ನವದೆಹಲಿ: ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಈ ತಿಂಗಳು ಶೇಕಡಾ 9 ಕ್ಕಿಂತ ಹೆಚ್ಚಾಗಿದೆ ಮತ್ತು ಮಂಗಳವಾರ ಮೊದಲ ಬಾರಿಗೆ 57,000 ಪಾಯಿಂಟ್ಸ್ಗೆ ಹೆಚ್ಚಿಸಿಕೊಂಡಿದೆ, ಏಕೆಂದರೆ ಈಕ್ವಿಟಿ ಮಾರುಕಟ್ಟೆಯಲ್ಲಿ ಗೂಳಿ ಓಟ ಇಂದೂ ಮುಂದುವರಿಯಿತು.
ಬ್ಲೂ ಚಿಪ್ ಸೂಚ್ಯಂಕವು ಮಂಗಳವಾರದ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 57,625.26 ಅನ್ನು ತಲುಪಿದೆ, ಇದು ಆಗಸ್ಟ್‌ನ ಕೊನೆಯ ವಹಿವಾಟು ಕೂಡಾ ಆಗಿದೆ. ಈ ತಿಂಗಳು ಷೇರು ಮಾರುಕಟ್ಟೆಯು ಹಲವು ಹೊಸ ದಾಖಲೆಗಳನ್ನು ಮಾಡಿದೆ.
30-ಷೇರುಗಳ ಸೂಚ್ಯಂಕವು 662.63 ಪಾಯಿಂಟ್ ಗಳ ಏರಿಕೆಯೊಂದಿಗೆ ಅಥವಾ 1.16 ಶೇಕಡಾ 57,552.39 ರಲ್ಲಿ ತನ್ನ ದಾಖಲೆಯನ್ನು ಮೆಟ್ಟಿ ನಿಂತಿದೆ. ಈ ಮೂಲಕ ಮುಂಬೈ ಷೇರುಪೇಟೆಯ ಬಂಡವಾಳ 2,50,02,084.01 ಕೋಟಿಯ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಜಿಗಿದಿದೆ.
ಈಕ್ವಿಟಿ ಮಾರುಕಟ್ಟೆಯಲ್ಲಿ ಇದು ನಾಲ್ಕನೇ ದಿನದ ರ್ಯಾಲಿಯಾಗಿದ್ದು, ಈ ಸಮಯದಲ್ಲಿ ಬಿಎಸ್‌ಇ ಬೆಂಚ್ ಮಾರ್ಕ್ 1,608.18 ಪಾಯಿಂಟ್‌ಗಳು ಅಥವಾ 2.87 ಶೇಕಡಾ ಜಿಗಿದಿದೆ. ಈ ಮೊದಲು, ಆಗಸ್ಟ್ 4 ರಂದು, ಮೊದಲ ಬಾರಿಗೆ, ಇಂಟ್ರಾ-ಡೇ ಮತ್ತು ಕ್ಲೋಸಿಂಗ್ ಹಂತಗಳಲ್ಲಿ ಸೆನ್ಸೆಕ್ಸ್ 54,000 ಅಂಕಗಳನ್ನು ದಾಟಿತ್ತು.
ಒಂಬತ್ತು ದಿನಗಳ ನಂತರ, ಆಗಸ್ಟ್ 13 ರಂದು, ಸೂಚ್ಯಂಕವು 55,000 ಗಡಿ ದಾಟಿತು. "ನಿಫ್ಟಿ ಮತ್ತು ಸೆನ್ಸೆಕ್ಸ್ ಕ್ರಮವಾಗಿ 17,000 ಮತ್ತು 57,500ರ ಗಡಿ ಮುಟ್ಟಿದವು. ಇದು ಹೊಸ ಸರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಜಾಗತಿಕ ಸೂಚನೆಗಳಲ್ಲಿ ಯಾವುದೇ ಬದಲಾವಣೆಯಾಗದಿದ್ದರೆ ಇದು ಮುಂದುವರಿಯುವ ನಿರೀಕ್ಷೆಯಿದೆ" ಎಂದು ಈಕ್ವಿಟಿ 99 ಸಹ-ಸಂಸ್ಥಾಪಕ ರಾಹುಲ್ ಶರ್ಮಾ ತಿಳಿಸಿದ್ದಾರೆ.