ಮುಂಬೈ: ಕಳೆದ ನಾಲ್ಕೈದು ದಿನಗಳಿಂದ ಇಳಿಮುಖವಾಗಿದ್ದ ಮುಂಬೈ ಷೇರುಪೇಟೆ ಸೂಚ್ಯಂಕದಲ್ಲಿ ಇಂದು ಕೊಂಚ ಚೇತರಿಕೆ ಕಂಡುಬಂದಿದೆ. ಇಂದಿನ ಆರಂಭಿಕ ವಹಿವಾಟಿನಿಂದಲೂ ಏರಿಕೆ ಕಂಡುಬಂದಿದ್ದು, ಮಧ್ಯಾಹ್ನ ಒಂದು ಗಂಟೆ ವೇಳೆಗೆ 187 ಅಂಕಗಳಷ್ಟು ಏರಿಕೆ ಕಂಡು ವ್ಯವಹಾರ ಮುಂದುವರೆಸಿತ್ತು.
ಇಂದಿನ ಆರಂಭಿಕ ವಹಿವಾಟಿನಲ್ಲಿ 58,858.22 ಅಂಕಗಳೊಂದಿಗೆ ಆರಂಭಗೊಂಡು ನೀಫ್ಟಿ 59.85 ಅಂಕ ಹೆಚ್ಚಳದೊಂದಿಗೆ 17,563.20ಕ್ಕೆ ತಲುಪಿದೆ. ಇಂದಿನ ವಹಿವಾಟಿನಲ್ಲಿ ಭಾರ್ತಿ ಏರ್ಟೆಲ್, ಪವರ್ಗ್ರಿಡ್, ಸನ್ ಫಾರ್ಮಾ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇ. 2.04ರಷ್ಟು ಏರಿಕೆ ಪಡೆದಿವೆ.
ಇನ್ನೊಂದೆಡೆ ಬಜಾಜ್ಫೀನ್ಸರ್ವ್, ಟೆಕ್ ಮಹಿಂದ್ರಾ, ಮಾರುತಿ, ಏಷಿಯನ್ ಪೇಂಟ್ಸ್ ಹಾಗೂ ಇನ್ಫೋಸಿಸ್ಗಳೂ ಇಂದು ಪ್ರಮುಖವಾಗಿ ಹಿನ್ನಡೆ ಅನುಭವಿಸಿವೆ.
ನಿನ್ನೆಯೂ ಕೂಡ ದಿನದ ಆರಂಭದಲ್ಲಿ ಸೆನ್ಸೆಕ್ಸ್ 600 ಅಂಕಗಳ ಕುಸಿತ ಕಂಡು 58,000 ಹಾಗೂ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 50 ಅಂಕಗಳ ಇಳಿಕೆಯೊಂದಿಗೆ 17,200 ರಲ್ಲಿ ವಹಿವಾಟು ನಡೆಸಿತ್ತು.
ಇದನ್ನೂ ಓದಿ: ACB Raid: ಗದಗ ಕೃಷಿ ಅಧಿಕಾರಿಯ ಶಿವಮೊಗ್ಗ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನ, ₹15 ಲಕ್ಷ ನಗದು ಪತ್ತೆ