ಬಲರಾಂಪುರ(ಛತ್ತೀಸ್‌ಗಢ): ಬಲರಾಂಪುರದ ಸಮ್ರಿ ಪೊಲೀಸ್ ಠಾಣೆಯ ಚುಂಚುನಾ ಮತ್ತು ಪುಂಡಗ್ ಪ್ರದೇಶಗಳಲ್ಲಿ ಸಿಆರ್‌ಪಿಎಫ್ ತಂಡವು 7 ಐಇಡಿ ಟಿಫಿನ್ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದು, ಮತ್ತಷ್ಟು ಶೋಧಕಾರ್ಯಾಚರಣೆ ನಡೆಯುತ್ತಿದೆ.
ಭುತಾಹಿ ಮಾಡ್ ರಸ್ತೆಯಲ್ಲಿ ಒಂದು ಕಿಲೋಮೀಟರ್ ದೂರದಲ್ಲಿ ನಕ್ಸಲರು ಐಇಡಿಗಳನ್ನು ಅಳವಡಿಸಿದ್ದಾರೆ ಎಂಬ ಮಾಹಿತಿ ಸಿಆರ್‌ಪಿಎಫ್ ತಂಡಕ್ಕೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಮೊದಲಿಗೆ ಮೂರು ಐಇಡಿಗಳು ಮತ್ತು ನಂತರ ನಾಲ್ಕು ಐಇಡಿಗಳು ದೊರೆತಿದೆ.
ಐಇಡಿಯನ್ನು ರಸ್ತೆಯಲ್ಲಿ ಹೂತುಹಾಕಿದ್ದು, ತಂತಿಗಳು ಮೇಲೆ ಗೋಚರಿಸುವಂತಿದ್ದವು. ಆ ತಂತಿಗಳ ಸಹಾಯದಿಂದ ಐಇಡಿಯನ್ನು ಜಪ್ತಿ ಮಾಡಲು ಸಿಆರ್‌ಪಿಎಫ್ ಯಶಸ್ವಿಯಾಯಿತು. ಎಲ್ಲಾ ಏಳು ಐಇಡಿಗಳು ಏಕಕಾಲದಲ್ಲಿ ಸ್ಫೋಟಗೊಳಿಸಲು ನಕ್ಸಲರು ಸಂಚು ರೂಪಿಸಿದ್ದರು.
ಸಿಆರ್‌ಪಿಎಫ್ 62ನೇ ಬೆಟಾಲಿಯನ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ್ದು, ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ಸಿಆರ್ಪಿಎಫ್ನ ಬಾಂಬ್ ನಿಷ್ಕ್ರಿಯ ದಳ ಐಇಡಿಗಳನ್ನು ನಿಷ್ಕ್ರಿಯಗೊಳಿಸಿದೆ ಎಂದು ತಿಳಿದುಬಂದಿದೆ.
ಬಲರಾಂಪುರದ ಬುಧಪಹಾರ್ ಪ್ರದೇಶವನ್ನು ನಕ್ಸಲರ ಭದ್ರಕೋಟೆ ಎಂದು ಹೇಳಲಾಗುತ್ತಿದ್ದು, ಈ ಪ್ರದೇಶದಿಂದ ಛತ್ತೀಸ್‌ಗಢ ಮತ್ತು ಜಾರ್ಖಂಡ್ ಎರಡೂ ರಾಜ್ಯಗಳಿಗೆ ನಕ್ಸಲರು ಸಂಪರ್ಕ ಸಾಧಿಸಬಹುದಾಗಿದ್ದು, ಭದ್ರತಾ ಪಡೆಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಇದನ್ನೂ ಓದಿ: ಮಹಿಳೆಯರಿಗೆ ಡಿಕ್ಕಿ ಹೊಡೆದ ಕಾರು.. ಸ್ಥಳದಲ್ಲೇ ಹಾರಿಹೋಯ್ತು ಇಬ್ಬರ ಪ್ರಾಣ - ವಿಡಿಯೋ