ETV Bharat / bharat

ಕೋವಿಡ್​ ಲಾಕ್​ಡೌನ್​​ ವೇಳೆ ಹೆಚ್ಚಿದ ಹೆಚ್​ಐವಿ ಸೋಂಕು: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

ಕೊರೊನಾ ಲಾಕ್​ಡೌನ್​ನಿಂದ ಇಡೀ ದೇಶ ತತ್ತರಿಸಿದರೆ, ಇನ್ನೊಂದೆಡೆ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ 85 ಲಕ್ಷಕ್ಕೂ ಅಧಿಕ ಜನರು ಹೆಚ್​ಐವಿ ಸೋಂಕಿಗೆ ತುತ್ತಾಗಿದ್ದಾರೆ. ಇದರಲ್ಲಿ ಕರ್ನಾಟಕ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ.

author img

By

Published : Apr 27, 2022, 9:45 PM IST

HIV
ಹೆಚ್​ಐವಿ

ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ 2020-21ರಲ್ಲಿ ಇಡೀ ದೇಶ ಲಾಕ್‌ಡೌನ್​ನಿಂದ ತತ್ತರಿಸುತ್ತಿದ್ದರೆ, ಇದೇ ವೇಳೆ ಅಸುರಕ್ಷಿತ ಲೈಂಗಿಕ ಚಟುವಟಿಕೆಯಿಂದಾಗಿ ದೇಶಾದ್ಯಂತ 85,000 ಕ್ಕೂ ಹೆಚ್ಚು ಜನರು ಹೆಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ ಎಂಬ ವಿಷಯ ಬೆಳಕಿಗೆ ಆರ್​ಟಿಐ ಮೂಲಕ ಬಹಿರಂಗವಾಗಿದೆ.

ಲಾಕ್‌ಡೌನ್ ಅವಧಿಯಲ್ಲಿ ಹೆಚ್ಚು ವರದಿಯಾದ ಹೆಚ್‌ಐವಿ ಪ್ರಕರಣಗಳ ಪಟ್ಟಿಯಲ್ಲಿ ಮಹಾರಾಷ್ಟ್ರದಲ್ಲಿ 10,498 ಪ್ರಕರಣಗಳು ದಾಖಲಾಗುವ ಮೂಲಕ ದೇಶದಲ್ಲೇ ಅತ್ಯಧಿಕ ಕೇಸ್​ ಕಂಡು ಬಂದಿವೆ. ಆಂಧ್ರಪ್ರದೇಶದಲ್ಲಿ 9,521, ಕರ್ನಾಟಕದಲ್ಲಿ 8,947 ಕೇಸ್​ ದಾಖಲಾಗುವ ಮೂಲಕ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದುಕೊಂಡಿವೆ.

ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ಕ್ರಮವಾಗಿ 3,037 ಮತ್ತು 2,757 ಜನರು ಹೆಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ. ಇದೇ ವೇಳೆ 2011-12 ರಿಂದ 2020-21 ರ 10 ವರ್ಷಗಳ ಅವಧಿಯಲ್ಲಿ ಅಸುರಕ್ಷಿತ ಲೈಂಗಿಕ ಚಟುವಟಿಕೆಯಿಂದಾಗಿ ವರದಿಯಾದ ಹೆಚ್‌ಐವಿ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಸಂಸ್ಥೆ ತಿಳಿಸಿದೆ.

ಮಧ್ಯಪ್ರದೇಶ ಮೂಲದ ಕಾರ್ಯಕರ್ತ ಚಂದ್ರಶೇಖರ್ ಗೌರ್ ಸಲ್ಲಿಸಿದ ಆರ್‌ಟಿಐಗೆ ಪ್ರತಿಕ್ರಿಯೆಯಾಗಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ಎನ್‌ಎಸಿಒ) ಈ ಮಾಹಿತಿ ನೀಡಿದೆ. 2011-12ರಲ್ಲಿ 2.4 ಲಕ್ಷ ಹೆಚ್‌ಐವಿ ಪ್ರಕರಣಗಳು ದಾಖಲಾದರೆ, ಅದು 2019-20ರಲ್ಲಿ 1.44 ಲಕ್ಷಕ್ಕೆ ಇಳಿದಿತ್ತು. ಬಳಿಕ 2020- 21ರಲ್ಲಿ ಇದು 85,268ಕ್ಕೆ ಇಳಿಕೆಯಾಗಿದೆ.

ಇದನ್ನೂ ಓದಿ: ಗ್ರಾಹಕರ ಸೆಳೆಯಲು ವಾಟ್ಸಾಪ್​ನಿಂದ ಹಣ ಪಾವತಿಗೆ ಕ್ಯಾಶ್​ಬ್ಯಾಕ್​ ಆಫರ್​

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.