ETV Bharat / bharat

Kisan Mahapanchayat: ಕರ್ನಾಲ್​ನಲ್ಲಿ ಇಂಟರ್​ನೆಟ್​ ಸೇವೆ ಸ್ಥಗಿತ

ಕರ್ನಾಲ್​ ಜಿಲ್ಲೆಯಲ್ಲಿ ಮಹಾಪಂಚಾಯತ್​ ನಡೆಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಇಂಟರ್​ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.

ಕರ್ನಾಲ್​ನಲ್ಲಿ ಇಂಟರ್​ನೆಟ್​ ಸೇವೆ ಸ್ಥಗಿತ
ಕರ್ನಾಲ್​ನಲ್ಲಿ ಇಂಟರ್​ನೆಟ್​ ಸೇವೆ ಸ್ಥಗಿತ
author img

By

Published : Sep 7, 2021, 11:02 AM IST

ನವದೆಹಲಿ: ಹರಿಯಾಣದ ಕರ್ನಾಲ್​ ಜಿಲ್ಲೆಯಲ್ಲಿ ಕಿಸಾನ್​ ಮಹಾ ಪಂಚಾಯತ್ ನಡೆಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಭದ್ರತೆ ಹೆಚ್ಚಿಸಲಾಗಿದೆ, ಜತೆಗೆ ಈ ಪ್ರದೇಶ ವ್ಯಾಪ್ತಿಯ ಇಂಟರ್​ನೆಟ್​ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಸಾರ್ವಜನಿಕ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆಯಾಗಬಾರದು. ಎಸ್‌ಎಂಎಸ್ ಮತ್ತು ಸಾಮಾಜಿಕ ಮಾಧ್ಯಮದ ದುರುಪಯೋಗವನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರಿ ವಕ್ತಾರರು ತಿಳಿಸಿದ್ದಾರೆ.

ಟೆಲಿಕಾಂ ಸೇವೆಗಳ ತಾತ್ಕಾಲಿಕ ಅಮಾನತು (ಸಾರ್ವಜನಿಕ ತುರ್ತು ಅಥವಾ ಸಾರ್ವಜನಿಕ ಸುರಕ್ಷತೆ) ನಿಯಮಗಳು 2017 ರ ನಿಯಮ 2 ರ ಆಧಾರದ ಮೇಲೆ ರಾಜ್ಯದ ಗೃಹ ಇಲಾಖೆಯ ಕಾರ್ಯದರ್ಶಿ ಈ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಕಿಸಾನ್ ಮಹಾ ಪಂಚಾಯತ್​ಗೆ ಕಾಂಗ್ರೆಸ್ ಬೆಂಬಲ.. ಹರಿಯಾಣ ಎಐಸಿಸಿ ಉಸ್ತುವಾರಿ ಹೇಳಿದ್ದೇನು?

ಸೆಂಟ್ರಲ್ ಆರ್ಮ್ಡ್ ಪೋಲಿಸ್ ಫೋರ್ಸ್ (ಸಿಎಪಿಎಫ್) ನ 10 ಕಂಪನಿಗಳು ಸೇರಿದಂತೆ 40 ಕಂಪನಿಗಳ ಭದ್ರತಾ ಪಡೆಗಳನ್ನು ಪಟ್ಟಣದಲ್ಲಿ ನಿಯೋಜಿಸಲಾಗಿದೆ. ಸೋಮವಾರ ಮಧ್ಯಾಹ್ನದಿಂದ ಮಂಗಳವಾರ ರಾತ್ರಿಯವರೆಗೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಕುರುಕ್ಷೇತ್ರ, ಕೈತಾಲ್, ಜಿಂದ್ ಮತ್ತು ಪಾಣಿಪತ್‌ನಲ್ಲಿ ಇಂಟರ್​ನೆಟ್​ ಮತ್ತು SMS ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.