ETV Bharat / bharat

ಬಿಹಾರದ ಡೈರಿ ಕಾರ್ಖಾನೆಯಲ್ಲಿ ಅಮೋನಿಯಾ ಅನಿಲ ಸೋರಿಕೆ: ಓರ್ವ ಸಾವು, 100ಕ್ಕೂ ಅಧಿಕ ಮಂದಿ ಅಸ್ವಸ್ಥ - ವೈಶಾಲಿ ಜಿಲ್ಲೆಯ ಪ್ರಧಾನ ಕಛೇರಿ ಹಾಜಿಪುರ

ಶನಿವಾರ ರಾತ್ರಿ ಬಿಹಾರದ ವೈಶಾಲಿ ಜಿಲ್ಲೆಯ ಪ್ರಧಾನ ಕಛೇರಿ ಹಾಜಿಪುರದಲ್ಲಿರುವ ರಾಜ್ ಫ್ರೆಶ್ ಡೈರಿಯಲ್ಲಿ ಘಟನೆ ನಡೆದಿದೆ.

ಅಮೋನಿಯಾ ಅನಿಲ ಸೋರಿಕೆ
ಅಮೋನಿಯಾ ಅನಿಲ ಸೋರಿಕೆ
author img

By

Published : Jun 25, 2023, 1:41 PM IST

Updated : Jun 25, 2023, 2:50 PM IST

ರಾಜ್ ಫ್ರೆಶ್ ಡೈರಿಯಲ್ಲಿ ಅಮೋನಿಯಾ ಅನಿಲ ಸೋರಿಕೆ

ವೈಶಾಲಿ (ಬಿಹಾರ): ಬಿಹಾರದ ವೈಶಾಲಿ ಜಿಲ್ಲೆಯ ಹಾಜಿಪುರದಲ್ಲಿರುವ ಡೈರಿ ಕಾರ್ಖಾನೆಯಲ್ಲಿ ಶನಿವಾರ ರಾತ್ರಿ ಅಮೋನಿಯಾ ಅನಿಲ ಸೋರಿಕೆಯಾಗಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. 35 ಮಂದಿ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರನ್ನು ಬೇರೆ ಬೇರೆ ಖಾಸಗಿ ನರ್ಸಿಂಗ್ ಹೋಂಗಳಿಗೆ ದಾಖಲಿಸಲಾಗಿದೆ. ಕಾರ್ಖಾನೆಯಿಂದ ಸೋರಿಕೆಯಾದ ಅಮೋನಿಯಾ ಅನಿಲವು ಸುತ್ತಮುತ್ತಲಿನ ಪ್ರದೇಶಗಳಿಗೆ ನಾಲ್ಕು ಕಿಲೋಮೀಟರ್ ವ್ಯಾಪ್ತಿಯವರೆಗೆ ಹರಡಿದೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ಗುರುತು ತಿಳಿದುಬಂದಿಲ್ಲ. ಮೃತ ವ್ಯಕ್ತಿ ರಾಜ್ ಫ್ರೆಶ್ ಡೈರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಸ್ಥಳೀಯ ಆಡಳಿತ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅನಿಲ ಸೋರಿಕೆಯ ಕಾರಣದ ಬಗ್ಗೆ ತನಿಖೆ ಆರಂಭಿಸಲಾಗಿದೆ.

ಅಪಾಯಕಾರಿ ಅನಿಲ ರಜಪೂತ ಕಾಲೋನಿಯಿಂದ ಪಟ್ಟಣ ಪೊಲೀಸ್ ಠಾಣೆಯವರೆಗೆ ವ್ಯಾಪಿಸಿತ್ತು. ಇದರಿಂದ ಅಲ್ಲಿನ ಕಾಲೋನಿಗಳಲ್ಲಿ ವಾಸಿಸುತ್ತಿದ್ದ 100ಕ್ಕೂ ಹೆಚ್ಚು ಮಂದಿ ಉಸಿರಾಡಲು ಆಗದೇ, ವಿಷಾನಿಲದಿಂದ ಅಸ್ವಸ್ಥರಾಗಿದ್ದಾರೆ. ಸ್ಥಳೀಯ ಆಡಳಿತದ ಹೊರತಾಗಿ, ಅಗ್ನಿಶಾಮಕ ದಳದ ತಂಡ ಹಾಗೂ ಪಾಟ್ನಾದಿಂದ ಕ್ಯೂಆರ್‌ಟಿ (ಕ್ವಿಕ್ ರೆಸ್ಪಾನ್ಸ್ ಟೀಮ್) ತಂಡವು ಕಾರ್ಖಾನೆಗೆ ಆಗಮಿಸಿ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ. 15 ರಿಂದ 20 ನಿಮಿಷಗಳಲ್ಲಿ ಅನಿಲ ಸೋರಿಕೆ ನಿಯಂತ್ರಣಕ್ಕೆ ಬಂದಿದೆ ಎಂದು ಆಡಳಿತ ಹೇಳಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ವೈಶಾಲಿ ಡಿಎಂ ಜಸ್ಪಾಲ್ ಮೀನಾ, ವೈಶಾಲಿ ಎಸ್ಪಿ ರವಿ ರಂಜನ್ ಕುಮಾರ್ ಮತ್ತು ಜಿಲ್ಲೆಯ ಎಲ್ಲ ಹಿರಿಯ ಅಧಿಕಾರಿಗಳು ಹಾಜಿಪುರ ಕೈಗಾರಿಕಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ರಾಜ್ ಫ್ರೆಶ್ ಫ್ಯಾಕ್ಟರಿಗೆ ಆಗಮಿಸಿದ್ದಾರೆ. ಮೊದಲು ಅಮೋನಿಯಾ ಅನಿಲದ ಪರಿಣಾಮವನ್ನು ಕಡಿಮೆ ಮಾಡಲು ಅಗ್ನಿಶಾಮಕ ದಳದ ತಂಡವು 3 ಅಗ್ನಿಶಾಮಕ ವಾಹನಗಳ ಮೂಲಕ ಅನಿಲ ಹಬ್ಬಿದ ಪ್ರದೇಶದಲ್ಲಿ ತಡರಾತ್ರಿಯವರೆಗೂ ನೀರನ್ನು ಚಿಮುಕಿಸಿದ್ದಾರೆ.

ಘಟನೆಯಲ್ಲಿ ಅಸ್ವಸ್ಥಗೊಂಡ ಯುವತಿ ಸಾಕ್ಷಿ ಕುಮಾರಿ ಪ್ರತಿಕ್ರಿಯಿಸಿದ್ದು, "ನಾವು ಮನೆಯ ಜಗುಲಿಯಲ್ಲಿ ಊಟ ಮಾಡುತ್ತಿದ್ದೆವು. ಮೊದಲು ವಾಸನೆ ಪತ್ತೆಯಾಗಿರಲಿಲ್ಲ. ವಾಸನೆ ಹೆಚ್ಚಾದಾಗ ಉಸಿರಾಡಲು ತೊಂದರೆಯಾಗಿ, ನಂತರ ಆರೋಗ್ಯ ಸಮಸ್ಯೆ ಹೆಚ್ಚಾಯಿತು. ನಂತರ ನಾವು ಆಸ್ಪತ್ರೆಗೆ ಬಂದೆವು. ನನ್ನ ಮನೆ ಪಾಸ್ವಾನ್ ಚೌಕ್ ಬಳಿಯ ರಜಪೂತ ಕಾಲೋನಿಯಲ್ಲಿದೆ" ಎಂದಿದ್ದಾಳೆ.

ಅನಿಲ ಸೋರಿಕೆಯಿಂದಾಗಿ ಉಸಿರಾಡಲಾಗದೇ ಎಲ್ಲರೂ ಓಡಿದ್ದು, ಕಾಲ್ತುಳಿತ ಸಂಭವಿಸಿದೆ. ಇದರಲ್ಲಿ ಅನೇಕರಿಗೆ ಭಾಗಶಃ ಗಾಯಗಳಾಗಿವೆ ಎನ್ನಲಾಗಿದೆ. ಹಾಜಿಪುರ ಸದರ್ ಆಸ್ಪತ್ರೆಯ ಹೊರತಾಗಿ, ಅಲ್ಲಿನ ಹತ್ತಾರು ಖಾಸಗಿ ನರ್ಸಿಂಗ್ ಹೋಮ್‌ಗಳಲ್ಲಿ ಅಸ್ವಸ್ಥರಿಗೆ ಚಿಕಿತ್ಸೆ ನಡೆಯುತ್ತಿದೆ. ಅಲ್ಲದೆ ಹತ್ತಕ್ಕೂ ಹೆಚ್ಚು ಜನರು ಹೆಚ್ಚಿನ ಚಿಕಿತ್ಸೆಗಾಗಿ ಪಾಟ್ನಾಕ್ಕೆ ತೆರಳಿದ್ದಾರೆ. ಸದರ್ ಆಸ್ಪತ್ರೆಯಲ್ಲಿ ವೈದ್ಯರ ತಂಡವನ್ನು ನಿಯೋಜಿಸಲಾಗಿದ್ದು, ಆಸ್ಪತ್ರೆಗೆ ದಾಖಲಾದ ಎಲ್ಲ ಜನರು ಬಹುತೇಕ ಆರೋಗ್ಯವಾಗಿದ್ದಾರೆ. ಆದರೆ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಸಿವಿಲ್ ಸರ್ಜನ್ ಡಾ.ಶ್ಯಾಮ್ ನಂದನ್ ಪ್ರಸಾದ್ ತಿಳಿಸಿದ್ದಾರೆ.

ಘಟನೆಯ ವೇಳೆ ಕಾರ್ಖಾನೆಯಲ್ಲಿ ಎಷ್ಟು ಮಂದಿ ಇದ್ದರು ಮತ್ತು ಅವರ ಸ್ಥಿತಿ ಏನಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ಎಲ್ಲವೂ ನಿಯಂತ್ರಣದಲ್ಲಿದೆ ಎಂದು ಆಡಳಿತ ಹೇಳಿಕೊಂಡಿದೆ. ಡಿಎಸ್ಪಿ ಅಗ್ನಿಶಾಮಕ ದಳದ ಡಾ.ಅಶೋಕ್ ಕುಮಾರ್, “ಡೈರಿ ಉತ್ಪನ್ನಗಳನ್ನು ತಯಾರಿಸುವ ರಾಜ್ ಫ್ರೆಶ್​ನಲ್ಲಿ ಅಮೋನಿಯಾ ಸಿಲಿಂಡರ್‌ನಲ್ಲಿ ಅನಿಲ ಸೋರಿಕೆಯಾಗಿದೆ. ಘಟನೆ ನಂತರ ನಾವು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಕೆಲವು ಕಾರ್ಮಿಕರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅಗ್ನಿಶಾಮಕ ವಾಹನಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ" ಎಂದು ಹೇಳಿದರು.

ಇದನ್ನೂ ಓದಿ: Rain: ಮುಂಬೈ, ಹರಿಯಾಣ, ದೆಹಲಿ, ಛತ್ತೀಸ್‌ಗಢ ಸೇರಿದಂತೆ ಉತ್ತರ ಭಾರತದ ಹಲವೆಡೆ ಭಾರಿ ವರ್ಷಧಾರೆ

Last Updated : Jun 25, 2023, 2:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.