ಮುಂಬೈ : ಭಾರತೀಯ ಷೇರುಪೇಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಇಂದೂ ಸಹ ಷೇರುಪೇಟೆ ಆರಂಭಿಕ ಆಘಾತ ಅನುಭವಿಸಿದೆ. ಆರಂಭದಲ್ಲಿ 1,000 ಅಂಕಗಳ ಕುಸಿತ ಕಂಡಿದೆ.
ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 905.19 ಅಂಕ ಇಳಿಕೆ ಕಂಡಿದೆ. 58,016.76 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಅಂತೆಯೇ ನಿಫ್ಟಿ 50 ಸೂಚ್ಯಂಕವು 270 ಅಂಕಗಳ ಕುಸಿತದೊಂದಿಗೆ ಋಣಾತ್ಮಕವಾಗಿ ವಹಿವಾಟು ಮುಂದುವರಿಸಿದ್ದು, 17,340 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಇನ್ಫೋಸಿಸ್ ಟಾಪ್ ಲೂಸರ್ ಆಗಿದ್ದು, ಶೇಕಡಾ 2 ರಷ್ಟು ಕುಸಿದಿದೆ. ನಂತರ ವಿಪ್ರೋ, ಟೆಕ್ ಮಹೀಂದ್ರಾ, ಹೆಚ್‌ಸಿಎಲ್ ಟೆಕ್, ಹೆಚ್‌ಡಿಎಫ್‌ಸಿ, ಬಜಾಜ್ ಫೈನಾನ್ಸ್, ಎಂ ಅಂಡ್ ಎಂ ಮತ್ತು ಬಜಾಜ್ ಫಿನ್‌ಸರ್ವ್, ಜೊಮ್ಯಾಟೊ ಷೇರುಗಳು ಸಹ ಶೇ.6ರಷ್ಟು ಕುಸಿದು ಹೆಚ್ಚಿನ ನಷ್ಟ ಅನುಭವಿಸಿವೆ. ಆದರೆ, ಎನ್‌ಟಿಪಿಸಿ ಮತ್ತು ನೆಸ್ಲೆ ಇಂಡಿಯಾ ಷೇರುಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.