ಇಂದೋರ್ : ನಿವೃತ್ತ ಪೊಲೀಸ್ ಅಧಿಕಾರಿಯ ಬಂಗಲೆಯಲ್ಲಿ ಮಾಂಸ ದಂಧೆ ನಡೆಸಲಾಗುತ್ತಿದೆ ಎಂಬುದಾಗಿ ಸ್ಥಳೀಯರು ನೀಡಿದ್ದ ಖಚಿತ ಮಾಹಿತಿ ಮೇರೆಗೆ ವಿಜಯ್ ನಗರ ಪೊಲೀಸರು ಗ್ರಾಹಕನ ವೇಷದಲ್ಲಿ ತೆರಳಿದ್ದು, ಈ ವೇಳೆ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರು ದಾಳಿ ನಡೆಸಿ ಮಹಿಳೆ ಸೇರಿ ನಾಲ್ಕು ಜನರನ್ನು ಬಂಧಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಗ್ರಾಹಕರಿಗೆ ಬಲೆ : ಮಾಂಸ ದಂಧೆ ನಡೆಸುತ್ತಿದ್ದ ಸ್ಥಳದಲ್ಲಿ ಅನೇಕ ಉನ್ನತ ವ್ಯಕ್ತಿಗಳ ಬಂಗಲೆಗಳಿವೆ. ಆರೋಪಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಗ್ರಾಹಕರನ್ನು ಸಂಪರ್ಕಿಸುತ್ತಿದ್ದರು.
ಗ್ರಾಹಕರಿಗೆ ಸೋಷಿಯಲ್ ಮೀಡಿಯಾದಲ್ಲಿಯೇ ಸಂಪೂರ್ಣ ಮಾಹಿತಿ ನೀಡಲಾಗುತ್ತಿತ್ತು. ವಾಟ್ಸ್‌ಆ್ಯಪ್ ಮತ್ತು ಇತರ ಕರೆಗಳು, ಸಾಮಾಜಿಕ ಮಾಧ್ಯಮಗಳ ಮೂಲಕ ಫೋಟೊಗಳನ್ನು ಕಳುಹಿಸುವುದರ ಮೂಲಕ ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತಿದ್ದರು.
ನಿವೃತ್ತ ಪೊಲೀಸ್ ಅಧಿಕಾರಿಯ ಬಂಗಲೆಯಲ್ಲಿ ಯುವತಿಯೊಂದಿಗೆ ರಾತ್ರಿಯಿಡೀ ನೃತ್ಯ ಮತ್ತು ಮದ್ಯಪಾನಕ್ಕೆ ವ್ಯವಸ್ಥೆ ಮಾಡಲಾಗುತ್ತಿತ್ತು. ಅಲ್ಲಿಗೆ ಬರುವ ಗ್ರಾಹಕರಿಗೆ ಪ್ಯಾಕೇಜ್ ಸಹ ಇವರು ನೀಡುತ್ತಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.
ಇದನ್ನೂ ಓದಿ: ಕಿಡ್ನ್ಯಾಪ್ ಕೇಸ್ ಸಂಬಂಧ ಹೇಳಿಕೆ ನೀಡಲು ಕೋರ್ಟ್ಗೆ ಬಂದ ಸಿಡಿ ಲೇಡಿ.. ಕೆಲವೇ ಕ್ಷಣದಲ್ಲಿ ಹೇಳಿಕೆ ದಾಖಲು
ಪೊಲೀಸರು ಮಹಿಳೆ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಒಬ್ಬರು ವಕೀಲರಾಗಿದ್ದಾರೆ. ಅವರು ರಾಕೆಟ್ ಆಪರೇಟರ್‌ನ ಪರಿಚಯಸ್ಥರಾಗಿದ್ದಾರೆ. ಅವರು ಸಹ ಈ ಸ್ಥಳಕ್ಕೆ ಬರುತ್ತಿದ್ದರು ಎಂದು ಹೇಳಲಾಗಿದೆ.
ನಿವೃತ್ತ ಪೊಲೀಸ್ ಅಧಿಕಾರಿ ಬಂಗಲೆ ಬಾಡಿಗೆ ಪಡೆದ ಆರೋಪಿಗಳು : ನಿವೃತ್ತ ಪೊಲೀಸ್ ಅಧಿಕಾರಿಯಿಂದ ಬಂಗಲೆಯನ್ನು ಬಾಡಿಗೆಗೆ ಪಡೆಯಲಾಗಿತ್ತು. ಈ ಇಡೀ ಪ್ರಕರಣದ ತನಿಖೆ ವೇಳೆ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರಿಂದ ಆರೋಪಿಗಳು ಈ ಬಂಗಲೆಯನ್ನು ಬಾಡಿಗೆಗೆ ಪಡೆದಿರುವುದು ತಿಳಿದು ಬಂದಿದೆ.