ಚಮೋಲಿ(ಉತ್ತರಾಖಾಂಡ್): ಭಾರಿ ಮಳೆಯಿಂದಾಗಿ ಉತ್ತರಾಖಂಡ ಚಮೋಲಿ ಜಿಲ್ಲೆಯಲ್ಲಿ ಉಂಟಾದ ಭೂಕುಸಿತದಲ್ಲಿ ಒಂದೇ ಕುಟುಂಬದ ನಾಲ್ವರು ಅವಶೇಷಗಳಡಿ ಸಿಲುಕಿ ಸಮಾಧಿಯಾಗಿದ್ದಾರೆ. ಓರ್ವ ಬಾಲಕನನ್ನು ರಕ್ಷಿಸಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಮೋಲಿ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ಇದು ಹಲವಾರು ಅನಾಹುತಕ್ಕೆ ಕಾರಣವಾಗಿದೆ. ಥರಾಲಿಯ ಪೆಂಗರ್ ಗ್ರಾಮದಲ್ಲಿ ಬೆಟ್ಟ ಕುಸಿದು ಕೆಳಗಿದ್ದ ಮನೆಯ ಮೇಲೆ ಮಣ್ಣು ಬಿದ್ದಿದೆ. ಇದರಿಂದ ಒಂದೇ ಕುಟುಂಬದ ನಾಲ್ವರು ಅವಶೇಷಗಳಡಿ ಹೂತು ಹೋಗಿದ್ದಾರೆ. ಅದೃಷ್ಟವಶಾತ್ 12 ವರ್ಷದ ಬಾಲಕ ಗಾಯಗೊಂಡಿದ್ದು, ಪ್ರಾಣ ಉಳಿದಿದೆ.
ಮಾಹಿತಿ ಪಡೆದ ಎಸ್‌ಡಿಆರ್‌ಎಫ್, ಎನ್ಡಿಆರ್ಎಫ್ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದವು. ಎಡೆಬಿಡದೇ ಸುರಿಯುತ್ತಿರುವ ಮಳೆ ಮತ್ತು ಭೂಕುಸಿತದಿಂದ ಗ್ರಾಮಸ್ಥರು ಭೀತಿಯಲ್ಲಿದ್ದಾರೆ. ಇದಲ್ಲದೇ, ಭೂಕುಸಿತದಲ್ಲಿ ಇನ್ನೂ ಮೂರು ಮನೆಗಳು ಹಾನಿಯಾಗಿವೆ.