ETV Bharat / bharat

ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ದಂಪತಿಗೆ ಮತ್ತೊಂದು ಕಂಟಕ.. ದಂಡ ಪಾವತಿಸದಿದ್ರೆ? - ಸೆಬಿ

ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ದಂಪತಿಗೆ ಮತ್ತೊಂದು ಕಂಟಕ ಎದುರಾಗಿದೆ. ನಿಯಮ ಉಲ್ಲಂಘಿಸಿದ್ದಕ್ಕೆ ಸೆಬಿ ಮೂರು ಲಕ್ಷ ರೂಪಾಯಿ ದಂಡ ವಿಧಿಸಿದೆ.

ಶಿಲ್ಪಾಶೆಟ್ಟಿ ದಂಪತಿ
ಶಿಲ್ಪಾಶೆಟ್ಟಿ ದಂಪತಿ
author img

By

Published : Jul 29, 2021, 9:40 AM IST

ಮುಂಬೈ: ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಹಾಗೂ ಪತಿ ರಾಜ್​ಕುಂದ್ರಾ ಅವರ ಕಂಪನಿ ವಿಯಾನ್​ ಇಂಡಸ್ಟ್ರೀಸ್ ಮಾಹಿತಿ ( ಪ್ರಿಫರೆಂಶಿಯಲ್ ಅಲಾಟ್ ಮೆಂಟ್) ನೀಡುವಲ್ಲಿ ವಿಳಂಬ ಮಾಡಿದ್ದಕ್ಕೆ ಸೆಬಿ ಮೂರು ಲಕ್ಷ ರೂ. ದಂಡ ವಿಧಿಸಿದೆ.

ಯಾವುದೇ ಕಂಪನಿಯು ಸ್ಟಾಕ್​ ಎಕ್ಸ್​ಚೇಂಜ್​ಗಳನ್ನು ಕಡ್ಡಾಯವಾಗಿ ಬಹಿರಂಗಪಡಿಸಬೇಕು. ಆದರೆ, ವಿಯಾನ್​ ಕಂಪನಿ ಮೂರು ವರ್ಷಗಳವರೆಗೆ ವಿಳಂಬ ಮಾಡಿದೆ. ಈ ಹಿನ್ನೆಲೆ ಸೆಬಿ ದಂಡ ವಿಧಿಸಿದ್ದು, 45 ದಿನಗಳೊಳಗೆ ಪಾವತಿಸುವಂತೆ ಸೂಚಿಸಿದೆ.

ತನಿಖೆ ಕೈಗೊಂಡಿದ್ದ ಲೆಕ್ಕ ಪರಿಶೋಧಕರು

ಸೆಕ್ಯುರಿಟೀಸ್ ಅಂಡ್ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ), 2013 ಸೆಪ್ಟೆಂಬರ್ 01ರಿಂದ 2015 ರ ಡಿಸೆಂಬರ್ 23 ರ ಅವಧಿಯಲ್ಲಿ ವಿಯಾನ್ ಇಂಡಸ್ಟ್ರೀಸ್ ಲಿಮಿಟೆಡ್ (ಹಿಂದೆ ಹಿಂದೂಸ್ತಾನ್ ಸೇಫ್ಟಿ ಗ್ಲಾಸ್ ಇಂಡಸ್ಟ್ರೀಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು) ನ ವ್ಯಾಪಾರ / ವ್ಯವಹಾರಗಳ ಬಗ್ಗೆ ತನಿಖೆ ನಡೆಸಿತ್ತು. ತನಿಖೆಯಲ್ಲಿ ವಿಯಾನ್ ಇಂಡಸ್ಟ್ರೀಸ್ ಲಿಮಿಟೆಡ್, ಸೆಬಿಯ (ಆಂತರಿಕ ವ್ಯಾಪಾರ ನಿಷೇಧ) ನಿಯಮಗಳ 7 (2) (ಎ) ಮತ್ತು 7 (2) (ಬಿ) ನಿಬಂಧನೆಗಳನ್ನು ಉಲ್ಲಂಘಿಸಿವೆ ಎಂದು ತಿಳಿದು ಬಂದಿತ್ತು.

ಸೆಬಿ ಪ್ರಕಾರ, 2015 ರಲ್ಲಿ, ವಿಯಾನ್ ಇಂಡಸ್ಟ್ರೀಸ್ ನಾಲ್ವರಿಗೆ 5 ಲಕ್ಷ ಈಕ್ವಿಟಿ ಷೇರುಗಳನ್ನು ಆದ್ಯತೆಯ ಮೇರೆಗೆ ಹಂಚಿಕೆ ಮಾಡಿದೆ. ಇದರಲ್ಲಿ, ಕಂಪನಿಯು ಕುಂದ್ರಾ ಮತ್ತು ಶೆಟ್ಟಿ ಅವರಿಗೆ ತಲಾ 128,800 ಈಕ್ವಿಟಿ ಷೇರುಗಳನ್ನು ಹಂಚಿದೆ. ಸೆಬಿಯ ಇನ್ಸೈಡರ್ ಟ್ರೇಡಿಂಗ್ ರೂಲ್ಸ್, 2015 ರ ರೆಗ್ಯುಲೇಶನ್ 7 (2) (ಎ) ಪ್ರಕಾರ, ಕಂಪನಿಯ ಪ್ರವರ್ತಕರು ಕಂಪನಿಗೆ ತಮ್ಮ ವಹಿವಾಟನ್ನು ಎರಡು ದಿನಗಳಲ್ಲಿ ಬಹಿರಂಗಪಡಿಸಬೇಕಿತ್ತು.

ಕ್ರೈಂ ಬ್ರಾಂಚ್​ನಿಂದ ತನಿಖೆ ಮತ್ತಷ್ಟು ಚುರುಕು

ಅಶ್ಲೀಲ ಚಿತ್ರಗಳ ನಿರ್ಮಾಣ ಸಂಬಂಧ ಜುಲೈ 19 ರಂದು ಮುಂಬೈ ಪೊಲೀಸರು ರಾಜ್​ಕುಂದ್ರಾ ಸೇರಿ 11 ಜನರನ್ನು ಬಂಧಿಸಿದ್ದರು. ಈ ಮಧ್ಯೆ ರಾಜ್​ ಕುಂದ್ರಾ ಮತ್ತು ಶಿಲ್ಪಾಶೆಟ್ಟಿ ಅವರ ಆರ್ಥಿಕ ಮೂಲ ಮತ್ತು ಅಶ್ಲೀಲ ಚಿತ್ರಗಳ ದಂಧೆ ಪ್ರಕರಣದಲ್ಲಿ ಅವರು ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸಲು ಮುಂಬೈ ಕ್ರೈಂ ಬ್ರಾಂಚ್​ ಹಣಕಾಸು ಲೆಕ್ಕ ಪರಿಶೋಧಕರನ್ನು ನೇಮಿಸಿದೆ.

ತನಿಖೆಯಲ್ಲಿ ಶಿಲ್ಪಾಶೆಟ್ಟಿ ಮತ್ತು ರಾಜ್​ಕುಂದ್ರಾ ಅವರ ಜಂಟಿ ಖಾತೆಯಿಂದ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿದೆ ಎಂದು ತಿಳಿದು ಬಂದಿದೆ. ಅಶ್ಲೀಲ ವಿಡಿಯೋ ಅಪ್ಲೋಡ್​​ ಮಾಡುತ್ತಿದ್ದ ಆ್ಯಪ್​ಗಳಿಂದ ಈ ಆದಾಯ ಬಂದಿದೆ ಎಂದು ಅಪರಾಧ ಶಾಖೆ ಶಂಕಿಸಿದೆ. ಆ್ಯಪ್‌ಗಳಿಂದ ಗಳಿಸಿದ ಹಣವನ್ನು ಬಿಟ್‌ಕಾಯಿನ್‌ಗಳಲ್ಲಿ ಹೂಡಿಕೆ ಮಾಡಲಾಗಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.