುತ್ರಿ ಬಗ್ಗೆ ಅಜಯ್ ದೇವಗನ್ ಹೇಳಿದ್ದಿಷ್ಟು!

2018ರಿಂದಲೂ ನನಗೆ ನಟಿಯ ಬಗ್ಗೆ ಗೊತ್ತಿದೆ. ಇದರಲ್ಲಿ ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಇಲ್ಲಿ ನನ್ನನ್ನು ಬಲಿಪಶು ಮಾಡುವ ಕೆಲಸ ಆಗಿದೆ. ಆಕೆಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ 2017ರಲ್ಲೂ ವಿಜಯ್ ಬಾಬು ವಿರುದ್ಧ ಗಂಭೀರ ಆರೋಪ ಕೇಳಿ ಬಂದಿತ್ತು.

Last Updated : Apr 27, 2022, 4:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.