ETV Bharat / bharat

ದುಬೈನಲ್ಲಿ ಉದ್ಯೋಗ ವಂಚನೆ: ಐವರು ಯುವಕರಿಂದ ಸಹಾಯಕ್ಕಾಗಿ ಮನವಿ - ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್

ಯುಪಿ ಮತ್ತು ಉತ್ತರಾಖಂಡದ ಐವರು ಯುವಕರು ದುಬೈನಲ್ಲಿ ಒತ್ತೆಯಾಳುಗಳಾಗಿರುವ ಸಂಬಂಧ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಯುವಕರು ಭಾರತ ಸರ್ಕಾರದ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.

ಯುಪಿ-ಉತ್ತರಾಖಂಡದ ಯುವಕರು
ಯುಪಿ-ಉತ್ತರಾಖಂಡದ ಯುವಕರು
author img

By ETV Bharat Karnataka Team

Published : Sep 29, 2023, 8:28 PM IST

Updated : Sep 29, 2023, 8:39 PM IST

ರಾಯಪುರಿ ಗ್ರಾಮದ ನಿವಾಸಿ ಶೀಲಾ ದೇವಿ ಮಾತನಾಡಿದ್ದಾರೆ

ಕಾಶಿಪುರ (ಉತ್ತರಾಖಂಡ) : ದುಬೈನಲ್ಲಿ ಉತ್ತರಾಖಂಡದ ಮೂವರು ಯುವಕರು ಹಾಗೂ ಉತ್ತರಾಖಂಡದ ಗಡಿಭಾಗದ ಉತ್ತರ ಪ್ರದೇಶದ ಇಬ್ಬರು ಯುವಕರನ್ನು ಒತ್ತೆಯಾಳಾಗಿ ಇಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿದೇಶದಲ್ಲಿ ಸಿಲುಕಿರುವ ಇವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಯುವಕ ಧಾಮಿ ಸರ್ಕಾರಕ್ಕೆ ಮನವಿ ಮಾಡುತ್ತಿರುವುದು ಕಂಡುಬಂದಿದೆ. ಇದೀಗ ಯುವಕನ ಕುಟುಂಬಸ್ಥರು ಕೂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರಿಗೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ.

ದುಬೈನಲ್ಲಿ ಸಿಲುಕಿದ ಯುಪಿ - ಉತ್ತರಾಖಂಡ ಯುವಕ : ಉತ್ತರಾಖಂಡದ ಮೂವರು ಯುವಕರು ಮತ್ತು ಉತ್ತರಾಖಂಡದ ಗಡಿಭಾಗದ ಉತ್ತರ ಪ್ರದೇಶದ ಇಬ್ಬರು ಯುವಕರನ್ನು ದುಬೈನಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಯುವಕರ ಜತೆಗೆ ಕುಟುಂಬಸ್ಥರು ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರಿಗೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಉದ್ಯೋಗ ಅರಸಿ ದುಬೈಗೆ ತೆರಳಿದ್ದ ಐವರು ಯುವಕರು ಕೆಲಸ ಸಿಗದೇ ಅಲ್ಲೇ ಸಿಲುಕಿಕೊಂಡಿದ್ದಾರೆ. ಈ ಯುವಕರು ತಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡಿ, ಭಾರತಕ್ಕೆ ವಾಪಸ್ ಕರೆಸುವಂತೆ ಕೇಳಿಕೊಂಡಿದ್ದಾರೆ. ಅವರು ವಿಡಿಯೋ ಕೂಡ ಕಳುಹಿಸಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಒತ್ತೆಯಾಳಾದ ಯುವಕರು : ಉತ್ತರಾಖಂಡ ಗಡಿಯಲ್ಲಿರುವ ರಾಯಪುರಿ ಗ್ರಾಮದ ನಿವಾಸಿ ಶೀಲಾ ದೇವಿ ಮಾತನಾಡಿ, ಎರಡು ತಿಂಗಳ ಹಿಂದೆ ದೆಹಲಿಯ ಇಬ್ಬರು ಏಜೆಂಟರು ಅಂಗದಪುರ್ ಹಾಲ್ ಗ್ರಾಮದ ತನ್ನ ಮಗ ಅಮಿತ್ ಕುಮಾರ್ ಮತ್ತು ರಾಯಪುರಿ ನಿವಾಸಿ ದಿಲ್ಶಾದ್, ಗ್ರಾಮದ ನಿವಾಸಿ ಮೊಹ್ಸಿನ್ ಅವರನ್ನು ಒತ್ತೆ ಇರಿಸಿಕೊಂಡಿದ್ದರು. ಕೌಡಿಯಾ ಗ್ರಾಮದ (ಪೌರಿ ಗರ್ವಾಲ್) ನಿವಾಸಿ ಹರಿರಾಜ್ ಅವರನ್ನು ದುಬೈಗೆ ಕಳುಹಿಸಲಾಗಿದೆ.

ಶಾರ್ಜಾದ ಸಾನಿಯಾ ಎಂಬ ಪ್ರದೇಶದಲ್ಲಿರುವ ಕಂಪನಿಯಲ್ಲಿ ಕಾರ್ಪೆಂಟರ್ ಕೆಲಸ ಕೊಡಿಸುವುದಾಗಿ ಐವರು ಯುವಕರಿಗೆ ಈ ಏಜೆಂಟ್‌ಗಳು ಭರವಸೆ ನೀಡಿದ್ದರು. ಆದರೆ ಅಲ್ಲಿ ಕಾರ್ಪೆಂಟರ್ ಕೆಲಸ ಸಿಕ್ಕಿರಲಿಲ್ಲ. ಕಂಪನಿ ಅಧಿಕಾರಿಗಳು ಎಲ್ಲ ಯುವಕರ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಜತೆಗೆ ಅವರ ಕೂಲಿಯನ್ನೂ ನೀಡಿಲ್ಲ. ಇದರಿಂದ ಯುವಕರು ಆಹಾರದ ಕೊರತೆ ಎದುರಿಸುತ್ತಿದ್ದಾರೆ. ಇದೀಗ ಯುವಕರ ಕುಟುಂಬಗಳು ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸುವಂತೆ ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಯುವಕ ಸಹಾಯಕ್ಕೆ ಧಾವಿಸುವಂತೆ ಸಿಎಂ ಧಾಮಿಗೆ ಮನವಿ : ಜಿಲ್ಲೆಯ ಕೆಲ ಯುವಕರು ದುಬೈನಲ್ಲಿ ಸಿಲುಕಿರುವ ಮಾಹಿತಿ ಸಿಕ್ಕಿದೆ. ವಿದೇಶಕ್ಕೆ ಹೋಗಿ ಯಾರ ವಂಚನೆಗೂ ಬಲಿಯಾಗಬೇಡಿ ಎಂದು ಈ ಕುರಿತು ಬಿಜೆಪಿ ಜಿಲ್ಲಾಧ್ಯಕ್ಷ ಗುಂಜನ್ ಸುಖಿಜಾ ಮನವಿ ಮಾಡಿದ್ದಾರೆ. ಮೊದಲು ಸಂಪೂರ್ಣ ಮಾಹಿತಿ ಪಡೆಯಿರಿ. ಅದರ ನಂತರ ವಿದೇಶಕ್ಕೆ ಹೋಗಿ. ಇಂತಹ ಕೆಲವು ಪ್ರಕರಣಗಳಲ್ಲಿ ಜನರನ್ನು ತಪ್ಪು ಮಾಹಿತಿ ನೀಡಿ ವಿದೇಶಕ್ಕೆ ಕಳುಹಿಸುತ್ತಿರುವುದೂ ಬೆಳಕಿಗೆ ಬರುತ್ತಿದೆ. ಇಂತಹ ಏಜೆಂಟರ ಮೇಲೆ ಆಡಳಿತ ಬಿಗಿ ಹಿಡಿತ ಸಾಧಿಸುತ್ತಿದ್ದು, ಕ್ರಮವನ್ನೂ ಕೈಗೊಳ್ಳಲಾಗುತ್ತಿದೆ. ವಿದೇಶದಲ್ಲಿ ಸಿಲುಕಿರುವವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಗುಂಜನ್​ ಹೇಳಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೂ ಮಾಹಿತಿ ನೀಡಲಾಗುವುದು. ಅಲ್ಲದೇ, ಸಂಸದ ಮತ್ತು ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಅವರ ಮೂಲಕ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುಂಜನ್​​​​​ ಸುಖಿಜಾ ಹೇಳಿದ್ದಾರೆ.

ಇದನ್ನೂ ಓದಿ: ಶಿಶು, ಮಕ್ಕಳು, ಮಹಿಳೆಯರು ಸೇರಿದಂತೆ 100ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ರಕ್ಷಿಸಿದ ಪೊಲೀಸರು

Last Updated : Sep 29, 2023, 8:39 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.