ETV Bharat / bharat

ಷೇರು ಮಾರುಕಟ್ಟೆಯಲ್ಲಿ ಇಂದು​ ಗೂಳಿ ಓಟ: ಆದರೆ ರಿಲಯನ್ಸ್ ಮಾರ್ಕೆಟ್​ ಫುಲ್​ ಡೌನ್​!

author img

By

Published : Jun 24, 2021, 9:12 PM IST

30 ಕಂಪನಿ ಷೇರುಗಳನ್ನು ಆಧರಿಸಿದ ಬಿಎಸ್‌ಇ ಸೆನ್ಸೆಕ್ಸ್ 392.92 ಪಾಯಿಂಟ್ ಅಥವಾ ಶೇ 0.75 ರಷ್ಟು ಏರಿಕೆ ಕಂಡು 52,699 ಪಾಯಿಂಟ್‌ ತಲುಪಿದೆ.

ರಿಲಯನ್ಸ್
ರಿಲಯನ್ಸ್

ಮುಂಬೈ: ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡು ಬಂದ ಸಕಾರಾತ್ಮಕ ಸೂಚನೆಗಳ ಹಿನ್ನೆಲೆಯಲ್ಲಿ ಬಿಎಸ್‌ಇ ಸೆನ್ಸೆಕ್ಸ್ 392.92 ಪಾಯಿಂಟ್ ಏರಿಕೆ ಕಂಡು 52,699 ಪಾಯಿಂಟ್‌ ತಲುಪಿದೆ. ಮತ್ತೊಂದೆಡೆ, ರಾಷ್ಟ್ರೀಯ ಷೇರು ಸೂಚ್ಯಂಕ (ಎನ್ಎಸ್ಇ) 103.50 ಪಾಯಿಂಟ್ ಅಥವಾ 0.66 ರಷ್ಟು ಏರಿಕೆ ಕಂಡು 15,790.45 ಅಂಕಗಳನ್ನು ತಲುಪಿದೆ.

ಇದನ್ನು ಓದಿ: JIOPHONE NEXT... ಗಣೇಶ ಚತುರ್ಥಿ ದಿನ ಮಾರುಕಟ್ಟೆಗೆ ಲಗ್ಗೆ ಎಂದ ಅಂಬಾನಿ

ಟಿಸಿಎಸ್, ಟೆಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್, ಲಾರ್ಸೆನ್ ಮತ್ತು ಟೂಬ್ರೊ, ನೆಸ್ಲೆ ಇಂಡಿಯಾ ಮತ್ತು ಏಷ್ಯನ್ ಪೇಂಟ್ಸ್‌ನ ಷೇರುಗಳು ಲಾಭ ಗಳಿಸಿದೆ. ಆದರೆ, ರಿಲಯನ್ಸ್ ಇಂಡಸ್ಟ್ರೀಸ್ ಷೇರು 2.35 ರಷ್ಟು ಕುಸಿತದೊಂದಿಗೆ ಅತಿದೊಡ್ಡ ನಷ್ಟವಾಗಿದೆ.

ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಇತರ ಕ್ಷೇತ್ರಗಳಲ್ಲಿ ಭಾರಿ ಬಂಡವಾಳ ಹೂಡಿಕೆ ಘೋಷಿಸಿದ್ದಾರೆ. ಭಾರ್ತಿ ಏರ್‌ಟೆಲ್, ಪವರ್ ಗ್ರಿಡ್, ಎಚ್‌ಡಿಎಫ್‌ಸಿ, ಡಾ. ರೆಡ್ಡೀಸ್ ಮತ್ತು ಸ್ಟೇಟ್ ಬ್ಯಾಂಕ್ ಹೂಡಿಕೆಯಲ್ಲೂ ಇಳಿಕೆ ಕಂಡುಬಂದಿದೆ.

ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಈ ಬಗ್ಗೆ ಮಾತನಾಡಿದ್ದು, ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ಪ್ರವೃತ್ತಿಯ ಜೊತೆಗೆ, ಐಟಿ ಷೇರುಗಳಲ್ಲಿ ಖರೀದಿಯು ದೇಶೀಯ ಮಾರುಕಟ್ಟೆಯಲ್ಲಿ ಏರಿಕೆಗೆ ಕಾರಣವಾಗಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.