ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಭಾಗವು ಸೋಮವಾರ ಪುನರಾರಂಭಗೊಳ್ಳಲಿದೆ. ವಿಶೇಷ ಎಂದರೆ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಜಮ್ಮು - ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಬಜೆಟ್ ಮಂಡಿಸಲಿದ್ದಾರೆ.
ದೇಶದಲ್ಲಿ ಕೋವಿಡ್ ಅಬ್ಬರ ಕಡಿಮೆಯಾಗಿದ್ದು, ಈ ಮೊದಲಿನಂತೆ ಸಹಜವಾಗೇ ಕಲಾಪಗಳು ಸಹ ಸಹಜ ಸ್ಥಿತಿಗೆ ಮರಳಲಿವೆ. ಆದಾಗ್ಯೂ, ಸಂಸತ್ತಿನ ಅಧಿವೇಶನಗಳ ಹಿಂದಿನ ಭಾಗಗಳಲ್ಲಿ ಮುಂದುವರೆದಂತೆ ಕೋವಿಡ್ ಮಾರ್ಗಸೂಚಿಗಳ ಅನ್ವಯವೇ ಕಲಾಪಗಳು ನಡೆಯಲಿವೆ. ಸಾಮಾಜಿಕ ಅಂತರ ಸಹ ಎಂದಿನಂತೆ ಮುಂದುವರೆಯಲಿದೆ. ಎರಡೂ ಸದನಗಳ ಕಲಾಪಗಳು ಬೆಳಗ್ಗೆ 11 ರಿಂದ ಸಂಜೆ 6 ರವರೆಗೆ ನಡೆಯಲಿವೆ.
ಇದನ್ನು ಓದಿ:ಉಕ್ರೇನ್ ಬಿಕ್ಕಟ್ಟು ಭಾರತಕ್ಕೆ ಎಚ್ಚರಿಕೆಯ ಕರೆಗಂಟೆ: ಸಚಿವ ಗೋಯಲ್