ನವದೆಹಲಿ : ಕಳೆದ ವರ್ಷ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಹತ್ಯೆಯೊಂದರ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಕಮಲ್ ಗಹ್ಲೋಟ್ನನ್ನು ದೆಹಲಿ ಪೊಲೀಸರು ಇಂದು ಬಂಧಿಸಿದ್ದಾರೆ.
ಅಕ್ಟೋಬರ್ 22ರಂದು 55 ಫೂಟಾ ರಸ್ತೆಯ ಉತ್ತಮ್ ನಗರದ ನವಾಡಾ ಹೌಸಿಂಗ್ ಕಾಂಪ್ಲೆಕ್ಸ್‌ನಲ್ಲಿ ವಿಕಾಸ್ ಮೆಹ್ತಾ ಎಂಬುವರನ್ನು ಗೆಹ್ಲೋಟ್ ಹತ್ಯೆಗೈದಿದ್ದ. ಇದೀಗ ದೆಹಲಿಯ ಬಕ್ಕರ್‌ವಾಲಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಆರೋಪಿ ಕಮಲ್ ಗಹ್ಲೋಟ್ ಗಾಯಗೊಂಡಿದ್ದು, ದೆಹಲಿ ಪೊಲೀಸರ ವಿಶೇಷ ಸೆಲ್ ಆತನನ್ನು ಬಂಧಿಸಿದೆ.
ಕೊಲೆ ಮಾಡಿದ ದೃಶ್ಯ ಸಿಸಿಟಿವಿ ಕ್ಯಾಮೆರಾ ಸೆರೆ ಹಿಡಿದಿತ್ತು. ಮೂರು ಗುಂಡುಗಳನ್ನು ಹಾರಿಸಿ ಆತ ಹತ್ಯೆಗೈದಿದ್ದ. ಈ ಕೊಲೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.