ETV Bharat / bharat

ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಹೂಡಿಕೆದಾರರಿಗೆ ₹3.39 ಲಕ್ಷ ಕೋಟಿ ನಷ್ಟ! - ದೊಡ್ಡ ಮಟ್ಟದ ಕುಸಿತ

ಸುದೀರ್ಘ ರಜೆಯ ನಂತರ ಇಂದು ವಹಿವಾಟು ಆರಂಭಿಸಿರುವ ಮುಂಬೈ ಷೇರು ಮಾರುಕಟ್ಟೆಯಲ್ಲಿ ದೊಡ್ಡಮಟ್ಟದ ಕುಸಿತ ಕಂಡು ಬಂದಿದೆ.

Sensex plunging 1291 points today
Sensex plunging 1291 points today
author img

By

Published : Apr 18, 2022, 5:24 PM IST

Updated : Apr 18, 2022, 5:33 PM IST

ಮುಂಬೈ: ಇಂದು ಮುಂಬೈ ಷೇರು ಮಾರುಕಟ್ಟೆ ತಲ್ಲಣಿಸಿದೆ. ಸೂಚ್ಯಂಕದಲ್ಲಿ ದಾಖಲೆಯ 1,291.93 ಅಂಕ ಇಳಿಕೆ ಕಂಡುಬಂದಿದೆ. ಪ್ರಮುಖ ಕಂಪನಿಗಳ ಷೇರುಗಳ ಬೆಲೆ ನೆಲಕಚ್ಚಿತು. ಹೂಡಿಕೆದಾರರು ದಾಖಲೆಯ 3.39 ಲಕ್ಷ ಕೋಟಿ ಮೌಲ್ಯದ ಸಂಪತ್ತು ಕಳೆದುಕೊಂಡಿದ್ದಾರೆ.

ಇಂದು ವಹಿವಾಟು ಆರಂಭಗೊಳ್ಳುತ್ತಿದ್ದಂತೆ ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಹಾಗು ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿಯಲ್ಲಿ ಭಾರಿ ಇಳಿಕೆ ಕಂಡುಬಂತು. ಪರಿಣಾಮ, ಹೂಡಿಕೆದಾರರು ಕೈ ಸುಟ್ಟುಕೊಂಡರು. ಪ್ರಮುಖವಾಗಿ ಇನ್ಫೋಸಿಸ್, ಹೆಚ್​ಡಿಎಫ್​ಸಿ, ಟೆಕ್ ಮಹೀಂದ್ರಾ, ಹೆಚ್‌ಸಿಎಲ್ ಟೆಕ್, ವಿಪ್ರೋ ಷೇರುಗಳು ಹಿನ್ನೆಡೆ ಅನುಭವಿಸಿದವು.

ಇದನ್ನೂ ಓದಿ: ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕಾರ್ನಿವಲ್​ ಸಂಭ್ರಮ.. ಬೇಸಿಗೆ ರಜೆ ಆನಂದಿಸಲು ವಿಶೇಷ ಪ್ಯಾಕೇಜ್​

ದಿನದ ವಹಿವಾಟಿನ ಆರಂಭದಲ್ಲೇ 1,400ಕ್ಕೂ ಹೆಚ್ಚು ಅಂಕ ಕುಸಿದ ಸೆನ್ಸೆಕ್ಸ್‌ ಮಧ್ಯಾಹ್ನದ ವೇಳೆಗೆ ಒಂದಿಷ್ಟು ಚೇತರಿಸಿಕೊಂಡಿದ್ದು, ದಿನದಂತ್ಯಕ್ಕೆ 1,291.93 ಅಂಕ ತಲುಪಿ 56,953.30 ಮಟ್ಟದಲ್ಲಿ ವ್ಯವಹಾರ ಮುಗಿಸಿತು. ಇದೇ ವೇಳೆ ನಿಫ್ಟಿ 352.60 ಅಂಕಗಳು ಕಡಿಮೆಯಾಗಿ 17,123.05 ಮಟ್ಟದಲ್ಲಿದೆ. ಮಹಾವೀರ ಜಯಂತಿ, ಅಂಬೇಡ್ಕರ್ ಜಯಂತಿ ಅಂಗವಾಗಿ ಷೇರು ಮಾರುಕಟ್ಟೆ ಬಂದ್​ ಆಗಿದ್ದು, ಇಂದು ಪುನಾರಂಭಗೊಂಡಿದೆ.

Last Updated : Apr 18, 2022, 5:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.