ತ್ರಾಲ್ (ಜಮ್ಮು-ಕಾಶ್ಮೀರ): ಸಾಮಾನ್ಯ ಶೋಧ ಕಾರ್ಯಾಚರಣೆಯಲ್ಲಿ ಜಂಟಿ ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಮಧುರಾ ತ್ರಾಲ್ ಪ್ರದೇಶದಲ್ಲಿ ಉಗ್ರರ ಅಡಗುತಾಣವನ್ನು ಪತ್ತೆ ಹಚ್ಚಿವೆ. ಆದರೆ ಅಲ್ಲಿ ಯಾವುದೇ ಮದ್ದುಗುಂಡುಗಳು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.
ಶೂ ಮತ್ತು ಸಾಕ್ಸ್‌ಗಳು ಸೇರಿದಂತೆ ಕೆಲವು ತುಕ್ಕು ಹಿಡಿದ ಅಡುಗೆ ಪಾತ್ರೆಗಳನ್ನು ಸ್ಥಳದಿಂದ ಭದ್ರತಾ ಪಡೆ ವಶಪಡಿಸಿಕೊಂಡಿದ್ದು, ಈ ಸಂಬಂಧ ಪೊಲೀಸರು ಕಾನೂನಿನ ಸೂಕ್ತ ನಿಬಂಧನೆಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಮಾರ್ಚ್.5ರಂದು ಕಿಶ್ತ್ವಾರ್‌ನ ಉಗ್ರಗಾಮಿ ಅಡಗುತಾಣದಿಂದ ಭದ್ರತಾ ಪಡೆಗಳು ಯುದ್ಧೋಚಿತ ಮಳಿಗೆಗಳ ಬೃಹತ್ ಸಂಗ್ರಹವನ್ನು ವಶಪಡಿಸಿಕೊಂಡಿದ್ದವು. ಇದು ಉಗ್ರಗಾಮಿ ಅಡಗುತಾಣಕ್ಕೆ ಭಾರಿ ಹೊಡೆತ ನೀಡಿತ್ತು. ಈ ಮೂಲಕ ಭದ್ರತಾ ಪಡೆಗಳು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಶತ್ರುಗಳ ಕೈಗೆ ಸಿಗದಂತೆ ತಡೆಯುತ್ತಿದೆ ಮತ್ತು ಕಿಶ್ತ್ವಾರ್‌ನಲ್ಲಿ ಉಗ್ರಗಾಮಿತ್ವ ನಾಶಪಡಿಸುವ ಗುರಿಯನ್ನು ಹೊಂದಿವೆ.
ಇದನ್ನೂ ಓದಿ: ಐದು ದಿನದಲ್ಲಿ 3.20 ರೂ. ಏರಿಕೆ ಕಂಡ ಪೆಟ್ರೋಲ್ - ಡೀಸೆಲ್: ಇಂದೂ ಗ್ರಾಹಕನ ಜೇಬಿಗೆ ಕತ್ತರಿ