ETV Bharat / bharat

ಕಪಿಲ್ ಸಿಬಲ್ ನಿವಾಸದೆದುರು ‘ಸಂಘಟಿತ ಗೂಂಡಾಗಿರಿ’.. ಕಾರ್ಯಕರ್ತರ ವಿರುದ್ಧ ಕೈ ನಾಯಕರ ಸಿಡಿಮಿಡಿ - ನಾಯಕ ಆನಂದ್ ಶರ್ಮಾ

ಕಪಿಲ್ ಸಿಬಲ್ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ನಡೆಸಿರುವ ಕೃತ್ಯಕ್ಕೆ ಕೈ ನಾಯಕರು ಸಿಡಿದೆದ್ದಿದ್ದಾರೆ. ಕಪಿಲ್ ನಿವಾಸದೆದುರು ನೆರದಿದ್ದ ನೂರಾರು ಕಾರ್ಯಕರ್ತರು ಅವರ ಕಾರನ್ನು ಜಖಂ ಮಾಡಿದ್ದರಲ್ಲದೇ, ಅವರ ವಿರುದ್ಧ ಬಿತ್ತಿಪತ್ರಗಳ ಹಿಡಿದು ಘೋಷಣೆ ಕೂಗಿದ್ದರು.

senior-congress-leaders-condemn-orchestrated-hooliganism-outside-sibals-residence
ಕಾರ್ಯಕರ್ತರ ವಿರುದ್ಧ ಕೈ ನಾಯಕರ ಸಿಡಿಮಿಡಿ
author img

By

Published : Oct 1, 2021, 9:28 AM IST

ನವದೆಹಲಿ: ಪಂಜಾಬ್ ಕಾಂಗ್ರೆಸ್​ನಲ್ಲಿ ಉಂಟಾದ ಬಿರುಕಿನ ಹಿನ್ನೆಲೆ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಪಕ್ಷದ ನಡೆ ವಿರುದ್ಧ ಹಲವು ಹೇಳಿಕೆ ನೀಡಿದ್ದರು. ಕಾಂಗ್ರೆಸ್​ನ ಅಧ್ಯಕ್ಷರು ಯಾರೆಂಬುದು ಗೊತ್ತಾಗುತ್ತಿಲ್ಲ. ಯಾರು ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೆ ಸಿಬಲ್ ನಿವಾಸದೆದರು ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿ ಗದ್ದಲಕ್ಕೆ ಕಾರಣರಾಗಿದ್ದರು.

ಇದೀಗ ಕಾಂಗ್ರೆಸ್​ ನಾಯಕರು ಸಿಬಲ್ ಪರ ವಾದಕ್ಕೆ ನಿಂತಿದ್ದಾರೆ. ಸಿಬಲ್ ಮನೆ ಮುಂದೆ ಪ್ರತಿಭಟನೆ ನಡೆಸಿ ಸಂಘಟಿತ ಗೂಂಡಾಗಿರಿ ಪ್ರದರ್ಶಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗುಲಾಮ್​ ನಬಿ ಆಜಾದ್​, ನಿನ್ನೆ ರಾತ್ರಿ ಕಪಿಲ್ ಸಿಬಲ್ ನಿವಾಸದ ಮುಂದೆ ನಡೆಸಿರುವ ‘ಸಂಘಟಿತ ಗೂಂಡಾಗಿರಿ’ಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವರು ನಿಷ್ಠಾವಂತ ಕಾಂಗ್ರೆಸಿಗರಾಗಿದ್ದಾರೆ ಮತ್ತು ಸಂಸತ್ತಿನ ಒಳಗೆ ಮತ್ತು ಹೊರಗೆ ಪಕ್ಷಕ್ಕಾಗಿ ಹೋರಾಡುತ್ತಿದ್ದಾರೆ. ಪಕ್ಷದ ಯಾವುದೇ ಸಲಹೆಯನ್ನು ಹತ್ತಿಕ್ಕುವ ಬದಲು ಸ್ವಾಗತಿಸಬೇಕು, ಗೂಂಡಾಗಿರಿ ಸ್ವೀಕಾರಾರ್ಹವಲ್ಲ ಎಂದು ಆಜಾದ್ ಟ್ವೀಟ್ ಮಾಡಿದ್ದಾರೆ.

  • I strongly condemn the orchestrated hooliganism @KapilSibal’s residence last night. He is a loyal congressman fighting for the party both inside and outside the Parliament. Any suggestion from any quarter should be welcomed instead of suppressing, hooliganism is unacceptable.

    — Ghulam Nabi Azad (@ghulamnazad) September 30, 2021 " class="align-text-top noRightClick twitterSection" data=" ">

ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಟ್ವೀಟ್ ಮಾಡಿ, ನಾವು ಪಕ್ಷದೊಂದಿಗೆ ಅರ್ಥಪೂರ್ಣ ಸಂಭಾಷಣೆಗಳನ್ನು ನಡೆಸಲು ಸಾಧ್ಯವಾಗದೇ ಅಸಹಾಯಕನಾಗಿದ್ದೇವೆ. ಸಹೋದ್ಯೋಗಿ ಮತ್ತು ಸಂಸದರ ನಿವಾಸದ ಹೊರಗೆ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗುವ ಚಿತ್ರಗಳನ್ನು ನೋಡಿದಾಗ ನನಗೆ ನೋವಾಗುತ್ತಿದೆ ಎಂದಿದ್ದಾರೆ.

  • I feel helpless when we cannot start meaningful conversations within party forums.

    I also feel hurt and helpless when I see pictures of Congress workers raising slogans outside the residence of a colleague and MP.

    The safe harbour to which one can withdraw seems to be silence.

    — P. Chidambaram (@PChidambaram_IN) September 30, 2021 " class="align-text-top noRightClick twitterSection" data=" ">

ಜೊತೆಗೆ ನಾಯಕ ಆನಂದ್ ಶರ್ಮಾ ಸಹ ಘಟನೆಗೆ ಖಂಡನೆ ವ್ಯಕ್ತಪಡಿಸಿದ್ದು, ಕಾಂಗ್ರೆಸ್​​ಗೆ ವಾಕ್ ಸ್ವಾಂತಂತ್ರ್ಯ ಎತ್ತಿ ಹಿಡಿದಿರುವ ಇತಿಹಾಸವಿದೆ. ವಿಭಿನ್ನ ಅಭಿಪ್ರಾಯ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ ಎಂದು ಪ್ರತಿಪಾದಿಸಿದ್ದಾರೆ.

  • Congress has a history of upholding freedom of expression . differences of opinion and perception are integral to a democracy. Intolerance and violence is alien to Congress values and culture.

    — Anand Sharma (@AnandSharmaINC) September 30, 2021 " class="align-text-top noRightClick twitterSection" data=" ">

ನಾವು ಜಿ-23 ಸದಸ್ಯರು. ಜಿ ಹುಜೂರ್​-23 ಎನ್ನುವವರಲ್ಲ. ಪಕ್ಷದಲ್ಲಿನ ಸಮಸ್ಯೆಗಳ ಬಗ್ಗೆ ಈ ಹಿಂದಿನಿಂದಲೂ ನಾವು ಪ್ರಸ್ತಾಪ ಮಾಡುತ್ತಲೇ ಇದ್ದೇವೆ. ಪಕ್ಷದಲ್ಲಿ ಮಹತ್ವದ ಬದಲಾವಣೆ ಬರಬೇಕು. ನಾಯಕತ್ವದ ಅವಶ್ಯಕತೆ ಇದೆ ಎಂದು ಕಳೆದ ವರ್ಷವೇ ಪತ್ರ ಬರೆದಿದ್ದ ಹಿರಿಯ ನಾಯಕರಲ್ಲಿ ಕಪಿಲ್​ ಸಿಬಲ್ ಕೂಡ ಒಬ್ಬರು ಎಂಬುದು ಗಮನಾರ್ಹ ವಿಚಾರ.

ಇದನ್ನೂ ಓದಿ: ನಾನವನಲ್ಲ.. ನನಗೆ ಟ್ಯಾಗ್​ ಮಾಡುವುದು ದಯವಿಟ್ಟು ನಿಲ್ಲಿಸಿ: ಗೋಲ್​​ಕೀಪರ್​​ 'ಅಮರೀಂದರ್​ ಸಿಂಗ್​' ಮನವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.