ಅಗರ್ತಲಾ(ತ್ರಿಪುರಾ): ಕಾನೂನುಬಾಹಿರ ಸಂಘಟನೆಯಾದ ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರಾದ (NLFT) ಹಿರಿಯ ಕಮಾಂಡರ್ ಅಗರ್ತಲಾದಲ್ಲಿ ಗಡಿ ಭದ್ರತಾ ಪಡೆ (BSF) ಮುಂದೆ ಶರಣಾಗಿದ್ದಾರೆ. 51 ವರ್ಷದ ರಾಣಾ ಬಹದ್ದೂರ್ ದೇಬ್ಬರ್ಮಾ ಅವರು ಎನ್‌ಎಲ್‌ಎಫ್‌ಟಿ-ಬಿಎಂ (NLFT -BM) ಸಂಘಟನೆಯಲ್ಲಿ ಸಕ್ರಿಯರಾಗಿದ್ದರು.
ಬಿಎಸ್ಎಫ್ ಮುಂದೆ ಶರಣಾದ ಅವರು ತ್ರಿಪುರಾದ ಐಜಿಪಿ ಸುಶಾಂತ ಕುಮಾರ್ ನಾಥ್ ಮತ್ತು ಬಿಎಸ್ಎಫ್ನ ಹಿರಿಯ ಅಧಿಕಾರಿಗಳು ಮುಂದೆ ಶಸ್ತ್ರಾಸ್ತ್ರ ತ್ಯಜಿಸಿದರು. ಖೋವೈ ಜಿಲ್ಲೆಯ ಭಕ್ತೋಮಣಿಪಾರ (ಲಕ್ಷ್ಮೀಚೆರಾ) ಪ್ರದೇಶದವಾರಾದ ರಾಣಾ ಬಹದ್ದೂರ್ ದೇಬ್ಬರ್ಮಾ 1995ರಲ್ಲಿ NLFTಗೆ ಸೇರ್ಪಡೆಯಾಗಿದ್ದರು.
ಈಗ ಅವರು ಸುಮಾರು 25 ವರ್ಷಗಳ ನಂತರ ಮುಖ್ಯವಾಹಿನಿಗೆ ಸೇರ್ಪಡೆಯಾಗಿದ್ದಾರೆ. ಇವರನ್ನು ರಾಜ್ಯ ಸರ್ಕಾರ ಎನ್‌ಎಲ್‌ಎಫ್‌ಟಿ-ಬಿಎಂ ಸಂಘಟನೆಯ ಸಕ್ರಿಯ ನಕ್ಸಲ್ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿತ್ತು. ಇದಕ್ಕೂ ಮೊದಲು ಅಕ್ಟೋಬರ್ 18ರಂದು ಎನ್‌ಎಲ್‌ಎಫ್‌ಟಿ-ಬಿಎಂ ಸಂಘಟನೆಯ ಜೈಬಾ ಕಲೋಯ್ ಬಿಎಸ್ಎಫ್ ಮುಂದೆ ಶರಣಾಗಿದ್ದರು.
ಕೆಲವು ವರ್ಷಗಳಿಂದ, ಎನ್‌ಎಲ್‌ಎಫ್‌ಟಿ ಸಂಘಟನೆಯ ಅನೇಕರು ಬಿಎಸ್‌ಎಫ್ ಮತ್ತು ಪೊಲೀಸರ ಮುಂದೆ ಶರಣಾಗುತ್ತಿದ್ದಾರೆ. 2017ರಲ್ಲಿ ಐವರು, 2018ರಲ್ಲಿ 12 ಮಂದಿ, 2019ರಲ್ಲಿ ಮೂವರು, 2020ರಲ್ಲಿ ಮೂವರು ಶಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: ಛತ್ ಪೂಜಾ ಆಚರಣೆ ವೇಳೆ ನದಿಯಲ್ಲಿ ಮುಳುಗಿ ನಾಲ್ವರು ಮಕ್ಕಳ ದುರ್ಮರಣ