ನಿಮತಿಘಾಟ್(ಅಸ್ಸೋಂ): ಬೋಟ್ಗಳು ಪರಸ್ಪರ ಡಿಕ್ಕಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 35 ಮಂದಿ ಕಾಣೆಯಾಗಿದ್ದು, ಒಬ್ಬ ಮಹಿಳೆ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
ಅಸ್ಸೋಂನ ಜೊರ್ಹಾತ್ ಜಿಲ್ಲೆಯ ಬ್ರಹ್ಮಪುತ್ರ ನದಿಯ ನಿಮತಿಘಾಟ್ನಲ್ಲಿ ಘಟನೆ ಸಂಭವಿಸಿದ್ದು, ಸುಮಾರು 120ಕ್ಕೂ ಹೆಚ್ಚು ಮಂದಿ ನೀರೊಳಗೆ ಬಿದ್ದಿದ್ದರು. ಈ ವೇಳೆ ಹಲವರು ಈಜಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಬಹುತೇಕರನ್ನು ರಕ್ಷಣೆ ಮಾಡಲಾಗಿದೆ. ಒಬ್ಬ ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
-
Anguished to learn of the ferry accident in Majuli. I have talked with Assam CM Shri @himantabiswa regarding the accident and he has informed me of ongoing rescue and relief operations.
— Sarbananda Sonowal (@sarbanandsonwal) September 8, 2021 " class="align-text-top noRightClick twitterSection" data="
I have directed @shipmin_india to provide all necessary support to help the victims.
">Anguished to learn of the ferry accident in Majuli. I have talked with Assam CM Shri @himantabiswa regarding the accident and he has informed me of ongoing rescue and relief operations.
— Sarbananda Sonowal (@sarbanandsonwal) September 8, 2021
I have directed @shipmin_india to provide all necessary support to help the victims.Anguished to learn of the ferry accident in Majuli. I have talked with Assam CM Shri @himantabiswa regarding the accident and he has informed me of ongoing rescue and relief operations.
— Sarbananda Sonowal (@sarbanandsonwal) September 8, 2021
I have directed @shipmin_india to provide all necessary support to help the victims.
ಸ್ಥಳೀಯರ ಪ್ರಕಾರ ಪುರುಷರು ಮಹಿಳೆಯರು, ಮಕ್ಕಳು ಸೇರಿ ನೂರಕ್ಕೂ ಹೆಚ್ಚು ಮಂದಿ ಬೋಟ್ನಲ್ಲಿದ್ದರು. ಅದರ ಜೊತೆಗೆ ಕೆಲವು ಬೈಕ್ ಮತ್ತು ಕಾರುಗಳು ಕೂಡಾ ಬೋಟ್ನಲ್ಲಿದ್ದವು. ಎಷ್ಟು ಮಂದಿಯಿದ್ದರು, ಎಷ್ಟು ಮಂದಿ ಕಾಣೆಯಾಗಿದ್ದಾರೆ ಎಂಬ ಮಾಹಿತಿ ನೀಡಲು ಒಳನಾಡು ಜಲಸಾರಿಗೆ ಅಧಿಕಾರಿಗಳು ವಿಫಲರಾಗಿದ್ದಾರೆ. ಈಗಲೂ ಕೂಡಾ ರಕ್ಷಣಾ ಕಾರ್ಯಗಳು ನಡೆಯುತ್ತಿವೆ.
ಇದನ್ನೂ ಓದಿ: ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಯಲ್ಲಿ ಪ್ರತಿಭಟಿಸುತ್ತಿರುವ ಯಾರೂ ರೈತರಲ್ಲ.. ಬಿಜೆಪಿ ನಾಯಕ ವಿವಾದ
ಪೊಲೀಸರ ಪ್ರಕಾರ ಖಾಸಗಿ ಬೋಟ್ ಆದ 'ಮಾ ಕಮಲಾ' ನಿಮತಿಘಾಟ್ನಿಂದ ಮಜುಲಿ ದ್ವೀಪ ಪ್ರದೇಶದಲ್ಲಿರುವ ಕಮಲಾಬರಿ ಫೆರ್ರಿ ಪಾಯಿಂಟ್ಗೆ ತೆರಳುತ್ತಿತ್ತು. ಇದೇ ವೇಳೆ ನಿಮಿತಿಘಾಟ್ನಿಂದ ಹೊರಡುತ್ತಿದ್ದ ರಾಜ್ಯದ ಒಳನಾಡು ಜಲಸಾರಿಗೆ ಟ್ರಿಪ್ಕಾಯ್ ಬೋಟ್ಗೆ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ.
ಸಹಾಯವಾಣಿ ಆರಂಭಿಸಿದ ಮಜುಲಿ
ಈಗಾಗಲೇ ರಕ್ಷಣಾ ಕಾರ್ಯದೊಂದಿಗೆ, ಮಜುಲಿ ಜಿಲ್ಲಾಡಳಿತ ಟೋಲ್ ಫ್ರೀ ಸಹಾಯವಾಣಿಯನ್ನು ಆರಂಭಿಸಿದೆ. ಬೋಟ್ನಲ್ಲಿದ್ದ ಪ್ರಯಾಣಿಕರ ಸಂಬಂಧಿಗಳು ಅಥವಾ ಕುಟುಂಬಸ್ಥರು ಮಜುಲಿ ಜಿಲ್ಲಾಡಳಿತ ನೀಡಿದ ಟೋಲ್ ಫ್ರೀ ನಂಬರ್ಗಳಿಗೆ ಕರೆ ಮಾಡಿ, ಮಾಹಿತಿ ಪಡೆಯಬಹುದಾಗಿದೆ.
1077, 1070, 1079 ಟೋಲ್ಫ್ರೀ ನಂಬರ್ ಆಗಿದ್ದು, 7635961522 ಟೆಲಿಫೋನ್ ನಂಬರ್ ಆಗಿದೆ. ಯಾವುದಾದರೂ ಒಂದು ನಂಬರ್ಗೆ ಕರೆ ಮಾಡಿ, ಮಾಹಿತಿ ಪಡೆದುಕೊಳ್ಳಬಹುದು ಎಂದು ಜಿಲ್ಲಾಡಳಿತ ಹೇಳಿದೆ.
ಈ ನಡುವೆ ಘಟನೆ ಬಗ್ಗೆ ರಾಷ್ಟ್ರಪತಿ ಕಳವಳ ವ್ಯಕ್ತಪಡಿಸಿದ್ದು, ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಹಾಗೂ ನೋವುಂಡವರಿಗೆ ಸಂತಾಪ ಸೂಚಿಸಿದ್ದಾರೆ. ಎಲ್ಲರನ್ನೂ ಕಾಪಾಡಲು ಶಕ್ತಿ ಮೀರಿ ಪ್ರಯತ್ನಿಸುವಂತೆ ರಾಮನಾಥ ಕೋವಿಂದ್ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.
-
Deeply pained to hear about the loss of lives in a boat accident in Jorhat, Assam. My thoughts go out to the victims, survivors and their families. Rescue and relief efforts are on to save as many lives as possible.
— President of India (@rashtrapatibhvn) September 8, 2021 " class="align-text-top noRightClick twitterSection" data="
">Deeply pained to hear about the loss of lives in a boat accident in Jorhat, Assam. My thoughts go out to the victims, survivors and their families. Rescue and relief efforts are on to save as many lives as possible.
— President of India (@rashtrapatibhvn) September 8, 2021Deeply pained to hear about the loss of lives in a boat accident in Jorhat, Assam. My thoughts go out to the victims, survivors and their families. Rescue and relief efforts are on to save as many lives as possible.
— President of India (@rashtrapatibhvn) September 8, 2021
ಈ ನಡುವೆ ಇಂತಹ ಘಟನೆಗಳಿಂದ ಪಾಠ ಕಲಿಯಬೇಕಿದ್ದು, ಎಲ್ಲ ಅಗತ್ಯ ನೆರವು ನೀಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.
-
Anguished to learn about the tragic boat accident in Assam. Have spoken to CM Shri @himantabiswa, the state administration is doing everything possible to rescue the people. We are continuously monitoring the situation. Also assured full support from the central government.
— Amit Shah (@AmitShah) September 8, 2021 " class="align-text-top noRightClick twitterSection" data="
">Anguished to learn about the tragic boat accident in Assam. Have spoken to CM Shri @himantabiswa, the state administration is doing everything possible to rescue the people. We are continuously monitoring the situation. Also assured full support from the central government.
— Amit Shah (@AmitShah) September 8, 2021Anguished to learn about the tragic boat accident in Assam. Have spoken to CM Shri @himantabiswa, the state administration is doing everything possible to rescue the people. We are continuously monitoring the situation. Also assured full support from the central government.
— Amit Shah (@AmitShah) September 8, 2021
ಇದನ್ನೂ ಓದಿ: ಬ್ರಹ್ಮಪುತ್ರ ನದಿಯಲ್ಲಿ ಎರಡು ದೋಣಿಗಳು ಡಿಕ್ಕಿಯಾಗಿ ಭೀಕರ ದುರಂತ: 50ಕ್ಕೂ ಹೆಚ್ಚು ಮಂದಿ ನಾಪತ್ತೆ