ETV Bharat / bharat

ಜಿಲ್ಲಾ ನ್ಯಾಯಾಲಯದಿಂದ ಮಹತ್ವದ ತೀರ್ಪು.. ಬಾಲಕನ ಹತ್ಯೆ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆ - ಮಹಬೂಬಾಬಾದ್​ನ ಬಾಲಕನ ಹತ್ಯೆ ಪ್ರಕರಣ

ಮೂರು ವರ್ಷಗಳ ಹಿಂದೆ ತೆಲಂಗಾಣದಲ್ಲಿ ಸಂಚಲನ ಮೂಡಿಸಿದ್ದ ಬಾಲಕ ದೀಕ್ಷಿತ್​ ರೆಡ್ಡಿ ಕೊಲೆ ಪ್ರಕರಣದ ಕೀಚಕನಿಗೆ ಜಿಲ್ಲಾ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.

Sensational verdict of Mahabubabad district court  Accused in boys murder case sentenced to death  Mahabubabad district court  ಜಿಲ್ಲಾ ನ್ಯಾಯಾಲಯದಿಂದ ಮಹತ್ವದ ತೀರ್ಪು  ಬಾಲಕನ ಹತ್ಯೆ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆ  ಸಂಚಲನ ಮೂಡಿಸಿದ್ದ ಬಾಲಕ ದೀಕ್ಷಿತ್​ ರೆಡ್ಡಿ ಕೊಲೆ  ಕೊಲೆ ಪ್ರಕರಣದ ಆರೋಪಿ ಜಿಲ್ಲಾ ನ್ಯಾಯಾಲಯ ಮರಣದಂಡನೆ ಶಿಕ್ಷೆ  ಮಹಬೂಬಾಬಾದ್​ನ ಬಾಲಕನ ಹತ್ಯೆ ಪ್ರಕರಣ  ಪೊಲೀಸರು ಅತ್ಯಂತ ಜಾಣ್ಮೆಯಿಂದ ಈ ಪ್ರಕರಣವನ್ನು ಭೇದಿಸಿ
ಜಿಲ್ಲಾ ನ್ಯಾಯಾಲಯದಿಂದ ಮಹತ್ವದ ತೀರ್ಪು
author img

By ETV Bharat Karnataka Team

Published : Sep 30, 2023, 12:50 PM IST

ಮಹಬೂಬಾಬಾದ್(ತೆಲಂಗಾಣ): ತೆಲುಗು ರಾಜ್ಯಗಳಲ್ಲಿ ಸಂಚಲನ ಮೂಡಿಸಿದ್ದ ಮಹಬೂಬಾಬಾದ್​ನ ಬಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ದೀಕ್ಷಿತ್ ರೆಡ್ಡಿಯನ್ನು ಬರ್ಬರವಾಗಿ ಕೊಲೆ ಮಾಡಿದ ಕಿರಾತಕನಿಗೆ ಮಹಬೂಬಾಬಾದ್ ಜಿಲ್ಲಾ ನ್ಯಾಯಾಲಯ ಮರಣದಂಡನೆ ತೀರ್ಪು ನೀಡಿದೆ.

ಏನಿದು ಪ್ರಕರಣ: ಮಹಬೂಬಾಬಾದ್‌ನ ಕೃಷ್ಣಾ ಕಾಲೋನಿಯ ರಂಜಿತ್ ರೆಡ್ಡಿ-ವಸಂತ ಅವರ ಹಿರಿಯ ಪುತ್ರ ದೀಕ್ಷಿತ್ ರೆಡ್ಡಿಯನ್ನು ಅಕ್ಟೋಬರ್ 2020 ರಲ್ಲಿ ಅಪಹರಿಸಲಾಗಿತ್ತು. ಆ ಸಮಯದಲ್ಲಿ ದೀಕ್ಷಿತ್ ಕಿಡ್ನಾಪ್ ಪ್ರಕರಣವು ಸಂಚಲನ ಸೃಷ್ಟಿಸಿತ್ತು. ಆ ವೇಳೆಗೆ ಪೊಲೀಸರು ಅತ್ಯಂತ ಜಾಣ್ಮೆಯಿಂದ ಈ ಪ್ರಕರಣವನ್ನು ಭೇದಿಸಿದ್ದರು. ಕಿಡ್ನಾಪ್ ಆದ ಕೆಲವೇ ಗಂಟೆಗಳಲ್ಲಿ ಬಾಲಕನನ್ನು ಹತ್ಯೆ ಮಾಡಿದ್ದರಿಂದ ಘಟನೆ ವಿಕೋಪಕ್ಕೆ ತಿರುಗಿತ್ತು.

ಮೊದಲು ಹಣಕ್ಕೆ ಬೇಡಿಕೆಯಿಟ್ಟ ಸಾಗರ್, ದೀಕ್ಷಿತ್​ನನ್ನು ಕ್ಷಸಮುದ್ರಂ ರಸ್ತೆಯಲ್ಲಿರುವ ದಾನವಾಯಿ ಗುಡ್ಡಕ್ಕೆ ಕರೆದೊಯ್ದು ಹಣ ಕೊಡುವ ಮೊದಲೇ ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಸಾಕ್ಷ್ಯ ಸಿಗದಂತೆ ಮಾಡಲು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಸಂತ್ರಸ್ತ ಬಾಲಕನ ಕುಟುಂಬಕ್ಕೆ ಪರಿಚಿತನಾಗಿದ್ದ ಸಾಗರ್ ಎಂಬ ಯುವಕ ಈ ದುಷ್ಕೃತ್ಯದಲ್ಲಿ ಭಾಗಿಯಾಗಿರುವುದು ಪೊಲೀಸರಿಗೆ ತನಿಖೆಯಿಂದ ಗೊತ್ತಾಗಿತ್ತು.

ಮಹಬೂಬಾಬಾದ್ ಸಮೀಪದ ಶನಿಗಪುರಂ ಗ್ರಾಮದ ಆರೋಪಿ ಸಾಗರ್​ ಆಟೋಮೊಬೈಲ್ ಅಂಗಡಿವೊಂದರಲ್ಲಿ ಕೆಲಸ ಮಾಡುತ್ತಿದ್ದ. ನಂತರ ರಂಜಿತ್‌ ಬಳಿ ಸಾಗರ್​ ಕೂಲಿ ಕೆಲಸಕ್ಕಾಗಿ ಸೇರಿಕೊಂಡ. ಇನ್ನು ರಂಜಿತ್​ ಕುಟುಂಬಸ್ಥರಿಗೆ ಸಾಗರ್​ ಹತ್ತಿರವಾಗತೊಡಗಿದ. ದಿನ ಕಳೆದಂತೆ ರಂಜಿತ್​ ಮಗ ದೀಕ್ಷಿತ್​ನನ್ನು ಅಪಹರಿಸಲು ಸಾಗರ್​ ಸ್ಕೆಚ್​ ಹಾಕಿದ್ದ. ಅಕ್ಟೋಬರ್ 18, 2020 ರ ಸಂಜೆ ದೀಕ್ಷಿತ್​ಗೆ ಚಾಕೊಲೇಟ್ ಖರೀದಿಸಲು ಬೈಕ್‌ನಲ್ಲಿ ಕರೆದೊಯ್ದು ಕಿಡ್ನಾಪ್​ ಮಾಡಿದ್ದ. ಮಗುವಿನ ಅಳುವಿಗೆ ಹೆದರಿದ ಆರೋಪಿ ಕಿಡ್ನಾಪ್ ಆಗಿರುವುದು ಬಯಲಾಗುತ್ತದೆ ಎಂದು ಭಾವಿಸಿ ಮಗುವಿಗೆ ನಿದ್ದೆ ಮಾತ್ರೆ ನೀಡಿದ್ದಾನೆ. ಕುಡಿದ ಅಮಲಿನಲ್ಲಿ ರುಮಾಲಿನಿಂದ ಕೈಕಟ್ಟಿ ಟಿ-ಶರ್ಟ್​ನಿಂದ ದೀಕ್ಷಿತ್​ನ ಕತ್ತು ಹಿಸುಕಿ ಕೊಂದಿದ್ದಾನೆ ಅನ್ನೋದು ಪೊಲೀಸ್​ ತನಿಖೆ ಮೂಲಕ ಬಯಲಾಗಿದೆ.

ದೀಕ್ಷಿತ್‌ನನ್ನು ಕೊಂದ ನಂತರ ಆರೋಪಿ ಸಾಗರ್ ತನ್ನ ಪೋಷಕರಿಗೆ ಕೆಲವು ಕಾಲಿಂಗ್ ಆಪ್‌ಗಳ ಮೂಲಕ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ರಂಜಿತ್ ದೂರಿನನ್ವಯ ಪೊಲೀಸರು ಎಲ್ಲಾ ಕೋನಗಳಿಂದ ತನಿಖೆ ನಡೆಸಿದ್ದರು. ರಂಜಿತ್ ಮನೆಯ ಸುತ್ತಮುತ್ತ ಸಾಗರ್​ ತಿರುಗಾಡುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ಕುಟುಂಬಸ್ಥರು ಹಾಗೂ ಪೊಲೀಸರು ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿದರು. ಅಪಹರಣಕಾರನಿಗೆ ಹಣ ಕೊಡಲು ರಂಜಿತ್ ಕುಟುಂಬ ಸಿದ್ಧವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಜಿಲ್ಲಾ ಎಸ್ಪಿ ಚಂದ್ರಮೋಹನ್ ಮಾತನಾಡಿ, ಅವರು ಹೇಳಿದ ಸ್ಥಳಕ್ಕೆ ಹಣ ಮತ್ತು ಚಿನ್ನವನ್ನು ತೆಗೆದುಕೊಂಡು ಹೋಗಿದ್ದರು. ಅವರ ಮೇಲೆ ಪೊಲೀಸರ ಕಣ್ಗಾವಲು ಇತ್ತು. ಸಾಗರ್ ಅಲ್ಲಿಂದ ಎಸ್ಕೇಪ್​ ಆಗಿದ್ದ. ಮೂರು ದಿನಗಳ ನಂತರ ಸಾಗರ್‌ನನ್ನು ಅಪಹರಣಕಾರನೆಂದು ಬಲವಾದ ತಾಂತ್ರಿಕ ಸಾಕ್ಷ್ಯಗಳೊಂದಿಗೆ ಬಂಧಿಸಿ ರಿಮಾಂಡ್‌ಗೆ ಕಳುಹಿಸಲಾಗಿತ್ತು ಎಂದು ಎಸ್‌ಪಿ ವಿವರಿಸಿದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಮಹಬೂಬಾಬಾದ್ ಜಿಲ್ಲಾ ನ್ಯಾಯಾಲಯ ಆರೋಪಿಯನ್ನು ದೋಷಿ ಎಂದು ಘೋಷಿಸಿ ಮರಣದಂಡನೆ ಶಿಕ್ಷೆ ವಿಧಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೃಢವಾದ ಸಾಕ್ಷ್ಯದೊಂದಿಗೆ ನಾವು ನ್ಯಾಯಾಲಯಕ್ಕೆ ತಪ್ಪಿತಸ್ಥನನ್ನು ಹಾಜರುಪಡಿಸಿದ್ದೇವೆ. ಶುಕ್ರವಾರ ನ್ಯಾಯಾಲಯವು ಆರೋಪಿಗೆ ಮರಣದಂಡನೆ ವಿಧಿಸಿದೆ ಎಂದು ಮಹಬೂಬಾಬಾದ್ ಎಸ್ಪಿ ಚಂದ್ರಮೋಹನ್​ ಹೇಳಿದರು.

ಮಹಬೂಬಾಬಾದ್ ಜಿಲ್ಲಾ ನ್ಯಾಯಾಧೀಶರ ತೀರ್ಪಿಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಕೊಲೆಗಾರನಿಗೆ ಸರಿಯಾದ ಶಿಕ್ಷೆಯಾಗಿದೆ ಎಂದು ಕೊಲೆಗೀಡಾದ ಬಾಲಕನ ಪೋಷಕರು ತಿಳಿಸಿದರು. ಮೂರು ವರ್ಷಗಳ ನಂತರ ತಮ್ಮ ಮಗುವನ್ನು ಕೊಂದ ಕೀಚಕನಿಗೆ ಶಿಕ್ಷೆ ನೀಡಲು ಶ್ರಮಿಸಿದ ಪೊಲೀಸರು ಮತ್ತು ನ್ಯಾಯಾಂಗದ ಪ್ರಯತ್ನವನ್ನು ಮೆಚ್ಚಿ ಸಂತ್ರಸ್ತೆಯ ಕುಟುಂಬದವರು ಹಾಲಿನ ಅಭಿಷೇಕ ಮಾಡಿದರು. ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದರು.

ಮಂದಾ ಸಾಗರ್ ಎಂಬ ವ್ಯಕ್ತಿ ನನ್ನ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಪ್ರಕರಣದಲ್ಲಿ ಮಹಬೂಬಾಬಾದ್ ಕೋರ್ಟ್ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಅದಕ್ಕಾಗಿ ನಮಗೆ ಸಂತೋಷವಾಗಿದೆ ಎಂದು ದೀಕ್ಷಿತ್ ರೆಡ್ಡಿ ತಂದೆ ರಂಜಿತ್ ರೆಡ್ಡಿ ಹರ್ಷ ವ್ಯಕ್ತಪಡಿಸಿದ್ದಾರೆ.

ಓದಿ: Ramoji Film City: ದೆಹಲಿಯಲ್ಲಿ ನಡೆದ MICE 2023 ರಲ್ಲಿ ಗಮನ ಸೆಳೆದ ರಾಮೋಜಿ ಫಿಲ್ಮ್ ಸಿಟಿ ಸ್ಟಾಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.