ಕೋಲ್ಕತ್ತಾ(ಪಶ್ಚಿಮ ಬಂಗಾಳ): ದೇಶದಲ್ಲಿ ತಲ್ಲಣ ಮೂಡಿಸುತ್ತಿರುವ ಕೋವಿಡ್ ರೂಪಾಂತರಿ ಒಮಿಕ್ರಾನ್ ಮಕ್ಕಳಲ್ಲೂ ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ 7 ವರ್ಷದ ಮಗುವಿನಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ.
ಪಶ್ಚಿಮ ಬಂಗಾಳದಲ್ಲಿ ದಾಖಲಾಗಿರುವ ಮೊದಲ ಒಮಿಕ್ರಾನ್ ಪ್ರಕರಣ ಇದಾಗಿದ್ದು, ಸದ್ಯ ಮಗುವನ್ನು ಐಸೋಲೇಷನ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಮಗುವಿನ ಪೋಷಕರ ವರದಿ ನೆಗೆಟಿವ್ ಬಂದಿದೆ.
ಅಬುಧಾಬಿಯಲ್ಲಿದ್ದ ಮಗು ಮತ್ತು ಪೋಷಕರು ಮೊದಲು ಕೋಲ್ಕತ್ತಾಗೆ ಬಂದು ನಂತರ ಹೈದರಾಬಾದ್ ಮೂಲಕ ಮುರ್ಷಿದಾಬಾದ್‌ಗೆ ಬಂದಿರುವುದಾಗಿ ರಾಜ್ಯ ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯ ಮಾಹಿತಿ ನೀಡಿದೆ.
ಒಮಿಕ್ರಾನ್ ಸೋಂಕಿತರು ಹೆಚ್ಚಾಗಿ ಲಕ್ಷಣ ರಹಿತ ಆಗಿರುವುದರಿಂದ ವಿಮಾನ ನಿಲ್ದಾಣಗಳಲ್ಲಿ ಅಧಿಕಾರಿಗಳು ಎಲ್ಲ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ತಪಾಸಣೆ ಮಾಡಬೇಕು. ಸೋಂಕಿತರನ್ನು ಕೂಡಲೇ ಪ್ರತ್ಯೇಕಿಸಬೇಕು ಎಂದು ಖ್ಯಾತ ಶಿಶುವೈದ್ಯ ಡಾ. ಜೋಯ್ಡೆಬ್ ರಾಯ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Telangana Omicron: ತೆಲಂಗಾಣದಲ್ಲಿ ಮೊದಲ ಬಾರಿಗೆ ಎರಡು ಒಮಿಕ್ರಾನ್ ಕೇಸ್ ಪತ್ತೆ!