ETV Bharat / bharat

ಮಣಿಪುರ: ಮೋರೆಹ ಗಡಿ ಪಟ್ಟಣದಲ್ಲಿ ಉಗ್ರರ ಗುಂಡಿಗೆ ಎಸ್‌ಡಿಪಿಒ ಬಲಿ

ಬುಲೆಟ್​ ತಗುಲಿದ್ದ ಎಸ್​ಡಿಪಿಒ ಚಿಂಗ್ತಮ್​ ಆನಂದ್ ಅವರನ್ನು ಮೋರೆಹದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ಅಲ್ಲಿ ಅವರು ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

SDPO shot dead by militants in Manipur More
ಮೋರೆ ಗಡಿ ಪಟ್ಟಣದಲ್ಲಿ ಉಗ್ರರ ಗುಂಡಿಗೆ ಎಸ್‌ಡಿಪಿಒ ಬಲಿ
author img

By ETV Bharat Karnataka Team

Published : Oct 31, 2023, 2:45 PM IST

ಇಂಫಾಲ (ಮಣಿಪುರ): ಶಂಕಿತ ಬುಡಕಟ್ಟು ಉಗ್ರಗಾಮಿಗಳ ಗುಂಡಿಗೆ ಉಪವಿಭಾಗದ ಪೊಲೀಸ್​ ಅಧಿಕಾರಿಯೊಬ್ಬರು ಸಾವನ್ನಪ್ಪಿರುವ ಘಟನೆ ಮಣಿಪುರದ ತೆಂಗನೌಪಾಲ್​ ಜಿಲ್ಲೆಯ ಮೋರೆಹ ಎಂಬಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಕಿ- ಝೋ ಸಮುದಾಯದ ಜನರ ಪ್ರಾಬಲ್ಯವಿರುವ ಈಸ್ಟರ್ನ್​ ಗ್ರೌಂಡ್​ನಲ್ಲಿ ಹೊಸದಾಗಿ ನಿರ್ಮಿಸಲಾದ ಹೆಲಿಪ್ಯಾಡ್​ ಅನ್ನು ಪರಿಶೀಲನೆ ನಡೆಸುತ್ತಿದ್ದ ವೇಳೆ ದಂಗೆಕೋರರ ಗುಂಪೊಂದು ಪೊಲೀಸರ ಮೇಲೆ ಗುಂಡು ಹಾರಿಸಿದೆ. ಈ ವೇಳೆ ಮೋರೆಹ ಎಸ್​ಡಿಪಿಒ ಚಿಂಗ್ತಮ್​ ಆನಂದ್​ ಅವರಿಗೆ ಬುಲೆಟ್​ ತಗುಲಿದೆ. ತಕ್ಷಣ ಅವರನ್ನು ಮೋರೆಹದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರು ಕೊನೆಯುಸಿರೆಳೆದರು. ಉಗ್ರರನ್ನು ಬಂಧಿಸಲು ಆ ಪ್ರದೇಶದಲ್ಲಿ ತೀವ್ರ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಿಶೇಷವಾಗಿ ಮೊರೆಹದಲ್ಲಿ ನೆಲೆಗೊಂಡಿರುವ ಹಲವಾರು ನಾಗರಿಕ ಸಮಾಜ ಸಂಘಟನೆಗಳು ಗಡಿ ಪಟ್ಟಣದಿಂದ ರಾಜ್ಯ ಪಡೆಗಳನ್ನು ತೆಗೆದುಹಾಕಲು ಒತ್ತಾಯಿಸಿದ ವಾರದ ನಂತರ ಈ ಘಟನೆ ನಡೆದಿದೆ. ಮಣಿಪುರದ ಪೊಲೀಸರು ಕಳೆದೆರಡು ದಿನಗಳಲ್ಲಿ, ಮೈಟೈಸ್​ನ ಖಾಲಿ ನಿವಾಸಗಳಿಂದ ಪೀಠೋಪಕರಣಗಳು ಹಾಗೂ ಇತರ ಗೃಹೋಪಯೋಗಿ ವಸ್ತುಗಳನ್ನು ಕದ್ದಿದ್ದಾರೆ ಹಾಗೂ ಅಕ್ರಮವಾಗಿ ಭಾರತದ ಗಡಿಯನ್ನು ದಾಟಿದ್ದಾರೆ ಎನ್ನುವ ಆರೋಪದ ಮೇಲೆ 10ಕ್ಕೂ ಹೆಚ್ಚು ಮ್ಯಾನ್ಮಾರ್​ ಪ್ರಜೆಗಳನ್ನು ಬಂಧಿಸಿದ್ದಾರೆ.

ಮೇ ತಿಂಗಳಲ್ಲಿ ರಾಜ್ಯದಲ್ಲಿ ನಡೆದಿದ್ದ ಹಿಂಸಾಚಾರದಿಂದ ಸುಟ್ಟು ಕರಕಲಾದ ಮನೆಗಳಿಂದ ಪೀಠೋಪಕರಣಗಳು ಹಾಗೂ ಎಲೆಕ್ಟ್ರಾನಿಕ್​ ವಸ್ತುಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಮೂವರು ಮ್ಯಾನ್ಮಾರ್​ ಪ್ರಜೆಗಳ ಬಂಧನದ ಕುರಿತು ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಎನ್​ ಬಿರೇನ್​ ಸಿಂಗ್​, "ಮೊರೆಹ ಪಟ್ಟಣದಲ್ಲಿ ರಾಜ್ಯ ಪೊಲೀಸ್​ ಹಾಗೂ ಕಮಾಂಡೋಗಳ ನಿಯೋಜನೆಯ ವಿರುದ್ಧ ಕೆಲವು ನಿರ್ದಿಷ್ಟ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಇದು ನಡೆದಿದೆ." ಎಂದು ತಿಳಿಸಿದ್ದರು.

ಪರಿಶಿಷ್ಟ ಪಂಗಡದ (ಎಸ್​ಟಿ) ಸ್ಥಾನಮಾನಕ್ಕಾಗಿ ಬೇಡಿಕೆ ಇಟ್ಟು ಮೈತಿ ಸಮುದಾಯ ಗುಡ್ಡಗಾಡು ಜಿಲ್ಲೆಗಳಲ್ಲಿ, ಪ್ರತಿಭಟನೆ ನಡೆಸಿದ್ದಾಗ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದು, 180ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಣಿಪುರದ ಜನಸಂಖ್ಯೆಯ ಸುಮಾರು 53 ಶೇಕಡಾದಷ್ಟಿರುವ ಮೈತಿ ಸಮುದಾಯ ಇಂಫಾಲ್​ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ನಾಗಾಗಳು ಹಾಗೂ ಕುಕಿಗಳನ್ನು ಒಳಗೊಂಡಿರುವ ಬುಡಕಟ್ಟು ಜನಾಂಗದವರು ಶೇ 40ರಷ್ಟಿದ್ದು, ಹೆಚ್ಚಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ : ಮಣಿಪುರ ಹಿಂಸಾಚಾರ ಬಿಂಬಿಸುವ ವಿಡಿಯೋ, ಫೋಟೋ ಪ್ರಸಾರಕ್ಕೆ ನಿಷೇಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.