ETV Bharat / bharat

ನಕಲಿ ಮದ್ಯ ಸೇವನೆ.. ಹರಿದ್ವಾರದಲ್ಲಿ ಐವರು ಸಾವು

ನಕಲಿ ಮದ್ಯ ಸೇವನೆ ಮಾಡಿರುವ ಪರಿಣಾಮ ಐವರು ದುರ್ಮರಣಕ್ಕೀಡಾಗಿರುವ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ.

CONSUMING POISONOUS LIQUOR
CONSUMING POISONOUS LIQUOR
author img

By

Published : Sep 10, 2022, 12:00 PM IST

ಹರಿದ್ವಾರ(ಉತ್ತರಾಖಂಡ): ವಿಷಪೂರಿತ(ನಕಲಿ ಮದ್ಯ) ಮದ್ಯ ಸೇವನೆ ಮಾಡಿ ಸಾವನ್ನಪ್ಪುತ್ತಿರುವ ಘಟನೆ ದೇಶದ ವಿವಿಧ ಭಾಗಗಳಲ್ಲಿ ಮೇಲಿಂದ ಮೇಲೆ ದಾಖಲಾಗ್ತಿದ್ದು, ಸದ್ಯ ಅಂತಹ ಮತ್ತೊಂದು ಪ್ರಕರಣ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ.

ಹರಿದ್ವಾರದ ಪತ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಫುಲ್ಗಢ ಶಿವಗಢ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಕಲಿ ಮದ್ಯ ಸೇವನೆ ಮಾಡಿರುವ ಐವರು ದುರ್ಮರಣಕ್ಕೀಡಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.ಮೃತರನ್ನ ರಾಜು, ಭೋಲಾ, ಮನೋಜ್​ ಎಂದು ಗುರುತಿಸಲಾಗಿದ್ದು, ಇತರೆ ಇಬ್ಬರು ಸಹ ದುರ್ಮರಣಕ್ಕೀಡಾಗಿದ್ದಾರೆ.

ಇದನ್ನೂ ಓದಿ: ವಿಷಪೂರಿತ ಮದ್ಯ ಸೇವಿಸಿ ರಾಜಸ್ಥಾನದಲ್ಲಿ ನಾಲ್ವರು ಸಾವು

ಈ ಹಿಂದೆ 2019ರಲ್ಲಿ ಹರಿದ್ವಾರದ ರೂರ್ಕಿಯಲ್ಲಿ ನಕಲಿ ಮದ್ಯ ಸೇವನೆಯಿಂದಾಗಿ 40ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಪೊಲೀಸರು ಅನೇಕ ರೀತಿಯ ಕ್ರಮ ಕೈಗೊಂಡಿದ್ದರು. ಆದರೆ, ಇದೀಗ ಮತ್ತೊಮ್ಮೆ ಇಂತಹ ಪ್ರಕರಣ ಬೆಳಕಿಗೆ ಬರುತ್ತಿದ್ದು, ಪೊಲೀಸರಿಗೆ ತಲೆ ಬೀಸಿಯಾಗಿದೆ. ಹರಿದ್ವಾರದಲ್ಲಿ ಸ್ಥಳೀಯ ಚುನಾವಣೆ ಘೋಷಣೆಯಾಗಿದ್ದು, ಇದರ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಕಳೆದ ಕೆಲ ದಿನಗಳ ಹಿಂದೆ ರಾಜಸ್ಥಾನದ ಭಿಲ್ವಾರಾದಲ್ಲಿ ವಿಷಪೂರಿತ ಮದ್ಯ ಸೇವನೆ ಮಾಡಿ, ನಾಲ್ವರು ಸಾವಿಗೀಡಾಗಿರುವ ಪ್ರಕರಣ ಸಹ ನಡೆದಿತ್ತು. ಇತ್ತೀಚೆಗಷ್ಟೇ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ವಿಷಕಾರಿ ಮದ್ಯ ಸೇವಿಸಿ 25 ಜನರು ಪ್ರಾಣ ಕಳೆದುಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.