ETV Bharat / bharat

ರಾಜಸ್ಥಾನ: ಟ್ರಕ್​ ಡಿಕ್ಕಿಯಾಗಿ ಕ್ರೂಸರ್ ಜಖಂ​: 7 ಜನ ದುರ್ಮರಣ, 10 ಮಂದಿಗೆ ಗಾಯ

ರಾಜಸ್ಥಾನದ ಡುಂಗಾರಪುರ ಜಿಲ್ಲೆಯಲ್ಲಿ ಟ್ರಕ್​ ಹಾಗೂ ಕ್ರೂಸರ್​ ಜೀಪ್​ ನಡುವೆ ಡಿಕ್ಕಿ ಸಂಭವಿಸಿ ಏಳು ಮಂದಿ ಸಾವಿಗೀಡಾಗಿದ್ದಾರೆ.

seven dead, ten  injured in collision between truck and jeep in Rajasthan
ರಾಜಸ್ಥಾನ: ಟ್ರಕ್​ ಡಿಕ್ಕಿಯಿಂದ ಅಪ್ಪಚ್ಚಿಯಾದ ಕ್ರೂಸರ್​: ಏಳು ಜನ ದುರ್ಮರಣ, 10 ಮಂದಿಗೆ ಗಾಯ
author img

By ETV Bharat Karnataka Team

Published : Oct 15, 2023, 5:02 PM IST

Updated : Oct 15, 2023, 6:08 PM IST

ಡುಂಗಾರಪುರ (ರಾಜಸ್ಥಾನ): ಟ್ರಕ್​ ಮತ್ತು ಕ್ರೂಸರ್​ ಜೀಪ್​ ನಡುವೆ ಭೀಕರ ಅಪಘಾತ ನಡೆದು, ಏಳು ಜನರು ಮೃತಪಟ್ಟಿರುವ ಘಟನೆ ರಾಜಸ್ಥಾನದ ಡುಂಗಾರಪುರ ಜಿಲ್ಲೆಯಲ್ಲಿ ಇಂದು (ಭಾನುವಾರ) ನಡೆಯಿತು. ಇತರ ಹತ್ತು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕ್ರೂಸರ್ ಜಖಂಗೊಂಡಿದೆ.

ಬಿಚ್ಚಿವಾಡ ಪೊಲೀಸ್​ ಠಾಣಾ ವ್ಯಾಪ್ತಿಯ ರತನ್​ಪುರ ಗಡಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ದುರ್ಘಟನೆ ಜರುಗಿದೆ. ಟ್ರಕ್​ ಗುದ್ದಿದ ರಭಸಕ್ಕೆ ಕ್ರೂಸರ್​ ಪಲ್ಟಿ ಹೊಡೆದು ನಜ್ಜುಗುಜ್ಜಾಗಿದೆ. ಪರಿಣಾಮ ಎಲ್ಲಾ ಏಳು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಉಳಿದಂತೆ ಹತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಡುಂಗಾರಪುರಕ್ಕೆ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಲಕ್ಷ್ಮೀ ನಾರಾಯಣ ಮಂತ್ರಿ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುಂದನ್ ಕನ್ವರಿಯಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಯಾಳುಗಳ ಆರೋಗ್ಯ ವಿಚಾರಿಸಲು ಆಸ್ಪತ್ರೆಗೂ ತೆರಳಿದ್ದಾರೆ.

ಬಿಚ್ಚಿವಾಡ ಠಾಣಾಧಿಕಾರಿ ಮದನ್​ ಲಾಲ್ ಪ್ರತಿಕ್ರಿಯಿಸಿ, ''ಮುಂದೆ ಸಾಗುತ್ತಿದ್ದ ಕ್ರೂಸರ್​ಗೆ ಹಿಂದಿನಿಂದ ವೇಗವಾಗಿ ಬಂದು ಟ್ರಕ್​ ಗುದ್ದಿದೆ. ಇದರಿಂದ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಘಟನೆ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಟ್ರಕ್​ಗೆ ಹಿಂಬದಿಯಿಂದ ಟೆಂಪೋ ಟ್ರಾವೆಲರ್​ ಡಿಕ್ಕಿ.. 12 ಮಂದಿ ಭಕ್ತರ ದುರ್ಮರಣ, 20 ಜನರಿಗೆ ಗಾಯ

ಜೆಎನ್​ಯು ಕ್ಯಾಂಪಸ್​ನಲ್ಲಿ ಓರ್ವ ಸಾವು: ದೆಹಲಿಯಲ್ಲಿರುವ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್​ಯು) ಕ್ಯಾಂಪಸ್​ನಲ್ಲಿ ಶನಿವಾರ ತಡರಾತ್ರಿ ನಡೆದ ಬೈಕ್​ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಮೂವರು ಗಾಯಗೊಂಡ ಘಟನೆ ವರದಿಯಾಗಿದೆ. ರಾತ್ರಿ 2.30ರ ಸುಮಾರಿಗೆ ಕೆಟಎಂ ಬೈಕ್​ಗಳಲ್ಲಿ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳು, ರಸ್ತೆಯಲ್ಲಿ ನಡೆದುಕೊಂಡು ತೆರಳುತ್ತಿದ್ದ ಇತರ ಇಬ್ಬರು ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದರ ಪರಿಣಾಮ ಬೈಕ್​ ಸವಾರ ಅಂಶುಕುಮಾರ್ ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಈತ ರಷ್ಯನ್​ ಭಾಷೆಯಲ್ಲಿ ಕಲಾ ಪದವಿ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ. ಬೈಕ್​ನ ಹಿಂಬದಿ ಸವಾರ ವಿಶಾಲ್​ ಕುಮಾರ್​ ಎಂಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಈತ ಜೆಎನ್​ಯು ವಿದ್ಯಾರ್ಥಿಯಲ್ಲ. ಪಾದಚಾರಿ ವಿದ್ಯಾರ್ಥಿಗಳಾದ ಸಚಿನ್​ ಶರ್ಮಾ, ಮೃಗಾಂಕ್ ಯಾದವ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರಲ್ಲಿ ಶರ್ಮಾ ಸ್ಥಿತಿ ಗಂಭೀರವಾಗಿದೆ. ಯಾದವ್​ ಆರೋಗ್ಯ ಸ್ಥಿರವಾಗಿದ್ದು, ಈ ಇಬ್ಬರೂ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿದ್ದಾರೆ. ಈ ಘಟನೆ ನಡೆದಾಗ ತಮ್ಮ ಹಾಸ್ಟೆಲ್​ನತ್ತ ತೆರಳುತ್ತಿದ್ದರು. ಗಾಯಾಳುಗಳು ಏಮ್ಸ್​ ಟ್ರಾಮಾ ಸೆಂಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ತಿರುವಣ್ಣಮಲೈ-ಬೆಂಗಳೂರು ಹೆದ್ದಾರಿಯಲ್ಲಿ ಅಪಘಾತ: ಒಂದೇ ಕುಟುಂಬದ 7 ಮಂದಿ ಸಾವು

Last Updated : Oct 15, 2023, 6:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.