ನವದೆಹಲಿ: ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿರುವ ಕಾರಣ ಈಗಾಗಲೇ ಫ್ರಾನ್ಸ್ನಿಂದ ಮೊದಲ ಬ್ಯಾಚ್ನ ಐದು ರಫೇಲ್ ಜೆಟ್ಗಳು ಜುಲೈ 29ರಂದು ಭಾರತಕ್ಕೆ ಆಗಮಿಸಿದ್ದು, ಇದರ ಬೆನ್ನಲ್ಲೇ ಇದೀಗ ಮತ್ತೊಂದು ಬ್ಯಾಚ್ನ ಯುದ್ಧ ವಿಮಾನಗಳು ಬಂದಿಳಿದಿವೆ. ಇದಕ್ಕೆ ಸಂಬಂಧಿಸಿದಂತೆ ಇಂಡಿಯನ್ ಏರ್ಪೋರ್ಸ್ ಟ್ವೀಟ್ ಮಾಡಿ ಮಾಹಿತಿ ನೀಡಿದೆ.
-
Second batch of IAF #Rafale aircraft arrived in India at 8:14 pm on 04 Nov 20 after flying non-stop from France.
— Indian Air Force (@IAF_MCC) November 4, 2020 " class="align-text-top noRightClick twitterSection" data="
">Second batch of IAF #Rafale aircraft arrived in India at 8:14 pm on 04 Nov 20 after flying non-stop from France.
— Indian Air Force (@IAF_MCC) November 4, 2020Second batch of IAF #Rafale aircraft arrived in India at 8:14 pm on 04 Nov 20 after flying non-stop from France.
— Indian Air Force (@IAF_MCC) November 4, 2020
ಮೂರು ಯುದ್ಧ ವಿಮಾನಗಳು ಫ್ರಾನ್ಸ್ನಿಂಧ ತಡೆರಹಿತವಾಗಿ ಭಾರತದವರೆಗೆ ಹಾರಾಟ ನಡೆಸಿ, ರಾತ್ರಿ 8:14ಕ್ಕೆ ಬಂದಿಳಿದಿವೆ. ಫ್ರಾನ್ಸ್ನೊಂದಿಗೆ 59 ಸಾವಿರ ಕೋಟಿ ರೂ. ವೆಚ್ಚದಲ್ಲಿ ಒಟ್ಟು 36 ರಫೇಲ್ ವಿಮಾನಗಳ ಒಪ್ಪಂದ ಮಾಡಿಕೊಳ್ಳಲಾಗಿದ್ದು, 2023ರವೇಳಗೆ ಈ ಎಲ್ಲ ಯುದ್ಧ ವಿಮಾನಗಳು ಭಾರತದ ಬತ್ತಳಿಕೆ ಸೇರಿಕೊಳ್ಳಲಿವೆ.
ನವೆಂಬರ್ ಮೊದಲ ವಾರದಲ್ಲಿ ಮತ್ತೆ 3 - 4 ರಫೇಲ್ ಜೆಟ್ ಭಾರತಕ್ಕೆ!
ಗುಜರಾತ್ನ ಜಾಮ್ನಗರ ವಾಯುನೆಲೆಗೆ ಇವು ಬಂದು ಇಳಿದಿವೆ ಎಂದು ಹೇಳಲಾಗುತ್ತಿದ್ದು, ನಾಳೆ ಹರಿಯಾಣದ ಅಂಬಾಲಾ ವಾಯುನೆಲೆಗೆ ಸೇರಿಕೊಳ್ಳಲಿವೆ. ತದನಂತರ ಅಧಿಕೃತವಾಗಿ ವಾಯುಸೇನೆಗೆ ಹಸ್ತಾಂತರ ಮಾಡುವ ಕಾರ್ಯ ನಡೆಯಲಿದೆ. ಫ್ರಾನ್ಸಿನ ಡಸಾಲ್ಟ್ ಸಂಸ್ಥೆಯಿಂದ 2016ರಲ್ಲಿ 59 ಸಾವಿರ ಕೋಟಿ ರೂ.ಗಳಿಗೆ 36 ಯುದ್ಧ ವಿಮಾನ ಖರೀದಿ ಮಾಡಿತ್ತು. ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು.
ಮೊದಲ ಬ್ಯಾಚ್ನ ಯುದ್ಧ ವಿಮಾನಗಳನ್ನ ಈಗಾಗಲೇ ಲಡಾಖ್ನಲ್ಲಿ ನಿಯೋಜನೆ ಮಾಡಲಾಗಿದೆ. ಮೊದಲನೇ ಹಂತದ 10 ರಫೇಲ್ಗಳ ಪೈಕಿ 5 ವಿಮಾನಗಳು ಫ್ರಾನ್ಸ್ನಲ್ಲಿದ್ದು, ಅಲ್ಲೇ ಭಾರತೀಯ ಪೈಲಟ್ಗಳು ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಮುಂದಿನ ವರ್ಷ ಮಾರ್ಚ್ ವೇಳೆಗೆ ಅವರ ತರಬೇತಿ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ.