ಮೀರತ್/ಬಾಗ್ಪತ್(ಯುಪಿ): ಐದು ತೈಲ ಫಿಲ್ಲಿಂಗ್ ಸ್ಟೇಷನ್‌ಗಳಲ್ಲಿ ಕಲಬೆರಕೆ ಪೆಟ್ರೋಲ್ ಮಾರಾಟ ಮಾಡುವ ಮೂಲಕ ಗ್ರಾಹಕರನ್ನು ವಂಚಿಸುತ್ತಿದ್ದ ಗಂಭೀರ ಆರೋಪದಲ್ಲಿ ಮೀರತ್ ಮತ್ತು ಬಾಗ್ಪತ್ನಲ್ಲಿ ಐದು ಪೆಟ್ರೋಲ್ ಪಂಪ್ ಮಾಲೀಕರು ಸೇರಿದಂತೆ ಏಳು ಜನರನ್ನು ಎಸ್‌ಟಿಎಫ್ ಕಾರ್ಯಪಡೆ, ಜಿಲ್ಲಾಡಳಿತ, ಮಾಪನ ಇಲಾಖೆ ಮತ್ತು ಸರಬರಾಜು ವಿಭಾಗದ ಅಧಿಕಾರಿಗಳು ಸೇರಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
“ಮೀರತ್ ಮತ್ತು ಬಾಗ್‌ಪತ್‌ನ ಕೆಲವು ಇಂಧನ ಮಳಿಗೆಗಳು ಕಲಬೆರಕೆ ಡೀಸೆಲ್ ಮತ್ತು ಪೆಟ್ರೋಲ್ ಮಾರಾಟ ಮಾಡುತ್ತಿವೆ ಎಂಬ ಸುಳಿವು ಸಿಕ್ಕ ನಂತರ ನಮ್ಮ ತಂಡಗಳು ಐದು ಪೆಟ್ರೋಲ್ ಪಂಪ್‌ಗಳಲ್ಲಿ ಅಂದರೆ ಮೀರತ್‌ನಲ್ಲಿ ನಾಲ್ಕು ಮತ್ತು ಬಾಗ್ಪತ್‌ನ ಒಂದರಲ್ಲಿ ದಾಳಿ ನಡೆಸಿದೆ. ಆಗ ಆ ಮಳಿಗೆಗಳಲ್ಲಿ ದ್ರಾವಕ ಮಿಶ್ರಿತ ಇಂಧನವನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ" ಎಂದು ಎಸ್‌ಟಿಎಫ್ ಎಸ್ಪಿ ಬ್ರಿಜೇಶ್ ಕುಮಾರ್ ಸಿಂಗ್ ಹೇಳಿಕೆ ನೀಡಿದ್ದಾರೆ.
ವಿಶೇಷ ಕಾರ್ಯಪಡೆಯು ಮೀರತ್‌ನಲ್ಲಿರುವ ಸೈನಿಯ ರಾಯಲ್ ಫಿಲ್ಲಿಂಗ್ ಸ್ಟೇಷನ್, ದೆಹಲಿ ರಸ್ತೆಯ ಪರ್ತಾಪುರ್ ಫಿಲ್ಲಿಂಗ್ ಸ್ಟೇಷನ್, ಮಾವಾನಾದ ಸಿದ್ಧಬಲಿ ಪೆಟ್ರೋಲ್ ಸ್ಟೇಷನ್, ಮಾಧವಪುರಂನ ಡಿಲ್ಲಿ ರೋಡ್ ಫಿಲ್ಲಿಂಗ್ ಸ್ಟೇಷನ್ ಹಾಗು ಬಾಗ್‌ಪತ್‌ನಲ್ಲಿ ಬಾಗ್ಪತ್ ರಸ್ತೆಯಲ್ಲಿರುವ ಶಿವ್ ಸರ್ವಿಸ್ ಸ್ಟೇಷನ್‌ಗಳಲ್ಲಿ ದಾಳಿ ನಡೆಸಿದ್ದು, ಪೆಟ್ರೋಲ್ ಪಂಪ್‌ಗಳು ನಯಾರಾ ಕಂಪನಿಯ ಒಡೆತನದಲ್ಲಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಅಪರಿಚಿತ ಯುವತಿಯ ಮೆಸೇಜ್ ನಂಬಿ ಹೋದವನಿಗೆ ಮಕ್ಮಲ್ ಟೋಪಿ: ಐವರ ಬಂಧನ.