ETV Bharat / bharat

Seema Haider: ಕರಾಚಿಯಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್​ಳಿಂದ​ 'ಪಾಕಿಸ್ತಾನ ಮುರ್ದಾಬಾದ್​' ಘೋಷಣೆ - ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್​

Pakistan murdabad slogans: ಪ್ರಿಯಕರನಿಗಾಗಿ ಜನ್ಮಕೊಟ್ಟ ಪಾಕಿಸ್ತಾನವನ್ನು ಬಿಟ್ಟು ಭಾರತಕ್ಕೆ ಬಂದಿರುವ ಸೀಮಾ ಹೈದರ್​ ಪಾಕ್​ ವಿರುದ್ಧವೇ ಧಿಕ್ಕಾರ ಕೂಗಿ, ಭಾರತ ಜಿಂದಾಬಾದ್​ ಎಂದಿದ್ದಾರೆ. ಇದರ ವಿಡಿಯೋ ವೈರಲ್​ ಆಗುತ್ತಿದೆ.

ಸೀಮಾ ಹೈದರ್
ಸೀಮಾ ಹೈದರ್
author img

By

Published : Aug 14, 2023, 3:26 PM IST

Updated : Aug 14, 2023, 4:50 PM IST

ಪಾಕಿಸ್ತಾನ ಮುರ್ದಾಬಾದ್​ ಘೋಷಣೆ ಕೂಗಿದ ಸೀಮಾ ಹೈದರ್​

ನವದೆಹಲಿ/ ಗ್ರೇಟರ್ ನೋಯ್ಡಾ: ತನ್ನ ಪ್ರಿಯಕರನಿಗಾಗಿ ಪಾಕಿಸ್ತಾನದ ಕರಾಚಿಯಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್​ 'ಹರ್​ಘರ್​ ತಿರಂಗಾ' ಅಭಿಯಾನದಲ್ಲಿ ಪಾಲ್ಗೊಂಡು, ಭಾರತ ಜಿಂದಾಬಾದ್​, ಪಾಕಿಸ್ತಾನ ಮುರ್ದಾಬಾದ್​ ಎಂದು ಘೋಷಣೆ ಕೂಗಿದ್ದಾರೆ. ಕುಟುಂಬ ಸಮೇತರಾಗಿ ಮನೆಯ ಮೇಲೆ ತ್ರಿವರ್ಣ ಧ್ವಜಾರೋಹಣದಲ್ಲಿ ಪಾಲ್ಗೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ಸೀಮಾ ಹೈದರ್ ಮತ್ತು ಪ್ರಿಯಕರ ಸಚಿನ್ ಮೀನಾ ಅವರ ಪರವಾಗಿ ಕೋರ್ಟ್​ನಲ್ಲಿ ವಾದ ಮಂಡಿಸುತ್ತಿರುವ ವಕೀಲ ಎಪಿ ಸಿಂಗ್ ಅವರನ್ನು ಗ್ರೇಟರ್ ನೋಯ್ಡಾದಲ್ಲಿ ಭೇಟಿ ಮಾಡಲು ಬಂದಿದ್ದರು. ಈ ವೇಳೆ ಎಲ್ಲರೂ ಸೇರಿ ಮನೆಯ ಮೇಲೆ ಹರ್​ಘರ್​ ತಿರಂಗಾ ಅಭಿಯಾನದ ಭಾಗವಾಗಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಈ ವೇಳೆ ಸೀಮಾ ಗುಲಾಂ ಹೈದರ್, ಭಾರತ್ ಮಾತಾ ಕೀ ಜೈ ಮತ್ತು ವಂದೇ ಮಾತರಂ ಘೋಷಣೆಗಳನ್ನು ಕೂಗಿದರು. ಇದರ ಜೊತೆಗೆ ಪಾಕಿಸ್ತಾನ ಮುರ್ದಾಬಾದ್ ಎಂದೂ ಹೇಳಿದ್ದಾರೆ. ಇದನ್ನು ವಿಡಿಯೋದಲ್ಲಿ ಕಾಣಬಹುದು.

ತ್ರಿವರ್ಣ ಧ್ವಜ ಹಿಡಿದ ಸೀಮಾ: ಭಾರತ ಸರ್ಕಾರ ಕರೆ ನೀಡಿರುವ ತ್ರಿವರ್ಣ ಧ್ವಜ ಅಭಿಯಾನವನ್ನು ಬೆಂಬಲಿಸುವುದಾಗಿ ಹೇಳಿರುವ ಸೀಮಾ ಹೈದರ್​, ಅಭಿಯಾನದ ಅಂಗವಾಗಿ ತಮ್ಮ ಮನೆಯ ಛಾವಣಿಯ ಮೇಲೆ ಧ್ವಜವನ್ನು ಹಾರಿಸಿದ್ದಾರೆ. ಈ ವೇಳೆ ಅವರು ತ್ರಿವರ್ಣಗಳ ಸೀರೆಯನ್ನು ಧರಿಸಿದ್ದರು. ತಲೆಗೆ ಜೈ ಮಾತಾ ಎಂಬ ಬರೆದ ಪಟ್ಟಿಯನ್ನು ಕಟ್ಟಿಕೊಂಡಿದ್ದರು. ಕೊರಳಿಗೆ ತ್ರಿವರ್ಣ ಧ್ವಜ ಬಟ್ಟೆಯನ್ನು ಸುತ್ತಿಕೊಂಡಿದ್ದರು. ಕೈಯಲ್ಲೂ ಧ್ವಜ ಹಿಡಿದುಕೊಂಡಿದ್ದರು.

ಈ ವೇಳೆ ಮಾತನಾಡಿರುವ ವಕೀಲ ಎಪಿ ಸಿಂಗ್​, ಸೀಮಾ ಮತ್ತು ಸಚಿನ್​ ಅವರು, ದೇಶದ ಎಲ್ಲ ಕುಟುಂಬಗಳಂತೆ ತ್ರಿವರ್ಣ ಧ್ವಜಾರೋಹಣ ಮಾಡಿದ್ದಾರೆ. ಸ್ವಾತಂತ್ರ್ಯೋತ್ಸವದಂದು ಪ್ರತಿ ಮನೆಯಲ್ಲೂ ದೇಶದ ತ್ರಿವರ್ಣ ಧ್ವಜ ಹಾರಬೇಕು. ಸೀಮಾ ಕುಟುಂಬ ಕೂಡ ಅದನ್ನೇ ಮಾಡಿದೆ ಎಂದಿದ್ದಾರೆ.

ಸಿನಿಮಾ ಒಪ್ಪಿಕೊಂಡಿಲ್ಲ: ಇನ್ನು, ತನ್ನ ಮತ್ತು ಸಚಿನ್​ ಮೀನಾ ಅವರ ಪ್ರೇಮಕಥೆ ಆಧಾರಿತ ಸಿನಿಮಾ ಮಾಡುತ್ತಿರುವ ನಿರ್ಮಾಪಕ, ನಿರ್ದೇಶಕ ಅಮಿತ್ ಜಾನಿ ಅವರ ಕರಾಚಿ ಟು ನೊಯ್ಡಾಗೆ ಓಕೆ ಅಂದಿಲ್ಲ. ವಕೀಲರ ಜೊತೆ ಈ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಸೀಮಾ ಹೈದರ್​ ಹೇಳಿದ್ದಾರೆ. ಕರಾಚಿ ಟು ನೋಯ್ಡಾ ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಚಿತ್ರಕ್ಕೆ ಸಂಬಂಧಿಸಿದಂತೆ ಆಡಿಷನ್‌ಗಳು ನಡೆದಿದ್ದು, ಹಾಡೊಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

ಇದನ್ನೂ ಓದಿ: ಸೀಮಾ ಹೈದರ್‌ ಪಾಕಿಸ್ತಾನದ ಐಎಸ್‌ಐ ಮಹಿಳಾ ಏಜೆಂಟ್​ ​ ಎಂಬ ಅನುಮಾನ: ತೀವ್ರಗೊಂಡ ತನಿಖೆ

Last Updated : Aug 14, 2023, 4:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.