ನವದೆಹಲಿ: ಸಸ್ಯಹಾರಿಗಳು ಮತ್ತು 'O' ರಕ್ತದ ಗುಂಪು ಹೊಂದಿರುವವರು ಕೊರೊನಾ ವೈರಸ್ಗೆ ತುತ್ತಾಗುವ ಸಾಧ್ಯತೆ ಕಡಿಮೆ ಎಂದು ಉನ್ನತ ಸಂಶೋಧನಾ ಸಂಸ್ಥೆಯ ಸಮೀಕ್ಷೆ ತಿಳಿಸಿದೆ.
ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ನಡೆಸಿದ ಪ್ಯಾನ್ ಇಂಡಿಯಾ ಸರ್ವೆಯಲ್ಲಿ ಈ ಮಾಹಿತಿ ಲಭ್ಯವಾಗಿದೆ. 140 ವೈದ್ಯರ ಮತ್ತು ವಿಜ್ಞಾನಿಗಳ ತಂಡ ಈ ಅಧ್ಯಯನ ನಡೆಸಿದೆ ನಗರ ಮತ್ತು ಅರೆ ನಗರ ಪ್ರದೇಶದ 40ಕ್ಕೂ ಹೆಚ್ಚು ಸಿಎಸ್ಐಆರ್ನ ಪ್ರಯೋಗಾಲಯ ಮತ್ತು ಕೇಂದ್ರಗಳಲ್ಲಿ ಕೆಲಸ ಮಾಡುವ 10,427 ಜನರು ಹಾಗೂ ಅವರ ಕುಟುಂಬದ ಸದಸ್ಯರನ್ನ ಈ ತಂಡ ಅಧ್ಯಯನಕ್ಕೊಳಪಡಿಸಿತ್ತು.
ಸಸ್ಯಹಾರಿಗಳಲ್ಲಿ ರೋಗ ನಿರೋಧಕ ಶಕ್ತಿ
ಕೋವಿಡ್-19 ಉಸಿರಾಟದ ಕಾಯಿಲೆಯಾಗಿದ್ದರೂ, ಸಸ್ಯಹಾರ ಅದನ್ನ ತಡೆಯುತ್ತದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಉಳಿದಂತೆ ಸಸ್ಯಹಾರಿಗಳು ಸೇವನೆ ಮಾಡಿವ ಆಹಾರದಲ್ಲಿ ನಾರಿನ ಅಂಶ ಹೆಚ್ಚಾಗಿರುವುದರಿಂದ ಅವರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ ಎಂದು ಈ ಸಮೀಕ್ಷೆ ಹೇಳಿದೆ.
ಬಿ ಮತ್ತು ಎಬಿ ರಕ್ತ ಕಣ ಹೊಂದಿದವರಿಗೆ ಹೆಚ್ಚಿನ ಅಪಾಯ
ಧೂಮಪಾನ ಮಾಡುವುದು ಆರೋಗ್ಯಕ್ಕೆ ತೀವ್ರ ಹಾನಿಕಾರ ಮತ್ತು ಅನೇಕ ಕಾಯಿಲೆಗಳು ಬರಲು ಆಹ್ವಾನ ನೀಡುತ್ತದೆ ಎಂದು ಹೇಳಲಾಗಿದ್ದರೂ, ಕೊರೊನಾ ವೈರಸ್ ತಡೆಯಲು ಇದು ಕೆಲಸ ಮಾಡುತ್ತದೆ ಎಂದು ತಿಳಿಸಲಾಗಿದೆ. ಧೂಮಪಾನ ಲೋಳೆಯ ಉತ್ಪಾದನೆ ಹೆಚ್ಚಿಸುತ್ತದೆ ಎಂಬ ಮಾಹಿತಿ ಬಹಿರಂಗಗೊಂಡಿದೆ.'ಒ' ರಕ್ತದ ಕಣ ಹೊಂದಿರುವ ಜನರು ಸೋಂಕಿಗೊಳಗಾಗುವ ಸಾಧ್ಯತೆ ಕಡಿಮೆ ಇದೆ ಎಂದು ಸಮೀಕ್ಷೆ ತಿಳಿಸಿದ್ದು, ಬಿ ಮತ್ತು ಎಬಿ ರಕ್ತದ ಕಣ ಹೊಂದಿರುವವರಿಗೆ ಕೋವಿಡ್ ಸೋಂಕಿನಿಂದ ಹೆಚ್ಚಿನ ಅಪಾಯವಿದೆ ಎಂಬ ಮಾಹಿತಿ ನೀಡಿದೆ.
ಇದನ್ನೂ ಓದಿ: ವರನಿಗೆ ಕೊರೊನಾ: ಪಿಪಿಇ ಕಿಟ್ ಧರಿಸಿ ಆಸ್ಪತ್ರೆಯಲ್ಲೇ ತಾಳಿ ಕಟ್ಟಿಸಿಕೊಂಡಳು ವಧು..!
ಅನೇಕ ದೇಶಗಳಿಂದ ಇದೇ ರೀತಿಯ ಫಲಿತಾಂಶ
ಈಗಾಗಲೇ ಫ್ರಾನ್ಸ್ನಿಂದ ನಡೆದ ಕೆಲವೊಂದು ಅಧ್ಯಯನ ಮತ್ತು ಇಟಲಿ, ನ್ಯೂಯಾರ್ಕ್ ಹಾಗೂ ಚೀನಾದಿಂದ ನಡೆದಿರುವ ಸಮೀಕ್ಷೆಗಳು ಸಹ ಇದೇ ರೀತಿಯ ವರದಿ ನೀಡಿದ್ದು, ಧೂಮಪಾನಿಗಳಲ್ಲಿ ಕೋವಿಡ್ ಸೋಂಕು ತಗುಲುವ ಅಪಾಯ ಕಡಿಮೆ ಎಂದು ತಿಳಿಸಿದೆ. ಕುತೂಹಲಕಾರಿ ವಿಷಯವೆಂದರೆ ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಕೇವಲ ಶೇ. 1.3ರಷ್ಟು ಧೂಮಪಾನಿಗಳು ಭಾಗಿಯಾಗಿದ್ದರು.
ಕಳೆದ ಕೆಲ ದಿನಗಳ ಹಿಂದೆ ಯುಎಸ್ನಲ್ಲಿ ನಡೆದಿದ್ದ ಸಮೀಕ್ಷೆವೊಂದರಲ್ಲಿ 7 ಸಾವಿರಕ್ಕೂ ಅಧಿಕ ಜನರು ಭಾಗಿಯಾಗಿದ್ದರು. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಸನ್(ಸಿಡಿಸಿ) ನೀಡಿದ್ದ ಸಂಶೋಧನೆಯಿಂದ ಇದೇ ರೀತಿಯ ಫಲಿತಾಂಶ ಬಹಿರಂಗಗೊಂಡಿತ್ತು.